Darshan Case: ಪವಿತ್ರ ರವರಿಗೆ ಬಿಡಿ – ಸೋನು ಗೌಡ ರವರಿಗೆ ರೇಣುಕಾಸ್ವಾಮಿ ಏನು ಮಾಡಿದ್ದಾರೆ ಗೊತ್ತೇ? ಕೊನೆಗೆ ಹೊರಬಂದ ಸೋನು ಗೌಡ ಮ್ಯಾಟರ್!

Darshan Case: ಪವಿತ್ರ ಗೌಡ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟ ಆಗಿರುವಂತಹ ಚಾಲನೆ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರೇಣುಕ ಸ್ವಾಮಿಯ ಪ್ರಕರಣದಲ್ಲಿ ಈಗಾಗಲೇ ಅವರನ್ನು ಸೇರಿಸಿ ಒಟ್ಟಾರೆ 17 ಮಂದಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಮುಂದಿನ ಜುಲೈ ನಾಲ್ಕರವರೆಗೆ ಜೈಲಿನಲ್ಲಿ ಇರಬೇಕಾಗಿರುತ್ತದೆ. ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಈ ಚರ್ಚೆ ಅನ್ನೋದು ಕೇವಲ ನಮ್ಮ ಕರ್ನಾಟಕದ ಮಾಧ್ಯಮಗಳಲ್ಲಿ ಮಾತ್ರವಲ್ಲದೆ ದೇಶ ವಿದೇಶದ ಮಾಧ್ಯಮಗಳಲ್ಲಿ ಕೂಡ ಚರ್ಚೆ ಆಗ್ತಾ ಇದೆ ಅನ್ನೋದೇ ಬೇಸರದ ವಿಚಾರವಾಗಿದೆ.

ಪ್ರತಿದಿನ ಜೈಲು ಪಾಲು ಆಗಿರುವವರ ಮನೆಯವರು ಪ್ರತಿದಿನ ಈಗ ಪರಪ್ಪನ ಅಗ್ರಹಾರಕ್ಕೆ ಬಂದು ಅವರನ್ನು ಭೇಟಿ ಆಗುವಂತಹ ಪರಂಪರೆ ಪ್ರಾರಂಭವಾಗಿದೆ ಎಂದು ಹೇಳಬಹುದಾಗಿದೆ. ಇನ್ನು ನಿಮಗೆ ತಿಳಿದಿರುವಂತೆ ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ ಆಗಿದ್ದಂತಹ ಸೋನು ಗೌಡ ಅವರು ಕೂಡ ಅನಧಿಕೃತವಾಗಿ ಮಗುವನ್ನು ದತ್ತು ಪಡೆದುಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ಅವರನ್ನು ಕೂಡ ಜೈಲಿಗೆ ಸೇರಿಸಲಾಗಿತ್ತು ಅನ್ನೋದನ್ನ ನಾವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಒಂದಲ್ಲ ಒಂದು ಕಾರಣಗಳಿಗಾಗಿ ವಿವಾದಕ್ಕೆ ಒಳಗಾಗುತ್ತಿದ್ದಂತಹ ಸೋನು ಗೌಡ ಈಗ ಒಂದು ಶಾಕಿಂಗ್ ವಿಚಾರದ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಬಹುದಾಗಿದೆ. ಹೌದು ರೇಣುಕಾ ಸ್ವಾಮಿಯ ವಿಚಾರದ ಬಗ್ಗೆ ಸೋನು ಗೌಡ ಅವರು ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಇದನ್ನು ಕೇಳಿದರೆ ಇಷ್ಟೆಲ್ಲ ನಡೆದಿತ್ತಾ ಅನ್ನೋದಾಗಿ ನೀವು ಕೂಡ ಆಶ್ಚರ್ಯ ಪಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಸೋನು ಗೌಡ ಅವರಿಗೂ ಕೂಡ ರೇಣುಕಾ ಸ್ವಾಮಿಯಿಂದ ಮೆಸೇಜ್ ಬಂದಿದ್ಯಂತೆ!

ಸೋನು ಗೌಡ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ತಮ್ಮ ವೈಯಕ್ತಿಕ ಜೀವನದ ಪ್ರತಿಯೊಂದು ಕ್ಷಣಗಳನ್ನು ಕೂಡ ವಿಡಿಯೋ ಮಾಡಿ ಅದನ್ನು ಪೋಸ್ಟ್ ಮಾಡುವಂತಹ ಕೆಲಸವನ್ನು ಮಾಡ್ತಾ ಇದ್ದಾರೆ. ದರ್ಶನ್ ರವರ ಪ್ರಕರಣ ಹೊರ ಬರುತ್ತಿದ್ದಂತೆ ಆ ರೇಣುಕಾ ಸ್ವಾಮಿಯ ಖಾತೆಯಿಂದ ನನಗೂ ಕೂಡ ಕೆಟ್ಟ ರೀತಿಯ ಮೆಸೇಜ್ ಬಂದಿದೆ ಎನ್ನುವುದಾಗಿ ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ. ಕೇವಲ ಸೋನು ಗೌಡ ಮಾತ್ರ ಅಲ್ಲ ಸಾಕಷ್ಟು ಕಿರುತೆರೆಯ ನಟಿಯರು ಹಾಗೂ ಕಲಾವಿದರು ಕೂಡ ಈ ರೀತಿ ಮೆಸೇಜ್ ಬಂದಿದೆ ಅನ್ನುವುದಾಗಿ ಇತ್ತೀಚಿನ ದಿನಗಳಲ್ಲಿ ತಮ್ಮ ಅಭಿಪ್ರಾಯವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಈ ಖಾತೆಯ ಬಗ್ಗೆ ಇರುವಂತಹ ಮಾಹಿತಿ ಎಷ್ಟು ಸತ್ಯ ಅಥವಾ ಸುಳ್ಳು ಅನ್ನೋದನ್ನ ಪೊಲೀಸರೇ ತಿಳಿಸಬೇಕಾಗಿದೆ. ಆದರೆ ಈ ಮೂಲಕ ತಿಳಿದು ಬರುತ್ತಿರುವುದು ಏನಂದರೆ ಕೇವಲ ಪವಿತ್ರ ಗೌಡ ಮಾತ್ರ ಅಲ್ಲ ಸಾಕಷ್ಟು ಜನ ನಟಿಯರಿಗೆ ಈ ರೀತಿಯ ಕೆಟ್ಟ ಮೆಸೇಜುಗಳು ಆತನಿಂದ ಅಥವಾ ಆತನ ಖಾತೆಯಂದು ಹೇಳಲ್ಪಡುತ್ತಿರುವಂತಹ ಅಕೌಂಟಿಂದ ಹೋಗಿದೆ ಅನ್ನೋದಂತು ಸತ್ಯ ಅಂತ ಹೇಳಬಹುದಾಗಿದೆ. ಸದ್ಯಕ್ಕೆ ಪ್ರತಿಯೊಬ್ಬರೂ ಕೂಡ ದರ್ಶನ್ ರವರ ಪ್ರಕರಣದಲ್ಲಿ ತೀರ್ಪು ಏನಾಗಲಿದೆ ಅನ್ನುವುದಾಗಿ ಕಾತರದಿಂದ ಕಾಯುತ್ತಿದ್ದಾರೆ.

Comments are closed.