Laptop Deal: ಲ್ಯಾಪ್ಟಾಪ್ ಮಾರುಕಟ್ಟೆ ಶೇಕ್- ಭಾರತಕ್ಕೆ ಬಂದ ಇನ್‌ಫಿನಿಕ್ಸ್ ಜೀರೋಬುಕ್ ಆಲ್ಟ್ರಾ; ಬೆಲೆ, ವಿಶೇಷತೆಯ ಡೀಟೇಲ್ಸ್!

Laptop Deal: ಭಾರತ ಡಿಜಿಟಲ್ ರೂಪದಲ್ಲಿ ಕೂಡ ಸಾಕಷ್ಟು ವೇಗದ ಬೆಳವಣಿಗೆಯನ್ನು ಜಾಗತಿಕವಾಗಿ ಹೊಂದುತ್ತಿರುವ ದೇಶವಾಗಿದೆ. ಹೀಗಾಗಿ ಬಹುತೇಕ ಪ್ರಪಂಚದ ಎಲ್ಲಾ ಪ್ರತಿಷ್ಠಿತ ಕಂಪನಿಗಳು ಕೂಡ ಭಾರತ ದೇಶದ ಮಾರುಕಟ್ಟೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡುವಂತಹ ಆಸಕ್ತಿಯನ್ನು ಹೊಂದಿದ್ದು ಇಲ್ಲಿ ಒಂದು ಬಾರಿ ಯಶಸ್ಸನ್ನು ಪಡೆದುಕೊಂಡರೆ ಉತ್ತಮ ರೀತಿಯಲ್ಲಿ ಹಣ ಗಳಿಸಬಹುದೆಂದು ಕಂಪನಿಗಳು ಚೆನ್ನಾಗಿ ತಿಳಿದುಕೊಂಡಿವೆ. ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರುವುದು ಹೊಸದಾಗಿ ಲಾಂಚ್ ಆಗಿರುವಂತಹ ಲ್ಯಾಪ್ಟಾಪ್ ಬಗ್ಗೆ.

ಇನ್‌ಫಿನಿಕ್ಸ್ ಜೀರೋಬುಕ್ ಆಲ್ಟ್ರಾ ಲ್ಯಾಪ್‌ಟಾಪ್‌ !

ಭಾರತದ ಮಾರುಕಟ್ಟೆಯಲ್ಲಿ ಇನ್‌ಫಿನಿಕ್ಸ್ ಜೀರೋಬುಕ್ ಆಲ್ಟ್ರಾ (Infinix Zero Book Ultra) ಲ್ಯಾಪ್‌ಟಾಪ್‌ ಕೂಡ ಇತ್ತೀಚಿಗಷ್ಟೇ ಲಾಂಚ್ ಆಗಿದೆ. ವಿಂಡೋಸ್ 11 ಸೇರಿದಂತೆ ಸಾಕಷ್ಟು ಫೀಚರ್ ಗಳನ್ನ ನೀವು ಈ ಲ್ಯಾಪ್ಟಾಪ್ ನಲ್ಲಿ ಕಾಣಬಹುದಾಗಿದೆ. 15.6 ಇಂಚಿನ ಫುಲ್ ಹೆಚ್ ಡಿ ಡಿಸ್ಪ್ಲೇ ಅನ್ನು ನೀವು ಇದರಲ್ಲಿ ಪಡೆದುಕೊಳ್ಳಬಹುದು. 400 ನಿಟ್ಸ್ ಬ್ರೈಟ್ನೆಸ್ ಅನ್ನು ನೀವು ಈ ಲ್ಯಾಪ್ಟಾಪ್ ನಲ್ಲಿ ಪಡೆದುಕೊಳ್ಳಬಹುದಾಗಿದೆ. Intel core ultra 9 processor ನಿಂದ ಇದು ಕಾರ್ಯಾಚರಣೆಗೊಳ್ಳಲಿದೆ. AI ಆಧಾರಿತ ಅಡ್ವಾನ್ಸ್ ಫೀಚರ್ ಗಳನ್ನು ಕೂಡ ನೀವು ಈ ಲ್ಯಾಪ್ಟಾಪ್ ನಲ್ಲಿ ಕಾಣಬಹುದಾಗಿದೆ. ಗೇಮಿಂಗ್ ಗಾಗಿ ಈ ಲ್ಯಾಪ್ಟಾಪ್ ನಲ್ಲಿ 60fps ನೀಡಲಾಗಿದೆ.

ಹೀಟ್ ಆಗೋದನ್ನ ತಡೆಗಟ್ಟಲು ಇದರಲ್ಲಿ ಐಸ್ ಸ್ಟೋರ್ಮ್ 2.0 ಕೂಲಿಂಗ್ ಸಿಸ್ಟಮ್ ಅನ್ನು ಕೂಡ ಅಳವಡಿಸಲಾಗಿದೆ. ಎರಡು ಯುಎಸ್ಬಿ ಟೈಪ್ ಸಿ ಪೋರ್ಟ್ ಇದರಲ್ಲಿ ಕಾಣಬಹುದಾಗಿದೆ. 3.5 ಎಂ ಎಂ ಆಡಿಯೋ ಜಾಕ್ HDMI 1.4 ಪೋರ್ಟ್ ಅನ್ನು ಕೂಡ ಈ ಲ್ಯಾಪ್ಟಾಪ್ ನಲ್ಲಿ ಕಾಣಬಹುದಾಗಿದೆ. ಈ ಲ್ಯಾಪ್ಟಾಪ್ ನಲ್ಲಿ ಉತ್ತಮ ಬ್ಲೂಟೂತ್ ಸಂಪರ್ಕವನ್ನು ಕೂಡ ಅಳವಡಿಸಲಾಗಿದೆ.

ವಿಡಿಯೋ ಕಾಲ್ ಮಾಡೋದಕ್ಕೆ ಇನ್‌ಫಿನಿಕ್ಸ್ ಜೀರೋಬುಕ್ ಆಲ್ಟ್ರಾ ಲ್ಯಾಪ್‌ಟಾಪ್‌ ನಲ್ಲಿ ಉತ್ತಮ ಕ್ವಾಲಿಟಿಯ ಕ್ಯಾಮೆರಾವನ್ನು ನೀವು ಕಾಣಬಹುದಾಗಿದೆ. ಡಿಟಿಎಸ್ ಆಡಿಯೋ ಕೂಡ ಇದರಲ್ಲಿದೆ. ಇನ್‌ಫಿನಿಕ್ಸ್ ಜೀರೋಬುಕ್ ಆಲ್ಟ್ರಾ ಲ್ಯಾಪ್‌ಟಾಪ್‌ ನಲ್ಲಿ ಬ್ಯಾಟರಿ ವಿಚಾರಕ್ಕೆ ಬಂದರೆ 70wh ಬ್ಯಾಟರಿಯನ್ನು ನಾವು ಕಾಣಬಹುದಾಗಿದೆ. 100 ವ್ಯಾಟ್ ನ ವೇಗದ ಚಾರ್ಜಿಂಗ್ ಅನ್ನು ಕೂಡ ನೀವು ಲ್ಯಾಪ್ಟಾಪ್ ನಲ್ಲಿ ಪಡೆದುಕೊಳ್ಳಬಹುದಾಗಿದೆ. 13 ಗಂಟೆಗಳವರೆಗೆ ವಿಡಿಯೋ ಪ್ಲೇ ಬ್ಯಾಕ್ ಹಾಗೂ 10 ಗಂಟೆಗಳವರೆಗೆ ಸುಲಭ ರೂಪದಲ್ಲಿ ಬ್ರೌಸಿಂಗ್ ಮಾಡಬಹುದು ಎನ್ನುವಂತಹ ಮಾಹಿತಿಯನ್ನು ಕಂಪನಿ ಹೇಳಿದೆ. ಇದರ ಬೆಲೆ ಕೂಡ 79 ಸಾವಿರ ರೂಪಾಯಿಗಳ ಆಸುಪಾಸಿನಲ್ಲಿ ಕಂಡುಬರುತ್ತದೆ. ಖಂಡಿತವಾಗಿ ಲ್ಯಾಪ್ಟಾಪ್ ಮಾರುಕಟ್ಟೆಯಲ್ಲಿ ಎಷ್ಟೊಂದು ಉತ್ತಮ ಅಡ್ವಾನ್ಸ್ ಫೀಚರ್ಗಳನ್ನು ಹೊಂದಿರುವಂತಹ ಹಾಗೂ ಕೈಗೆಟಿಕುವ ಬೆಲೆಯಲ್ಲಿ ಬದುಕುವಂತಹ ಈ ಲ್ಯಾಪ್ಟಾಪ್ ಯಾವುದೇ ಅನುಮಾನವಿಲ್ಲದೆ ಲ್ಯಾಪ್ಟಾಪ್ ಪ್ರಿಯರಿಗೆ ಬೇಕಾಗಿರುವಂತಹ ರೀತಿಯಲ್ಲಿ ಸಿಕ್ತಾ ಇದೆ ಅಂತ ಹೇಳಬಹುದು. ಒಂದು ವೇಳೆ ನೀವು ಕೂಡ ಖರೀದಿ ಮಾಡುವಂತಹ ಆಸಕ್ತಿಯನ್ನು ಹೊಂದಿದ್ದರೆ ಈ ಲ್ಯಾಪ್ಟಾಪ್ ಬಗ್ಗೆ ಇರುವಂತಹ ಈ ಮಾಹಿತಿಯನ್ನು ಬಳಸಿಕೊಳ್ಳಬಹುದಾಗಿದೆ.

Comments are closed.