Credit card: ಇಂತವರು ಕ್ರೆಡಿಟ್ ಕಾರ್ಡ್ ತಗೊಂಡ್ರೆ ಸಿಗಲಿದೆ ವಿಶೇಷ ಬೆನಿಫಿಟ್ಸ್ ಮತ್ತೆ ಸಾಕಷ್ಟು ಕೊಡುಗೆಗಳು!

Credit card: ಇತ್ತೀಚಿನ ದಿನಗಳಲ್ಲಿ ನಮ್ಮ ಭಾರತ ದೇಶದಲ್ಲಿ ಟ್ರಾನ್ಸಾಕ್ಷನ್ ವಿಭಾಗದಲ್ಲಿ ಯುಪಿಐ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಎನ್ನುವಂತಹ ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನ ಗಳನ್ನು ಜಾರಿಗೆ ತರಲಾಗಿದೆ. ಆದರೆ ಇವುಗಳು ಬಹುತೇಕವಾಗಿ ಯುವಜನತೆಯನ್ನು ಕೇಂದ್ರೀಕರಿಸಿಕೊಂಡು ಜಾರಿಗೆ ಬಂದಿರುವಂತಹ ಟೆಕ್ನಾಲಜಿಗಳು ಆಗಿವೆ ಎಂಬುದಾಗಿ ಪ್ರತಿಯೊಬ್ಬರು ಮಾತನಾಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ಗಳನ್ನು ಹಿರಿಯ ನಾಗರಿಕರು ಕೂಡ ಬಳಸಲು ಪ್ರಾರಂಭ ಮಾಡುತ್ತಿದ್ದು ಅವರಿಗೂ ಕೂಡ ಇದು ಸಾಕಷ್ಟು ರೀತಿಯಲ್ಲಿ ಉಪಯೋಗಕಾರಿಯಾಗಿದೆ. ಇವತ್ತಿನ ಈ ಲೇಖನದ ಮೂಲಕ ಹಿರಿಯ ನಾಗರಿಕರು ಯಾಕಾಗಿ ಕ್ರೆಡಿಟ್ ಕಾರ್ಡ್ ಅನ್ನು ಬಳಸಬೇಕು ಹಾಗೂ ಅದರಿಂದ ಅವರಿಗೆ ಸಿಗುವಂತಹ ಆರ್ಥಿಕ ಪ್ರಯೋಜನಗಳು ಏನು ಎನ್ನುವಂತಹ ಪ್ರತಿಯೊಂದು ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ.

ಸೆಕ್ಯೂರಿಟಿ ಮತ್ತು ಅನುಕೂಲತೆಗಳು!

ಸುರಕ್ಷತೆಯ ದೃಷ್ಟಿಯಲ್ಲಿ ಖಂಡಿತವಾಗಿ ಕ್ರೆಡಿಟ್ ಕಾರ್ಡು ಅತ್ಯಂತ ಲಾಭದಾಯಕ ಎಂದು ಹೇಳಬಹುದಾಗಿದೆ. ಜನರು ಹೆಚ್ಚಾಗಿರುವಂತಹ ಪ್ರದೇಶಗಳಲ್ಲಿ ಕ್ಯಾಶ್ ತೆಗೆದುಕೊಂಡು ಹೋದರೆ ಕಳ್ಳತನ ಆಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಆದರೆ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ತೆಗೆದುಕೊಂಡು ಹೋದರೆ ಅವುಗಳಿಗಿಂತ ಹೆಚ್ಚಿನ ಸುರಕ್ಷತೆಯನ್ನು ನಾವು ಕಾಣಬಹುದಾಗಿದೆ. ಟ್ರಾನ್ಸಾಕ್ಷನ್ ವಿಚಾರದಲ್ಲಿ ಹಣಕ್ಕಿಂತ ಹೆಚ್ಚಾಗಿ ಕ್ರೆಡಿಟ್ ಕಾರ್ಡ್ ಅತ್ಯಂತ ಸುರಕ್ಷಿತ ಬಳಕೆಯಾಗಿದೆ.

ನಿನ್ನ ಜೀವನದಲ್ಲಿ ಅನಿರೀಕ್ಷಿತ ಹೆಚ್ಚಾಗಿರುತ್ತದೆ ಹೀಗಾಗಿ ಯಾವ ಸಂದರ್ಭದಲ್ಲಿ ಯಾವ ಎಮರ್ಜೆನ್ಸಿ ಬರುತ್ತದೆ ಎಂದು ಹೇಳಲಿಕ್ಕೆ ಸಾಧ್ಯವಿಲ್ಲ. ಆ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ನಿಮಗೆ ಸಾಲರೂಪದಲ್ಲಿ ಕೂಡ ಸಹಾಯಕ್ಕೆ ಬರಬಹುದಾದಂತಹ ಒಂದು ಸಾಧನವಾಗಿದೆ ಎಂದು ಹೇಳಬಹುದಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಬೇರೆಯವರ ಮೇಲೆ ಡಿಪೆಂಡ್ ಆಗುವುದಕ್ಕಿಂತ ನಿಮ್ಮ ಸ್ವಂತ ಕ್ರೆಡಿಟ್ ಕಾರ್ಡ್ ಮೂಲಕ ಹಣಕಾಸಿನ ವ್ಯವಹಾರವನ್ನು ನೀವು ಸುಲಭ ರೂಪದಲ್ಲಿ ಮಾಡಬಹುದಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಗಳಲ್ಲಿ ಬೇರೆಯವರ ಮೇಲಿನ ಅವಲಂಬನೆಗಿಂತ ನಿಮ್ಮ ಸ್ವಂತ ಯೋಜನೆ ನಿಮಗೆ ಸಹಾಯಕ್ಕೆ ಬರಬಹುದಾಗಿದೆ. ಆನ್ಲೈನ್ ಶಾಪಿಂಗ್ ಸೇರಿದಂತೆ ಪ್ರತಿಯೊಂದು ಪ್ರೀತಿಯ ಬುಕ್ಕಿಂಗ್ ಪರ್ಚೆಸಿಂಗ್ ಸೇರಿದಂತೆ ಎಲ್ಲಾ ಆರ್ಥಿಕ ವ್ಯವಹಾರಗಳನ್ನು ಕೂಡ ನೀವು ಕ್ರೆಡಿಟ್ ಕಾರ್ಡ್ ಮೂಲಕವೇ ಮಾಡಬಹುದಾದಂತಹ ಅವಕಾಶವನ್ನು ಹೊಂದಿರುತ್ತೀರಿ. ಆನ್ಲೈನ್ ಮೂಲಕ ವ್ಯವಹಾರಗಳನ್ನು ಸುರಕ್ಷಿತವಾಗಿ ನಡೆಸುವುದಕ್ಕೆ ಕ್ರೆಡಿಟ್ ಕಾರ್ಡ್ ಪೂರಕವಾಗಿದೆ.

ರಿವಾರ್ಡ್ ಗಳು ಹಾಗೂ ನಿಯಮಗಳು!

ಇನ್ನು ಕ್ರೆಡಿಟ್ ಕಾರ್ಡ್ ಬಳಸಿಕೊಂಡು ನೀವು ಪಡೆದುಕೊಳ್ಳುವಂತಹ ಸೇವೆ ಅಥವಾ ಖರೀದಿಸುವಂತಹ ವಸ್ತುಗಳ ಮೇಲೆ ನೀವು ಕ್ಯಾಶ್ ಬ್ಯಾಕ್ ಹಾಗು ಕೆಲವೊಂದು ಬಹುಮಾನಗಳನ್ನು ಕೂಡ ಪಡೆದುಕೊಳ್ಳುವಂತಹ ಅವಕಾಶ ಇದೆ. ದೈನಂದಿನ ಖರ್ಚುಗಳಿಗೆ ಕ್ರೆಡಿಟ್ ಕಾರ್ಡ್ ಬಳಸುವ ಮೂಲಕ ರಿಯಾಯಿತಿ ದರದಲ್ಲಿ ಕೂಡ ನೀವು ವಸ್ತುಗಳನ್ನು ಪಡೆಯುವುದರ ಮೂಲಕ ಉಳಿತಾಯವನ್ನು ಮಾಡಬಹುದಾಗಿದೆ.

ಕೊನೆಯಲ್ಲಿ ನೀವು ಒಬ್ಬ ಜವಾಬ್ದಾರಿಯುತ್ತ ಕ್ರೆಡಿಟ್ ಕಾರ್ಡ್ ಬಳಕೆದಾರನಾಗಿ ಕ್ರೆಡಿಟ್ ಕಾರ್ಡ್ ಬಳಸುವುದು ಉತ್ತಮವಾಗಿರುತ್ತದೆ. ಕ್ರೆಡಿಟ್ ಲಿಮಿಟ್ ಅನ್ನು ಪೂರ್ತಿಯಾಗಿ ಯಾವತ್ತೂ ಕೂಡ ಖರ್ಚು ಮಾಡಿಕೊಳ್ಳುವುದಕ್ಕೆ ಹೋಗಬೇಡಿ ಹಾಗೂ ಪ್ರಮುಖವಾಗಿ ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವ ಮೂಲಕ ಕ್ರೆಡಿಟ್ ಹಿಸ್ಟರಿಯನ್ನು ಕೂಡ ಚೆನ್ನಾಗಿ ನಿರ್ವಹಿಸುವುದನ್ನ ನೋಡಿಕೊಳ್ಳಿ. ಯಾವುದೇ ವಿಚಾರಕ್ಕೆ ನಿಮ್ಮ ಕ್ರೆಡಿಟ್ ಸ್ಕೋರ್, ಉತ್ತಮವಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ.

Comments are closed.