Phonepe: ಫೋನ್ ಪೇ ಬಳಕೆದಾರರಿಗೆ ಇಲ್ಲಿದೆ ನೋಡಿ ಗುಡ್ ನ್ಯೂಸ್; ಇನ್ ಮೇಲೆ ಸಿಗತ್ತೆ ಇಲ್ಲಿಂದನೂ ದುಡ್ಡು!

Phonepe: ಇತ್ತೀಚಿನ ವರ್ಷಗಳಲ್ಲಿ ನಿಮಗೆಲ್ಲರಿಗೂ ತಿಳಿದಿರುವಾಗ ನಮ್ಮ ಭಾರತ ದೇಶದಲ್ಲಿ ಆನ್ಲೈನ್ ಪೇಮೆಂಟ್ ಸೇವೆ ವೇಗವಾಗಿ ಹೆಚ್ಚುತ್ತಿದೆ ಎಂದು ಹೇಳಬಹುದು. ಪ್ರತಿಯೊಬ್ಬರು ಕೂಡ ಫೋನ್ ಪೇ ಗೂಗಲ್ ಪೇ ಎಂತಹ ಅಪ್ಲಿಕೇಶನ್ ಅನ್ನು ಹೆಚ್ಚಾಗಿ ತಮ್ಮ ಹಣದ ಟ್ರಾನ್ಸಾಕ್ಷನ್ ಗಾಗಿ ಬಳಸಿಕೊಳ್ಳುತ್ತಿದ್ದಾರೆ. ಇನ್ನು ವಿಶೇಷವಾಗಿ ನಾವು ಇವತ್ತಿನ ಈ ಲೇಖನದಲ್ಲಿ ಮಾತನಾಡುವುದಕ್ಕೆ ಹೊರಟಿರೋದು ಫೋನ್ ಪೇ ಬಗ್ಗೆ.

ಫೋನ್ ಪೇ ಅನ್ನು ಸಾಮಾನ್ಯವಾಗಿ ನಾವು ಕೇವಲ ಹಣವನ್ನು ಟ್ರಾನ್ಸಾಕ್ಷನ್ ಮಾಡೋದಕ್ಕೆ ಮಾತ್ರ ಬಳಸಿಕೊಳ್ಳುತ್ತಿದ್ದೇವೆ. ಆದರೆ ಇದರಲ್ಲಿ ಈಗ ನಾವು ಆರು ವಿಧದ ಸಾಲವನ್ನು ಕೂಡ ಪಡೆದುಕೊಳ್ಳಬಹುದಾಗಿದೆ ಎನ್ನುವಂತಹ ಮಾಹಿತಿ ಕೇಳಿ ಬರುತ್ತಿದೆ. ಹೌದು ಸಂಸ್ಥೆ ಸಾಲ ಸೌಲಭ್ಯವನ್ನು ಕೂಡ ನೀಡುವಂತಹ ನಿರ್ಧಾರವನ್ನು ಮಾಡಿದೆ. ಇನ್ಮುಂದೆ ನೀವು ಫೋನ್ ಪೇ ನಲ್ಲಿ ಮ್ಯೂಚುವಲ್ ಫಂಡ್ ಮೇಲೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಬೈಕ್ ಕಾರು ಹಾಗೂ ಹೋಂ ಲೋನ್ ಸೇರಿದಂತೆ ಚಿನ್ನದ ಮೇಲೆ ಕೂಡ ಸಾಲವನ್ನು ಪಡೆದುಕೊಳ್ಳಬಹುದು. ಕೇವಲ ಇಷ್ಟು ಮಾತ್ರವಲ್ಲದೆ ನೀವು ಎಜುಕೇಶನ್ ಲೋನ್ ಅನ್ನು ಕೂಡ ನೀವು ಫೋನ್ ಪೇ ಮೂಲಕ ಪಡೆದುಕೊಳ್ಳಬಹುದಾದಂತಹ ಅವಕಾಶವನ್ನು ಹೊಂದಿದ್ದೀರಿ.

ಹಲವಾರು ಬ್ಯಾಂಕಿಂಗ್ ಸಂಸ್ಥೆಗಳು ಸೇರಿದಂತೆ ಫಿನ್ ಟೆಕ್ ಕಂಪನಿಗಳು ಫೋನ್ ಪೇ ಮೂಲಕ ಪಾಲುಗಾರಿಕೆನ ಹೊಂದಿದ್ದು ಇಲ್ಲಿ ಅಪ್ಲಿಕೇಶನ್ ನಲ್ಲಿ ಫೋನ್ ಪೇ ಗ್ರಾಹಕರು ಈ ಕೆಲವೊಂದು ವಿಧಗಳಲ್ಲಿ ಲೋನ್ ಪಡೆದುಕೊಳ್ಳಬಹುದಾಗಿದೆ. ಉದಾಹರಣೆಗೆ ಎಲ್ ಅಂಡ್ ಟಿ ಫೈನಾನ್ಸ್, ಟಾಟಾ ಫೈನಾನ್ಸ್, ಮುತ್ತೂಟ್ ಫೈನಾನ್ಸ್, ರೂಪೇ ಸೇರಿದಂತೆ ಸಾಕಷ್ಟು ಕಂಪನಿಗಳು ಇಲ್ಲಿ ಸಾಲವನ್ನು ನೀಡುವುದಕ್ಕೆ ಸಿದ್ಧವಾಗಿ ನಿಂತಿದೆ. ಇಲ್ಲಿ ಒಟ್ಟಾರೆಯಾಗಿ 15 ಕಂಪನಿಗಳು ಸಾಲ ನೀಡುವುದಕ್ಕೆ ಫೋನ್ ಪೇ ಜೊತೆಗೆ ಪಾರ್ಟ್ನರ್ ಶಿಪ್ ನಲ್ಲಿ ಇವೆ.

ಇದರಲ್ಲಿ ಇರುವಂತಹ ಡಿಜಿಟಲ್ ಪ್ರಕ್ರಿಯೆ ಮೂಲಕ ಪೇಡೇ ಲೋನ್ (Pay Day Loan) ಗಳನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ. ಫೋನ್ ಪೇ ಸಾಕಷ್ಟು ಕಂಪನಿಗಳ ಜೊತೆಗೆ ಪಾಲುದಾರಿಕೆಯನ್ನು ಹೊಂದಿರುವುದರಿಂದಾಗಿ ನೀವು ಇಲ್ಲಿ 5 ಲಕ್ಷಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಇಲ್ಲಿ ನೀವು ಸಾಲವನ್ನು ಪಡೆದುಕೊಳ್ಳುವುದಕ್ಕೆ ಅರ್ಹತೆಯನ್ನು ಹೊಂದಿದ್ದೀರಾ ಇಲ್ವಾ ಎಂಬುದನ್ನು ಲೆಕ್ಕಾಚಾರ ಹಾಕಿದ ನಂತರ ಸಾಲವನ್ನು ನೇರವಾಗಿ ನಿಮ್ಮ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಇದನ್ನ ನೀವು ಕೆಲವೇ ನಿಮಿಷಗಳಲ್ಲಿ ಚೆಕ್ ಮಾಡಬಹುದಾಗಿದ್ದು ಅರ್ಹತೆಯನ್ನು ಹೊಂದಿದ್ದರೆ ಬೇಕಾಗಿರುವಂತಹ ದಾಖಲೆಗಳನ್ನು ಒದಗಿಸಿ ಕೆಲವೊಂದು ನಿರ್ದಿಷ್ಟ ಬಡ್ಡಿ ದರದ ಮೇಲೆ ನಿಮಗೆ ಬೇಕಾಗಿರುವಂತಹ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಹೀಗಾಗಿ ಇನ್ಮುಂದೆ ಫೋನ್ ಪೇ ಬಳಕೆದಾರರು ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ ಈ ಅಪ್ಲಿಕೇಶನ್ ಕೇವಲ ಹಣವನ್ನು ಒಬ್ಬರಿಂದ ಇನ್ನೊಬ್ಬರಿಗೆ ಕಳುಹಿಸುವುದಕ್ಕೆ ಮಾತ್ರವಲ್ಲದೆ ಹಣ ಇಲ್ಲದೆ ಇದ್ದಾಗ ಸಾಲ ಸೌಲಭ್ಯವನ್ನು ಪಡೆದುಕೊಳ್ಳುವುದಕ್ಕೆ ಕೂಡ ಬಳಸಿಕೊಳ್ಳಬಹುದಾಗಿದೆ.

Comments are closed.