Site Loan: ಈ ಬ್ಯಾಂಕ್ಗಳಲ್ಲಿ ಸಿಗುತ್ತೆ ಸೈಟ್ ಲೋನ್; ಬಡ್ಡಿದರ ಇತರ ಮಾಹಿತಿ ಇಲ್ಲಿದೆ ನೋಡಿ!

Site Loan: ಆಸ್ತಿಪಾಸ್ತಿ ಖರೀದಿಸುವಂತಹ ಆಸೆ ಹಾಗೂ ಆಕಾಂಕ್ಷೆ ಖಂಡಿತವಾಗಿ ಪ್ರತಿಯೊಬ್ಬರಲ್ಲಿ ಇರುತ್ತದೆ ಆದರೆ ಸಾಕಷ್ಟು ಜನರ ಬಳಿ ಹಣ ಇರೋದಿಲ್ಲ ಹೀಗಾಗಿ ಅವರು ಈ ಕನಸನ್ನು ಅರ್ಧಕ್ಕೆ ಮೊಟುಕುಗೊಳಿಸುತ್ತಾರೆ. ಆದರೆ ಮುಂದೆ ಚಿಂತೆ ಮಾಡಬೇಕಾದ ಅಗತ್ಯವಿಲ್ಲ ಇದಕ್ಕಾಗಿ ನೀವು ಬ್ಯಾಂಕಿನಿಂದ ಲೋನ್ ಪಡೆದುಕೊಳ್ಳಬಹುದಾಗಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಸೈಟ್ ಮೇಲೆ ಬ್ಯಾಂಕ್ ಸಾಲ!

ಜಮೀನು ಖರೀದಿಸುವಂತಹ ವಿಚಾರದಲ್ಲಿ ನೀವು ಬ್ಯಾಂಕ್ ಸಾಲವನ್ನು ಪಡೆದುಕೊಳ್ಳಲು ಹೋದರೆ ಸಾಕಷ್ಟು ವಿಚಾರಗಳನ್ನು ಪ್ರಮುಖವಾಗಿ ನೀವು ಗಮನವಹಿಸಬೇಕಾಗುತ್ತದೆ. ಪ್ರಮುಖವಾಗಿ ನೀವು ಖರೀದಿಸಲು ಹೊರಟಿರುವಂತಹ ಆ ಜಮೀನು ಸರ್ಕಾರಿ ದಾಖಲೆಗಳಲ್ಲಿ ರಿಜಿಸ್ಟರ್ ಆಗಿರಬೇಕಾಗಿರುತ್ತದೆ. ಬ್ಯಾಂಕ್ನಿಂದ ನೀವು 70 ರಿಂದ 80 ಪ್ರತಿಶತ ಹಣವನ್ನು ಸೈಟ್ ಖರೀದಿಯ ಮೇಲೆ ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ತಿಳಿದುಬಂದಿದೆ. ಇನ್ನು ಭೂಮಿಯನ್ನು ಖರೀದಿ ಮಾಡಲು ನೀವು ಸೈಟ್ ಲೋನ್ ಅನ್ನು ಪಡೆದುಕೊಳ್ಳುವಂತಹ ಅವಕಾಶವಿದೆ. ಒಂದು ವೇಳೆ ನೀವು ಖರೀದಿ ಮಾಡುತ್ತಿರುವಂತಹ ಸೈಟ್ ಗೆ ಸರಿಯಾದ ರೀತಿಯಲ್ಲಿ ಡಾಕ್ಯುಮೆಂಟ್ಗಳು ಇಲ್ಲ ಅಂದ್ರೆ ಸಾಲ ಸಿಗೋದು ಅನುಮಾನವೇ ಸರಿ ಎಂದು ಹೇಳಬಹುದು.

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಬ್ಯಾಂಕ್ ಡೀಟೇಲ್ಸ್ ಹಾಗೂ ವೈಯಕ್ತಿಕ ಡಿಟೇಲ್ಸ್
  • ಇನ್ನು ನೀವು ಖರೀದಿ ಮಾಡುತ್ತಿರುವಂತಹ ಪ್ರಾಪರ್ಟಿಯ ದಾಖಲೆಗಳನ್ನು ನೀಡಿದರೆ ಮಾತ್ರ ಸೈಟ್ ಲೋನ್ ಸಿಗುತ್ತದೆ.

ಕೇವಲ ಸಾಮಾನ್ಯ ಬ್ಯಾಂಕುಗಳಲ್ಲಿ ಮಾತ್ರವಲ್ಲದೆ ನೀವು ಸೈಟ್ ಲೋನ್ ಅನ್ನು ಎಲ್ಐಸಿ ಇನ್ಸೂರೆನ್ಸ್ ಹೌಸಿಂಗ್ ಫೈನಾನ್ಸ್ ಲೋನ್ ನಲ್ಲಿ ಕೂಡ ಪಡೆದುಕೊಳ್ಳಬಹುದಾಗಿದೆ. ಇನ್ನು ಇದರ ಜೊತೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡ ನಿಮಗೆ ಈ ವಿಭಾಗದಲ್ಲಿ ಲೋನ್ ನೀಡುತ್ತದೆ. ಮತ್ತೊಂದು ಪ್ರಖ್ಯಾತ ಬ್ಯಾಂಕ್ ಆಗಿರುವಂತಹ ಕೆನರಾ ಬ್ಯಾಂಕ್ ನಲ್ಲಿ ಕೂಡ ನೀವು ಸೈಟ್ ಲೋನ್ ಪಡೆದುಕೊಳ್ಳುವಂತಹ ಅವಕಾಶವನ್ನು ನೀಡಲಾಗಿದೆ. ಸೈಟ್ ಸಾಲವನ್ನು ಪಡೆದು ಒಂದೆರಡು ವರ್ಷಗಳ ನಂತರ ಮತ್ತೆ ಮನೆಯಲ್ಲೇ ಕಟ್ಟೋದಕ್ಕೆ ಕೂಡ ಇಲ್ಲಿ ಸಾಲ ಸಿಗುತ್ತದೆ ಎಂಬುದಾಗಿ ತಿಳಿದು ಬಂದಿದೆ.

ಸೈಟ್ ಲೋನ್ ಮೇಲೆ ಏಳರಿಂದ ಹತ್ತು ಪ್ರತಿಶತ ಬಡ್ಡಿದರವನ್ನು ವಿಧಿಸಲಾಗುತ್ತದೆ ಎಂಬುದಾಗಿ ತಿಳಿದುಕೊಂಡಿದೆ. ಹೀಗಾಗಿ ನೀವು ಕೂಡ ನಿಮ್ಮ ನೆಚ್ಚಿನ ಪ್ರಾಪರ್ಟಿಯನ್ನು ಖರೀದಿ ಮಾಡುವ ಮೂಲಕ ಅಲ್ಲಿ ಮನೆ ಕಟ್ಟುವಂತಹ ನಿಮ್ಮ ಕನಸನ್ನು ನನಸು ಮಾಡಿಕೊಳ್ಳುವಂತಹ ಅವಕಾಶವನ್ನ ಈ ಮೂಲಕ ನೆರವೇರಿಸಿಕೊಳ್ಳಬಹುದಾಗಿದೆ. ಒಂದು ವೇಳೆ ಈ ರೀತಿ ಸೈಟ್ ಖರೀದಿಸಿ ಮನೆಯನ್ನು ಕಟ್ಟಬೇಕು ಎನ್ನುವಂತಹ ಆಸೆಯಲ್ಲಿ ಯಾರಾದರೂ ಇದ್ದರೆ ಅವರಿಗೆ ಈ ಮಾಹಿತಿಯನ್ನು ನೀವು ಹಂಚಿಕೊಳ್ಳಬಹುದಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಹತ್ತಿರದ ಬ್ಯಾಂಕಿನ ಬ್ರಾಂಚ್ ಗೆ ಹೋಗಿ ಸೈಟ್ ಲೋನ್ ಅಧಿಕಾರಿಗಳ ಬಳಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

Comments are closed.