Job:ಅಂಗನವಾಡಿ ಟೀಚರ್ ಹಾಗೂ ಕಾರ್ಯಕರ್ತೆಯರ ಸ್ಥಾನಕ್ಕೆ ಅರ್ಜಿ ಸಲ್ಲಿಸುವವರಿಗೆ ಇಲ್ಲಿದೆ ನೋಡಿ ಆಹ್ವಾನ!

Job:ಮನೆಯಲ್ಲಿ ಖಾಲಿ ಕುಳಿತಿರುವಂತಹ ಮಹಿಳೆಯರಿಗೆ ಒಳ್ಳೆಯ ಉದ್ಯೋಗಾವಕಾಶ ಸಿಕ್ಕಿದೆ ಅಂತ ಹೇಳಬಹುದು. ಹೌದು ನಾವ್ ಮಾತಾಡ್ತಿರೋದು ದಾವಣಗೆರೆ ಜಿಲ್ಲೆಯ ವತಿಯಿಂದ ಅಂಗನವಾಡಿ ಟೀಚರ್ ಹಾಗೂ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನ ಬಂದಿದ್ದು ಯಾವ ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎನ್ನುವಂತಹ ಮಾಹಿತಿಯನ್ನು ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳಲು ಹೊರಟಿದ್ದು ತಪ್ಪದೆ ಲೇಖನವನ್ನು ಕೊನೆವರೆಗೂ ಓದಿ.

ದಾವಣಗೆರೆ ಜಿಲ್ಲಾ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ 34 ಅಂಗನವಾಡಿ ಕಾರ್ಯಕರ್ತೆಯರು, ನಾಲ್ಕು ಮಿನಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ 198 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನವನ್ನು ತೆರೆಯಲಾಗಿದೆ. ಸೆಪ್ಟೆಂಬರ್ 9 ರವರೆಗೆ ಅರ್ಜಿ ಸಲ್ಲಿಸುವಂತಹ ಅವಕಾಶ ಲಭ್ಯವಿದ್ದು ಸಂಸ್ಥೆಯ ಅಧಿಕೃತ ಆನ್ಲೈನ್ ವೆಬ್ಸೈಟ್ ಗೆ ಹೋಗಿ ಕೂಡ ನೀವು ಅರ್ಜಿ ಸಲ್ಲಿಸಬಹುದಾಗಿದೆ ಹಾಗೂ ತಾಲೂಕುಗಳ ಐಸಿಡಿಎಸ್ ಕೇಂದ್ರಗಳಿಗೂ ಹೋಗಿ ಕೂಡ ನೀವು ಈ ವಿಚಾರದ ಬಗ್ಗೆ ಇನ್ನಷ್ಟು ಹೆಚ್ಚಿನ ಪ್ರಕ್ರಿಯೆಯನ್ನು ಮುಂದುವರಿಸಬಹುದಾಗಿದೆ.

ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಇಲಾಖೆಯಿಂದ ಈ ವರದಿ ಹೊರಬಂದಿದ್ದು ಸೆಪ್ಟೆಂಬರ್ 9ರ ಒಳಗೆ ಅರ್ಹ ಅಭ್ಯರ್ಥಿಗಳು ಅಂದರೆ ಮಹಿಳೆಯರು ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಕೆಲಸವನ್ನು ಪಡೆದುಕೊಳ್ಳುವಂತಹ ಅವಕಾಶವನ್ನ ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಇಲಾಖೆ ಮಾಡಿಕೊಟ್ಟಿದೆ. ಇನ್ನು ಈ ನೇಮಕಾತಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಜಿಲ್ಲೆಯ ಬೇರೆ ಬೇರೆ ತಾಲೂಕುಗಳ ಸಹಾಯವಾಣಿಯನ್ನು ಕೂಡ ಈಗಾಗಲೇ ಪರಿಚಯಿಸಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಆ ಕಾಂಟಾಕ್ಟ್ ನಂಬರ್ ಗಳನ್ನು ಕೂಡ ತಿಳಿದುಕೊಳ್ಳೋಣ ಬನ್ನಿ.

ದಾವಣಗೆರೆ ಐಸಿಡಿಎಸ್ ಕಚೇರಿ: 08912 263219
ಹರಿಹರ ಐಸಿಡಿಎಸ್ ಕಚೇರಿ; 08912 241431
ಜಗಳೂರು ಐಸಿಡಿಎಸ್ ಕಚೇರಿ; 08196 227132
ಹೊನ್ನಾಳಿ ಐಸಿಡಿಎಸ್ ಕಚೇರಿ: 08188 251283
ಚನ್ನಗಿರಿ ಐಸಿಡಿಎಸ್ ಕಚೇರಿ: 08189 228010

ಪ್ರಮುಖವಾಗಿ ಈ ಹುದ್ದೆಯನ್ನು ಅರ್ಹ ಮಹಿಳೆಯರಿಗೆ ಹಾಗೂ ಲಿಂಗ ಅಲ್ಪಸಂಖ್ಯಾತರಿಗೆ ಒದಗಿಸುವಂತಹ ವಿಚಾರವನ್ನು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಮಾಡಿಕೊಡುತ್ತಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಮೇಲಿರುವಂತಹ ಸಂಪರ್ಕ ಸಂಖ್ಯೆಗೆ ಕರೆಮಾಡುವ ಮೂಲಕ ನೀವು ಪಡೆದುಕೊಳ್ಳಬಹುದಾಗಿದೆ. ಪ್ರಮುಖವಾಗಿ ನೀವು ಅರ್ಥ ಮಾಡಿಕೊಳ್ಳಬೇಕಾಗಿರುವಂತಹ ವಿಚಾರ ಅಂದ್ರೆ ಈ ಕೆಲಸದ ಅವಕಾಶ ದಾವಣಗೆರೆ ಜಿಲ್ಲೆಯವರಿಗೆ ಮಾತ್ರ.

Comments are closed.