Best Investment Scheme:ಈ ಯೋಜನೆಯಲ್ಲಿ ಹೂಡಿಕೆ ಮಾಡಿ- 10 ಲಕ್ಷ ಪಕ್ಕ ವಾಪಾಸ್ ಬರುತ್ತೆ

Best Investment Scheme: ಕೆಲವರಿಗೆ ಬೇರೆಯವರ ಕೈ ಕೆಳಗೆ ಕೆಲಸ ಮಾಡುವಂತಹ ಇಚ್ಛೆ ಇರೋದಿಲ್ಲ ಹೀಗಾಗಿ ತಮ್ಮದೇ ಆಗಿರುವಂತಹ ಸ್ವಂತವಾಗಿರುವಂತಹ ವ್ಯಾಪಾರ ಅಥವಾ ಉದ್ಯಮವನ್ನು ಪ್ರಾರಂಭ ಮಾಡುವಂತಹ ಆಸೆ ಇರುತ್ತದೆ. ಕೆಲವರ ಬಳಿ ಇದಕ್ಕೆ ಹಣ ಇರೋದಿಲ್ಲ. ಆದರೆ ಇನ್ನು ಕೆಲವರು ಬಳಿ ಹಣ ಇದ್ರೂ ಕೂಡ ಎಲ್ಲಿ ಹೂಡಿಕೆ ಮಾಡಬೇಕು ಎನ್ನುವಂತಹ ಐಡಿಯಾ ಇರೋದಿಲ್ಲ. ಇವತ್ತು ನಾವು ಹೇಳ್ತಾ ಇರೋದು ನೀವು ಉದ್ಯಮ ಅಥವಾ ವ್ಯಾಪಾರ ಮಾಡಿ ಹಣವನ್ನ ಹೆಚ್ಚು ಮಾಡಿಸಿಕೊಳ್ಳುವ ವಿಧಾನದ ಬಗ್ಗೆ ಅಲ್ಲ ಬದಲಾಗಿ ಪೋಸ್ಟ್ ಆಫೀಸ್ನ ಇದೊಂದು ಯೋಜನೆಯಲ್ಲಿ ನೀವು ಹಣವನ್ನು ಹೂಡಿಕೆ ಮಾಡುವ ಮೂಲಕ ದೊಡ್ಡ ಮಟ್ಟದ ಲಾಭವನ್ನು ಪಡೆದುಕೊಳ್ಳಬಹುದಾಗಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಕಿಸಾನ್ ವಿಕಾಸ್ ಪತ್ರ ಯೋಜನೆ!

ದೀರ್ಘಾವಧಿಯ ಆರ್ಥಿಕ ಉಳಿತಾಯವನ್ನ ಪ್ರೋತ್ಸಾಹ ನೀಡೋದಕ್ಕೆ ಅಂತಾನೆ ಪೋಸ್ಟ್ ಆಫೀಸ್ನಲ್ಲಿ ಈ ಯೋಜನೆಯ ಜಾರಿಗೆ ತರಲಾಗಿದೆ. ಈ ಯೋಜನೆಯನ್ನು ಪ್ರಾರಂಭ ಮಾಡಿರುವುದು 1988 ರಲ್ಲಿ. ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ನೀವು 9 ವರ್ಷ 7 ತಿಂಗಳಿನಲ್ಲಿ ನಿಮ್ಮ ಹಣವನ್ನು ಡಬಲ್ ಮಾಡಿಕೊಳ್ಳಬಹುದಾಗಿದೆ. ಅಂದರೆ ಉದಾಹರಣೆಗೆ 5 ಲಕ್ಷ ಹಣವನ್ನು ನೀವು ಹೂಡಿಕೆ ಮಾಡಿದರೆ ಈ ಮೆಚುರಿಟಿ ಸಮಯಾವಧಿಯ ನಂತರ ನಿಮ್ಮ ಹಣ 10 ಲಕ್ಷ ರೂಪಾಯಿ ಆಗಿರುತ್ತದೆ. ಅಂದರೆ ಈ ಯೋಜನೆಯಲ್ಲಿ 7.5% ಬಡ್ಡಿದರವನ್ನು ರಿಟರ್ನ್ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ.

ಈ ಯೋಜನೆಯಲ್ಲಿ ನೀವು ಸಾವಿರ ರೂಪಾಯಿಗಳಿಂದ ಹಣವನ್ನು ಹೂಡಿಕೆ ಮಾಡುವುದನ್ನು ಪ್ರಾರಂಭಿಸಿ ಮ್ಯಾಕ್ಸಿಮಮ್ ಯಾವುದೇ ಲಿಮಿಟ್ ಇರೋದಿಲ್ಲ. ಆದರೆ 50,000ಗಳ ಮೇಲಿನ ಹೂಡಿಕೆಯ ಮೇಲೆ ನೀವು ಪ್ಯಾನ್ ಕಾರ್ಡ್ ಡೀಟೇಲ್ಸ್ ಅನ್ನು ಒದಗಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಈ ಖಾತೆಯನ್ನು ತೆರೆಯುವುದಕ್ಕಾಗಿ ನೀವು ನಿಮ್ಮ ಪೋಸ್ಟ್ ಆಫೀಸ್ನ ಬ್ರಾಂಚ್ ಗೆ ಆಧಾರ್ ಕಾರ್ಡ್, ಐ ಟಿ ಆರ್, ಬ್ಯಾಂಕ್ ಸ್ಟೇಟ್ಮೆಂಟ್ಗಳಂತಹ ಡಾಕ್ಯುಮೆಂಟ್ಗಳನ್ನು ಕೂಡ ಪ್ರಮುಖವಾಗಿ ಒದಗಿಸ ಬೇಕಾಗಿರುತ್ತದೆ. ಹತ್ತು ವರ್ಷಕ್ಕಿಂತ ಮೇಲ್ಪಟ್ಟಂತಹ ಪ್ರತಿಯೊಬ್ಬ ಮಗು ಕೂಡ ಈ ಯೋಜನೆಯಲ್ಲಿ ತನ್ನ ಖಾತೆಯನ್ನು ತೆರೆದು ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಅಂದರೆ ಇದು ಮಗುವಿನ ಹೆಸರಿನಲ್ಲಿ ಪೋಷಕರು ಮಾಡುವಂತಹ ಖಾತೆ ಆಗಿರುತ್ತದೆ. ಇನ್ನು 18 ವರ್ಷದ ಮೇಲ್ಪಟ್ಟಿರುವಂತಹ ಪ್ರತಿಯೊಬ್ಬರು ಕೂಡ ಸಿಂಗಲ್ ಅಥವಾ ಜಂಟಿ ಖಾತೆಯನ್ನು ತೆರೆಯಬಹುದಾಗಿದೆ.

NRI ಗಳು ಈ ಖಾತೆಯನ್ನು ತೆರೆಯುವ ಹಾಗೆ ಇರುವುದಿಲ್ಲ. ಆಧಾರ್ ಕಾರ್ಡ್, ನಿಮ್ಮ ವಯಸ್ಸಿನ ಸರ್ಟಿಫಿಕೇಟ್, ಪಾಸ್ ಪೋರ್ಟ್ ಸೈಜ್ ಫೋಟೋ, ಮತ್ತು ಈ ಯೋಜನೆಯ ಅರ್ಜಿ ಪತ್ರವನ್ನು ಕೂಡ ನೀವು ಈ ಸಂದರ್ಭದಲ್ಲಿ ಪಡೆದುಕೊಳ್ಳಬೇಕಾಗಿರುತ್ತದೆ. ಇನ್ನು ನಿಮಗೆ ಸಮಯಕ್ಕಿಂತ ಮುಂಚೆ ಹಣ ಬೇಕು ಅಂತ ಅಂದ್ರೆ ಎರಡು ವರ್ಷ ಆರು ತಿಂಗಳುಗಳ ಕಾಲ ಕಾಯಬೇಕು. ಆ ವ್ಯಕ್ತಿ ಮರಣ ಹೊಂದಿದ ನಂತರ ಕೂಡ ನ್ಯಾಯಾಲಯದ ಆದೇಶದ ಮೇರೆಗೆ ನೀವು ಹಣವನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲಿ ನೀವು ಅಂದರೆ ನಾಮಿನಿಗಳು ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕಾಗಿದೆ.

Comments are closed.