Vastu Tips:ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಕೂಡ ಯಾರಿಗೂ ದಾನ ಮಾಡೋದಕ್ಕೆ ಹೋಗಬೇಡಿ ಕಷ್ಟ ಪ್ರಾರಂಭವಾಗುತ್ತದೆ!

Vastu Tips:ಶಾಸ್ತ್ರದ ಪ್ರಕಾರ ಸಾಕಷ್ಟು ವಿಚಾರಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಯಾಕೆಂದರೆ ಇಲ್ಲಿ ಕೆಲವೊಂದು ನೀತಿ ನಿಯಮಗಳ ಅನುಸಾರವಾಗಿ ನಡೆದುಕೊಳ್ಳದೆ ಹೋದಲ್ಲಿ ವಾಸ್ತುದೋಷವನ್ನು ಎದುರಿಸಬೇಕಾದ ಅಗತ್ಯ ಇರುತ್ತದೆ. ಅದರಲ್ಲೂ ವಿಶೇಷವಾಗಿ ವಾಸ್ತು ಶಾಸ್ತ್ರದ ಪ್ರಕಾರ ಈ ಐದು ವಸ್ತುಗಳನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ದಾನ ಮಾಡಬಾರದು ಎನ್ನುವಂತಹ ನಿಯಮ ಇದ್ದು ಆ ವಸ್ತುಗಳು ಯಾವುವು ಅನ್ನೋದನ್ನ ತಿಳಿಯೋಣ ಬನ್ನಿ.

  • ಹೆಣ್ಣು ಮಕ್ಕಳು ಅಲಂಕಾರಿಕ ವಸ್ತುಗಳನ್ನು ಬೇರೆಯವರ ಜೊತೆಗೆ ಹಂಚಿಕೊಳ್ಳುವಂತಹ ಅಭ್ಯಾಸವನ್ನು ಹೊಂದಿರುತ್ತಾರೆ ಆದರೆ ಈ ಸಂದರ್ಭದಲ್ಲಿ ತಾಳಿ ಹಾಗೂ ಕಾಲುಂಗುರವನ್ನು ಯಾವುದೇ ಕಾರಣಕ್ಕೂ ಕೂಡ ಬೇರೆಯವರಿಗೆ ನೀಡುವುದಕ್ಕೆ ಹೋಗಬೇಡಿ. ಇದು ಅಶುಭದ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ.
  • ಇದರ ಜೊತೆಗೆ ಯಾವುದೇ ಕಾರಣಕ್ಕೂ ಕೂಡ ಹರಿತವಾಗಿರುವಂತಹ ಆಯುಧಗಳನ್ನು ಬೇರೆಯವರಿಗೆ ಯಾವುದೇ ಕಾರಣಕ್ಕೂ ದಾನ ಮಾಡೋದಕ್ಕೆ ಹೋಗಬೇಡಿ. ಇದರಿಂದಾಗಿ ಅವರ ಜೊತೆ ನೀವು ಸಂಬಂಧವನ್ನು ಕಳೆದುಕೊಂಡಂತೆ ಆಗುತ್ತದೆ ಎಂಬುದಾಗಿ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಇದು ಕೂಡ ನಿಮ್ಮ ಸಂಬಂಧದ ಮೇಲೆ ಅಶುಭ ಪರಿಣಾಮವನ್ನು ಬೀರುತ್ತದೆ.
  • ನೀವು ಸಾಮಾನ್ಯವಾಗಿ ಕರ್ಚೀಫ್ ಅನ್ನು ಹಳೆಯ ಮೇಲೆ ಇರುವಂತಹ ಬೆವರನ್ನು ವರಿಸಿಕೊಳ್ಳುವುದಕ್ಕಾಗಿ ಬಳಸಿಕೊಳ್ಳುತ್ತೀರಿ. ಹೀಗಾಗಿ ನಿಮ್ಮ ಹಣೆಬರವನ್ನ ತಟ್ಟುವಂತಹ ಈ ಕರ್ಚೀಫ್ ಅನ್ನು ಕೂಡ ಯಾವುದೇ ಕಾರಣಕ್ಕೂ ಬೇರೆಯವರಿಗೆ ದಾನ ರೂಪದಲ್ಲಿ ನೀಡಬಾರದು ಎಂಬುದಾಗಿ ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ.
  • ಇನ್ನು ಸಾಮಾನ್ಯವಾಗಿ ಅಕ್ಕಪಕ್ಕದವರು ಒಂದಲ್ಲ ಒಂದು ವಸ್ತುಗಳನ್ನು ನಿಮ್ಮಿಂದ ಎರವಲು ಪಡೆದುಕೊಳ್ಳುವಂತಹ ಕೆಲಸವನ್ನು ಮಾಡುತ್ತಲೇ ಇರುತ್ತಾರೆ. ಆದರೆ ಆ ಸಂದರ್ಭದಲ್ಲಿ ಬೆಂಕಿ ಹಚ್ಚಲು ನೆರವಾಗುವಂತಹ ಬೆಂಕಿಕಡ್ಡಿಯನ್ನು ಯಾವುದೇ ಕಾರಣಕ್ಕೂ ಕೂಡ ಅವರಿಗೆ ನೀಡೋದಕ್ಕೆ ಹೋಗಬೇಡಿ. ಇದರ ಅರ್ಥವೇ ತಿಳಿಸುವ ಹಾಗೆ ನಿಮ್ಮಿಬ್ಬರ ಸಂಬಂಧದಲ್ಲಿ ಇದು ಬೆಂಕಿ ಹಚ್ಚುವಂತಹ ಕೆಲಸವನ್ನು ಮಾಡುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬುದಾಗಿ ವಾಸ್ತು ಶಾಸ್ತ್ರದ ಪ್ರಕಾರ ಉಲ್ಲೇಖಿಸಲಾಗಿದೆ. ಹೀಗಾಗಿ ಬೆಂಕಿ ಪಟ್ಟಣವನ್ನು ಕೂಡ ನೀಡುವುದಕ್ಕೆ ಹೋಗಬೇಡಿ.
  • ಬೇರೆಯವರ ಮನೆಯಿಂದ ಅಥವಾ ನಿಮ್ಮ ಮನೆಯಿಂದ ಬೇರೆಯವರಿಗೆ ಅಕ್ವೇರಿಯಂ ಅನ್ನು ಉಡುಗೊರೆಯಾಗಿ ನೀಡುವುದು ಕೂಡ ವಾಸ್ತು ಶಾಸ್ತ್ರದ ಪ್ರಕಾರ ಅಶುಭ ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗೂ ನಿಮ್ಮ ಮನೆಯಲ್ಲಿ ಇರುವಂತಹ ಅದೃಷ್ಟವನ್ನು ಅವರ ಮನೆಗೆ ವರ್ಗಾವಣೆ ಮಾಡಿದ ರೀತಿಯಲ್ಲಿ ಇರುತ್ತದೆ ಇದು ವಾಸ್ತು ಶಾಸ್ತ್ರದ ಪ್ರಕಾರ ಶುಭ ಅಲ್ಲ ಎಂಬುದಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ಈ ಮೇಲೆ ತಿಳಿಸಿರುವ ಅಂತಹ ಐದು ವಸ್ತುಗಳನ್ನು ಬೇರೆಯವರಿಗೆ ದಾನ ನೀಡುವುದು ಸರಿಯಲ್ಲ ಎಂಬುದು ವಾಸ್ತು ಶಾಸ್ತ್ರದ ಪ್ರಕಾರ ತಿಳಿಸಲಾಗಿರುವಂತಹ ಮಾಹಿತಿ.

Comments are closed.