PhonePe: ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೆ ಇದ್ದರೂ ಫೋನ್ ಫೆ ಅಲ್ಲಿ ಮನಬಂದಂತೆ ಖರ್ಚು ಮಾಡುವುದು ಹೇಗೆ ಗೊತ್ತೇ?

PhonePe: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಹೆಚ್ಚು ಪ್ರವರ್ಧಮಾನಕ್ಕೆ ಬಂದ ನಂತರದಿಂದ ಪ್ರತಿಯೊಬ್ಬರು ಕೂಡ ಹೆಚ್ಚಾಗಿ ಫೋನ್ ಪೇ ಹಾಗೂ ಗೂಗಲ್ ಪೇ ಗಳಂತಹ ಯುಪಿಐ ಅಥವಾ ಆನ್ಲೈನ್ ಅಪ್ಲಿಕೇಶನ್ಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ನಿಮ್ಮ ಫೋನ್ ಪೇ ಅಪ್ಲಿಕೇಶನ್ ನಲ್ಲಿ ಬ್ಯಾಂಕಿನಲ್ಲಿ ಹಣ ಇಲ್ಲದೆ ಇದ್ದರೂ ಕೂಡ ಯಾವ ರೀತಿಯಲ್ಲಿ ಬಳಸಬಹುದು ಎನ್ನುವುದರ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.

ಹೌದು ಕೆಲವೊಮ್ಮೆ ನಿಮ್ಮ ಖಾತೆಯಲ್ಲಿ ಹಣ ಇಲ್ಲದೆ ಇರಬಹುದು ಹಾಗೂ ಹಣದ ಅರ್ಜೆನ್ಸಿ ಇದ್ದಾಗ ನೀವು ಇನ್ನು ಮುಂದೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಯಾಕೆಂದರೆ ಫೋನ್ ಪೇ ಹೊಸ ಫೀಚರ್ ಅನ್ನು ಜಾರಿಗೆ ತಂದಿದ್ದು ಇದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಕ್ರೆಡಿಟ್ ಲೈನ್ ಸೇವೆಗಳನ್ನು ಗ್ರಾಹಕರಿಗೆ ಪರಿಚಯಿಸುವ ಮೂಲಕ ನಿಮ್ಮ ಖಾತೆಯಲ್ಲಿ ಹಣ ಇಲ್ಲದೆ ಇದ್ದರೂ ಕೂಡ ಅಗತ್ಯ ಸಂದರ್ಭಗಳಲ್ಲಿ ನಿಮಗೆ ಬೇಕಾಗಿರುವಂತಹ ಆರ್ಥಿಕ ಸಹಾಯವನ್ನು ಫೋನ್ ಪೇ ನಿಮಗೆ ಮಾಡುತ್ತದೆ. ಇದಕ್ಕಾಗಿ ನೀವು ನಿಮ್ಮ ಬ್ಯಾಂಕಿನಿಂದ ಕ್ರೆಡಿಟ್ ಲೈನ್ ಸೇವೆಗಳನ್ನು ಪಡೆದುಕೊಂಡಿರಬೇಕು ಹಾಗೂ ಇದನ್ನು ನೀವು ನಿಮ್ಮ ಫೋನ್ ಪೇ ಖಾತೆಗೆ ಲಿಂಕ್ ಮಾಡುವುದನ್ನು ಮರೆಯಬೇಡಿ. ವಿಶೇಷವಾಗಿ ಫೋನ್ ಪೇ ಜಾರಿಗೆ ತಂದಿರುವಂತಹ ಈ ಹೊಸ ಫೀಚರ್ ವ್ಯಾಪಾರಿಗಳಿಗೆ ಸಾಕಷ್ಟು ರೀತಿಯಲ್ಲಿ ಸಹಾಯ ಮಾಡುತ್ತದೆ.

ಇದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪೂರ್ವ ಅನುಮೋದಿತ ಆಗಿರುವಂತಹ ಕ್ರೆಡಿಟ್ ಲೈನ್ ಗಳಿಗೂ ಕೂಡ ವಿಸ್ತರಿಸಿದೆ. ಈ ಮೂಲಕ ಫೋನ್ ಪೇ ಬಳಸಿದಾರರು ಹೆಚ್ಚಿನ ಪಾವತಿಗಳನ್ನು ಮಾಡಬಹುದಾಗಿದೆ. ಫೋನ್ ಪೇ ಸಂಸ್ಥೆಯ ಮುಖ್ಯಸ್ಥರು ಕೂಡ ಈ ಮೂಲಕ ಆನ್ಲೈನ್ ಪೇಮೆಂಟ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಕಾರಿ ಬದಲಾವಣೆಯನ್ನು ತರುವಂತಹ ಇಚ್ಚೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ.

ನಿಮ್ಮ ಬ್ಯಾಂಕಿನ ಕ್ರೆಡಿಟ್ ಲೈನ್ ಅನ್ನು ನಿಮ್ಮ ಫೋನ್ ಪೇಗೆ ಲಿಂಕ್ ಮಾಡಿದ ನಂತರ ಪಿನ್ ಸೆಟ್ ಮಾಡಿದ ನಂತರ ನೀವು ನಿಮ್ಮ ಕ್ರೆಡಿಟ್ ಲೈನ್ ಆಯ್ಕೆಯನ್ನು ನೋಡುವಂತಹ ಅವಕಾಶವನ್ನು ಇಲ್ಲಿ ಕಾಣಬಹುದಾಗಿದೆ. ಇನ್ಮುಂದೆ ಈ ಮೂಲಕ ಬ್ಯಾಂಕಿನ ಖಾತೆಯಲ್ಲಿ ಹಣ ಇಲ್ಲದೆ ಇದ್ದರೂ ಕೂಡ ಎಮರ್ಜೆನ್ಸಿ ಸಂದರ್ಭದಲ್ಲಿ ಫೋನ್ ಪೇ ಅಪ್ಲಿಕೇಶನ್ ಬಳಕೆ ಮಾಡುವವರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಇನ್ಮುಂದೆ ಫೋನ್ ಪೇ ಬಾಳಕಿದಾರರು ತಡೆರಹಿತವಾಗಿ ಹಣವನ್ನು ಖರ್ಚು ಮಾಡಬಹುದಾಗಿದೆ.

Comments are closed.