Government scheme: ಗೃಹಿಣಿಯರಿಗೆ ಶುರುವಾಯ್ತು ಆತಂಕ; ಗೃಹಲಕ್ಷ್ಮಿ ಯೋಜನೆಯ 12 ಹಾಗೂ 13ನೇ ಕಂತಿನ ಹಣ ಈ ಮಹಿಳೆಯರಿಗೆ ಸಿಗೋದಿಲ್ಲ!

Government scheme: ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ಹಣದ ಆರ್ಥಿಕ ಸಹಾಯ ದೊರಕಲಿ ಎನ್ನುವ ಕಾರಣಕ್ಕಾಗಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು, ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಈ ಯೋಜನೆ ಸಾಕಷ್ಟು ಯಶಸ್ವಿ ರೂಪದಲ್ಲಿ ಕಂಡು ಬರ್ತಾ ಇದ್ದು ಒಂದು ವರ್ಷವನ್ನು ಪೂರೈಸಿದೆ. ಆದರೆ ಈ ಯೋಜನೆಯ ವಿಚಾರದಲ್ಲಿ ನಾವು ತಿಳಿದುಕೊಳ್ಳಬೇಕಾಗಿರುವಂತಹ ಮತ್ತೊಂದು ಪ್ರಮುಖ ವಿಚಾರ ಅಂತ ಅಂದ್ರೆ ಇದುವರೆಗೂ 2 ಲಕ್ಷಕ್ಕೂ ಹೆಚ್ಚಿನ ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆಯ ಲಿಸ್ಟಿನಿಂದ ತೆಗೆದು ಹಾಕಲಾಗಿದೆ ಎನ್ನುವಂತಹ ಮಾಹಿತಿ ಕೂಡ ಸಿಕ್ಕಿದೆ.

ಹೌದು ನಾವು ಹೇಳ್ತಾ ಇರೋದು 12 ಹಾಗೂ 13ನೇ ಕಂತಿನ ಹಣವನ್ನು ನೀಡುವ ವಿಚಾರದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಮಹಿಳೆಯರನ್ನ ಲಿಸ್ಟ್ನಿಂದ ತೆಗೆದುಹಾಕಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಇವತ್ತಿನ ಈ ಲೇಖನದ ಮೂಲಕ ಈ ರೀತಿ ಅನರ್ಹ ಗೊಂಡಿರುವಂತಹ ಆ ಮಹಿಳೆಯರು ಯಾರು ಅಥವಾ ಆ ಕಾರಣ ಏನು ಅನ್ನೋದರ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲು ಹೊರಟಿದ್ದೇವೆ. ಹೀಗಾಗಿ ತಪ್ಪದೆ ಲೇಖನವನ್ನು ಕೊನೆವರೆಗೂ ಓದಿ.

ಸಾಮಾನ್ಯವಾಗಿ ಹೇಳುವುದಾದರೆ ಈ ಯೋಜನೆಯ ಆರ್ಥಿಕವಾಗಿ ಹಿಂದುಳಿದಿರುವಂತಹ ಮಹಿಳೆಯರಿಗೆ ಆರ್ಥಿಕ ಸಹಾಯ ಸಿಗಲಿ ಎನ್ನುವ ಕಾರಣಕ್ಕಾಗಿ ಜಾರಿಗೆ ತಂದಿದೆ. ಇನ್ನು ಯಾವೆಲ್ಲ ಕಾರಣಕ್ಕಾಗಿ ಇಷ್ಟೊಂದು ಮಹಿಳೆಯರನ್ನ 12 ಹಾಗೂ 13ನೇ ಕಂತಿನ ಹಣವನ್ನು ಪಡೆಯುವುದರಿಂದ ಅನರ್ಹಗೊಳಿಸಲಾಗಿದೆ ಎಂಬುದನ್ನು ತಿಳಿಯೋಣ ಬನ್ನಿ.

  • ಒಂದು ವೇಳೆ ಆ ಮಹಿಳೆ ಅಥವಾ ಮಹಿಳೆಯ ಗಂಡ ಅಥವಾ ಮನೆಯಲ್ಲಿ ಯಾರಾದರೂ ಸರ್ಕಾರಿ ಕೆಲಸದಲ್ಲಿದ್ದರೆ ಈ ಯೋಜನೆಯಲ್ಲಿ ಫಲಾನುಭವಿಗಳಾಗುವಂತಹ ಅರ್ಹತೆಯನ್ನು ಅವರು ಹೊಂದಿರುವುದಿಲ್ಲ ಹೀಗಾಗಿ ಅಂತಹ ಮಹಿಳೆಯರನ್ನ ಲಿಸ್ಟಿನಿಂದ ತೆಗೆದು ಹಾಕಲಾಗಿದೆ.
  • ಇನ್ನು ಟ್ಯಾಕ್ಸ್ ಅಥವಾ ಜಿಎಸ್ಟಿಯನ್ನು ಕಟ್ತಾ ಇದ್ರೆ ಅಂತಹ ಕುಟುಂಬಕ್ಕೂ ಕೂಡ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2,000 ರೂಪಾಯಿ ಹಣವನ್ನು ಮಾಸಾಶನದ ರೂಪದಲ್ಲಿ ನೀಡುವಂತಹ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎನ್ನುವಂತಹ ಮಾಹಿತಿ ಕೂಡ ಸಿಕ್ಕಿದೆ.

ಈ ಎರಡು ಲಕ್ಷ ಮಹಿಳೆಯರ ಅನರ್ಹಗೊಳಿಸಿರುವ ಕಾರಣಕ್ಕಾಗಿ 12 ಹಾಗೂ 13ನೇ ಕಂತಿನ ಹಣವನ್ನು ಪಾವತಿ ಮಾಡುವುದಕ್ಕೆ ಸರ್ಕಾರ ತಡ ಮಾಡುತ್ತಿದೆ ಎನ್ನುವಂತಹ ಮಾಹಿತಿ ದೊರಕಿದೆ.

ಇನ್ನು ನೀವು ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಗಳಂತಹ ಸೇವಾ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ನೀವು ಕೂಡ ಈ ಲಿಸ್ಟಿನಲ್ಲಿ ಕ್ಯಾನ್ಸಲ್ ಆಗಿದ್ದೀರಾ ಅನ್ನೋದನ್ನ ತಿಳಿದುಕೊಳ್ಳಬಹುದಾಗಿದೆ.

Comments are closed.