Bengaluru: ಬೆಂಗಳೂರಿನಲ್ಲಿ ಕನ್ನಡಿಗರನ್ನ ಕೆಣಕಿದ್ದ ಸುಗಂಧ ಶರ್ಮ ಕಥೆ ಈಗ ಏನಾಗಿದೆ ಗೊತ್ತಾ? ಇದು ಕನ್ನಡಿಗರ ಪವರ್ ಅಂದ್ರೆ!

Bengaluru: ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ವಾಸ ಇರುವಂತಹ ಉತ್ತರ ಭಾರತದ ಹಿಂದಿ ವಾಲಗಳು ನಮ್ಮ ಕನ್ನಡಿಗರನ್ನ ಟೀಕಿಸುವಂತಹ ಹಾಗೂ ಕರ್ನಾಟಕವನ್ನು ಅವಮಾನ ಮಾಡುವಂತಹ ಹೇಳಿಕೆಯನ್ನು ನೀಡುವ ಮೂಲಕ ತಮ್ಮ ಉದ್ಧಟತನವನ್ನು ಮೆರೆಯುವಂತಹ ಕೆಲಸಗಳನ್ನು ಸಾಕಷ್ಟು ಸಮಯಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತಹ ವಿಡಿಯೋದಲ್ಲಿ ಸುಗಂಧ ಶರ್ಮ ಎನ್ನುವಂತಹ ಮಹಿಳೆ ಒಬ್ಬರು ನಿಮಗೆಲ್ಲರಿಗೂ ತಿಳಿದಿರಬಹುದು ಬೆಂಗಳೂರಿನಿಂದ ಉತ್ತರ ಭಾರತೀಯರೆಲ್ಲರೂ ಹೊರಗಡೆ ಹೋದರೆ ಇಲ್ಲಿ ಏನು ಉಳಿಯೋದಿಲ್ಲ, ಬೆಂಗಳೂರು ಬೆಳೆದಿರೋದು ನಮ್ಮ ಕಾರಣಕ್ಕಾಗಿ ಎಂಬ ರೀತಿಯಲ್ಲಿ ಅಹಂಕಾರದ ಮಾತುಗಳನ್ನು ಆಡುವ ಮೂಲಕ ಕನ್ನಡಿಗರನ್ನು ಸಂಪೂರ್ಣವಾಗಿ ತುಚ್ಛವಾಗಿ ಕಂಡಿದ್ದರು ಎಂದು ಹೇಳಬಹುದಾಗಿದೆ. ಒಂದೆರಡು ಲೈಕ್ ಹಾಗೂ ಕಾಮೆಂಟ್ ಗಳಿಗಾಗಿ ಈ ರೀತಿ ಗಿಮಿಕ್ ಹೇಳಿಕೆಗಳನ್ನು ನೀಡುವಂತಹ ಪ್ರತಿಯೊಬ್ಬ ಉತ್ತರ ಭಾರತೀಯರಿಗೂ ಕೂಡ ಪಾಠ ಎನ್ನುವ ರೀತಿಯಲ್ಲಿ ಈಗ ಇವರಿಗೆ ಪರಿಸ್ಥಿತಿ ಬಂದು ಒದಗಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಹೌದು ಈ ಮಹಿಳೆ ಫ್ರೀಡಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದಂತಹ ಕನ್ನಡಪರ ಹೋರಾಟಗಾರರಾಗಿರುವಂತಹ ರೂಪೇಶ್ ರಾಜಣ್ಣ ಸೇರಿದಂತೆ ಇತರರು ಆಕೆ ಏನು ಕೆಲಸದಿಂದ ತೆಗೆದುಹಾಕುವಂತೆ ಒತ್ತಾಯ ಮಾಡಿ ಆಕೆ ಕೆಲಸ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಕನ್ನಡಿಗರಿಗೆ ಅವಮಾನ ಮಾಡಿರುವಂತಹ ಅವರಿಗೆ ಬೆಂಗಳೂರಿನಲ್ಲಿ ಬೇರೆ ಯಾವುದೇ ಕಂಪನಿಗಳು ಕೂಡ ಕೆಲಸ ನೀಡಿದರು ಕೂಡ ಅಲ್ಲಿ ಕೂಡ ಹೋಗಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಕನ್ನಡಿಗರನ್ನು ಹಗುರವಾಗಿ ತೆಗೆದುಕೊಂಡಿದ್ದ ಸುಗಂಧ ಶರ್ಮ ಎನ್ನುವಂತಹ ಉತ್ತರ ಭಾರತದ ಮಹಿಳೆ ಈಗ ತನ್ನ ನಿರ್ಲಕ್ಷದ ಮಾತುಗಳಿಗೆ ಪಶ್ಚಾತ್ತಾಪ ಪಟ್ಟುಕೊಳ್ಳಬೇಕಾದಂತಹ ಪರಿಸ್ಥಿತಿ ಒದಗಿ ಬಂದಿದೆ.

ಈ ಎಲ್ಲಾ ಘಟನೆಗಳು ನಡೆದ ನಂತರ ಈಗ ಬೆಂಗಳೂರು ಅಂದ್ರೆ ನನಗೆ ಕೂಡ ಇಷ್ಟ ನನಗೂ ಕೂಡ ಕನ್ನಡ ಭಾಷೆಯನ್ನು ಕಲಿಯುವ ಆಸಕ್ತಿ ಇದೆ ಹಾಗೂ ಗೌರವ ಇದೆ ಎನ್ನುವಂತಹ ಎಲ್ಲಾ ಆದಮೇಲೆ ಸಗಣಿ ಸಾರಿ ಸುವಂತಹ ಕೆಲಸವನ್ನು ಆಕೆ ತನ್ನ ಲೇಟೆಸ್ಟ್ ವಿಡಿಯೋದಲ್ಲಿ ಮಾಡೋಕೆ ಹೋಗಿದ್ದಾಳೆ. ಈ ರೀತಿ ಮೊದಲಿಗೆ ಬಾಯಿಗೆ ಬಂದ ಹಾಗೆ ಮಾತನಾಡಿ ನಂತರ ಅದನ್ನ ಮರೆಸುವುದಕ್ಕೆ ಈ ರೀತಿಯ ನಾಟಕಗಳನ್ನು ಮಾಡೋದು ಉತ್ತರ ಭಾರತೀಯರದ್ದು ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕಾಮನ್ ಆಗಿಬಿಟ್ಟಿದೆ. ಮುಂದಿನ ದಿನಗಳಲ್ಲಿ ಕನ್ನಡ ಹಾಗೂ ಕರ್ನಾಟಕದ ಬಗ್ಗೆ ಯಾರೇ ಕೂಡ ಈ ರೀತಿ ಹಗುರವಾಗಿ ಮಾತನಾಡಿದರು ಕೂಡ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು ಅನ್ನೋದು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿರುವಂತಹ ಪ್ರಬಲವಾದ ಅಭಿಪ್ರಾಯವಾಗಿದೆ.

Comments are closed.