ನಿಜಕ್ಕೂ ಬಾರಿ ಸದ್ದು ಮಾಡುತ್ತಿರುವ ಲಲಿತ್ ಮೋದಿ ಹಾಗೂ ಸುಶ್ಮಿತಾ ಸೆನ್ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ?? ಇಷ್ಟಕ್ಕೆ ಟ್ರೋಲ್ ಆದ್ರಾ ಹೊಸ ಜೋಡಿ!

ಕೆಲವು ದಿನಗಳ ಹಿಂದೆ ನಟಿ ಸುಶ್ಮಿತಾ ಸೇನ್ ತುಂಬಾನೇ ಸುದ್ದಿಯಾಗಿದ್ರು. ಬಾಲಿವುಡ್ ನ ಸ್ಟಾರ್ ನಟಿ ಎನಿಸಿಕೊಂಡ ಸುಶ್ಮಿತಾ ಸೇನ್ ತಮ್ಮ ಹುಡುಗರ ಜೊತೆ ಬ್ರೇಕ್ ಅಪ್ ಮಾಡ್ಕೊಂಡಿರುವ ಕಾರಣಕ್ಕೆ ಅವರ ಬಗ್ಗೆ ಬಾಲಿವುಡ್ ಮಾತನಾಡಿಕೊಳ್ಳುತ್ತಿತ್ತು. ಮತ್ತೊಂದು ಕಾರಣಕ್ಕೆ ಸುಶ್ಮಿತಾ ಸೇನ್ ಅವರ ಕಡೆಗೆ ನೆಟ್ಟಿಗರ ದೃಷ್ಟಿ ನೆಟ್ಟಿದೆ.

ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರು ಐಪಿಎಲ್ ಮೊದಲ ಆವೃತ್ತಿಯ ಚೇರ್ಮನ್ ಆಗಿದ್ದ ಲಲಿತ್ ಮೋದಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಷಯದ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ಟ್ರೋಲ್ ಗಳು ಆಗಿವೆ. ಸ್ವತಹ ಲಲಿತ್ ಮೋದಿ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್ ಮಾಡುತ್ತಿರುತ್ತಾಗಿ ಹೇಳಿಕೊಂಡಿದ್ದಾರೆ. ಸುಶ್ಮಿತಾ ಸೇನ್ ಅವರಿಗೆ ಇತ್ತೀಚಿಗಷ್ಟೇ ಬ್ರೇಕ್ ಅಪ್ ಆಗಿತ್ತು ಇನ್ನು ಈ ವಿಚಾರವನ್ನು ಸುಶ್ಮಿತಾ ಸೇನ್ ಮುಕ್ತವಾಗಿ ಹೇಳಿಕೊಂಡಿದ್ದರು. ಇದಾದ ಬಳಿಕ ಸುಶ್ಮಿತಾ ಸೇನ್ ಅವರ ಹೆಸರು ಐಪಿಎಲ್ ಮೊದಲ ಆವೃತ್ತಿಯ ಚೇರ್ಮನ್ ಆಗಿದ್ದ ಲಲಿತ್ ಮೋದಿ ಜೊತೆ ತಳಕಿ ಹಾಕಿಕೊಂಡಿತ್ತು. ಆದರೆ ಇದು ಕೇವಲ ಗಾಸಿಪ್ ಅಲ್ಲ ಸ್ವತಹ ಲಲಿತ್ ಮೋದಿ ಅವರೇ ಸುಶ್ಮಿತಾ ಸೇನ್ ಕುರಿತು ಟ್ವಿಟ್ ಅನ್ನ ಮಾಡಿಕೊಂಡಿದ್ದಾರೆ. ತನ್ನ ಕುಟುಂಬದೊಂದಿಗೆ ಮಾರ್ನಿಂಗ್ ಟೂರ್ ಮುಗಿಸಿ ಲಂಡನ್ ಗೆ ವಾಪಸ್ ಆಗಿದ್ದೇನೆ ನನ್ನ ಅರ್ಧಾಂಗಿ ಸುಶ್ಮಿತಾ ಸೇನ್.  ಕೊನೆಗೂ ಜೀವನದಲ್ಲಿ ಹೊಸ ಆರಂಭ ಆಗಿದೆ’ ಇಂದು ಸುಶ್ಮಿತಾ ಸೇನ್ ಜೊತೆಗಿನ ಫೋಟೋವನ್ನು ಲಲಿತ್ ಮೋದಿ ತಮ್ಮ ಟ್ವೀಟ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಹಾಗಾದ್ರೆ ಇವರಿಬ್ಬರ ಮದುವೆ ಆಗೋಯ್ತಾ ಅಂತ ಜನ ಮಾತನಾಡಿಕೊಳ್ಳುವುದಕ್ಕೆ ಶುರು ಮಾಡಿದ್ರು.

ಆಗ ಲಲಿತ್ ಮೋದಿ ಅವರು ಮತ್ತೊಂದು ಟ್ವೀಟ್ ಮಾಡಿ ಇನ್ನಷ್ಟು ಸ್ಪಷ್ಟತೆಯನ್ನು ಕೊಟ್ಟಿದ್ದಾರೆ. ಇದು ಕ್ಲಾರಿಟಿ ನೀಡುವುದಕ್ಕಾಗಿ. ನಾವಿಬ್ಬರೂ ಡೇಟಿಂಗ್ ಮಾಡ್ತಾ ಇದ್ದೇವೆ ಶೀಘ್ರದಲ್ಲಿಯೇ ಮದುವೆಯು ಆಗುತ್ತೆ’ ಅಂತ ಮೋದಿ ಮತ್ತೆ ಟ್ವೀಟ್ ಮಾಡಿ ಜನರ ಡೌಟ್ ಕ್ಲಿಯರ್ ಮಾಡಿದ್ದಾರೆ. ಇನ್ನು ಇವರಿಬ್ಬರ ರಿಲೇಶನ್ಶಿಪ್ ಬಗ್ಗೆ ಜನ ಹೆಚ್ಚಾಗಿ ಮಾತನಾಡಿಕೊಳ್ಳುತ್ತಿರುವುದು ಮತ್ತೊಂದು ಕಾರಣಕ್ಕೆ. ಲಲಿತ್ ಮೋದಿ ಅವರಿಗೆ ಈಗ 56 ವರ್ಷ ಸುಶ್ಮಿತಾ ಸೇನ್ ಅವರಿಗೆ 46 ವರ್ಷ ವಯಸ್ಸು. ಇವರಿಬ್ಬರ ನಡುವೆ ಬರೋಬ್ಬರಿ 10 ವರ್ಷಗಳ ಅಂತರವಿದೆ. ಹೀಗೆ 10 ವರ್ಷಗಳ ಅಂತರವಿದ್ದು ಮದುವೆಯಾಗುವುದು ಹೊಸತೇನಲ್ಲ, ಆದರೆ ಇವರಿಬ್ಬರದು ಡೇಟಿಂಗ್ ಮಾಡುವ ವಯಸ್ಸಲ್ಲ. ಅಜ್ಜ ಅಜ್ಜಿ, ಅಂಕಲ್ ಆಂಟಿ ಅಂತ ನೆಟ್ಟಿಗರು ಟ್ವೀಟ್ ಮಾಡುತ್ತಿದ್ದಾರೆ.

ಸುಶ್ಮಿತಾ ಸೇನ್ ಈ ಹಿಂದೆ 2018 ರಿಂದ ರೋಹನ್ ಎನ್ನುವ ಮಾಡೆಲ್ ಜೊತೆ ಕಾಣಿಸಿಕೊಂಡಿದ್ದರು. ಸಾಕಷ್ಟು ಸೆಲೆಬ್ರಿಟಿ ವಿನ್ಯಾಸಕರ ಉಡುಪುಗಳನ್ನ ಧರಿಸಿ ರೋಹನ್ ಫ್ಯಾಶನ್ ಲೋಕದಲ್ಲಿ ರಾಂಪ್ ವಾಕ್ ಮಾಡಿದ್ದಾರೆ. ಇನ್ನು ಸುಶ್ಮಿತಾ ಸೇನ್ ರೋಹನ್ ಅವರಿಗಿಂತ 15 ವರ್ಷ ದೊಡ್ಡವರು. ಆದರೆ ಇವರಿಬ್ಬರೂ ಡೇಟಿಂಗ್ ಪ್ರೀತಿ ಅಂತ ಮುಳುಗಿದ್ದನ್ನ ನೋಡಿ ಜನ ಇವರಿಬ್ಬರೂ ಮದುವೆ ಆಗ್ತಾರೆ ಅಂತ ಅಂದುಕೊಂಡಿದ್ದರು. ಆದರೆ ಇವರಿಬ್ಬರ ನಡುವೆ ಈಗ ಬ್ರೇಕ್ ಅಪ್ ಆಗಿದೆ. ಹಾಗೆ ಸುಶ್ಮಿತಾ ಸೇನ್ ತಮ್ಮ ಹೊಸ ಜೀವನವನ್ನು ಲಲಿತ್ ಮೋದಿ ಅವರ ಜೊತೆ ಆರಂಭಿಸಿದ್ದಾರೆ.

Leave A Reply

Your email address will not be published.