ವಯಸ್ಸು 40 ದಾಟಿದ್ರು ಇಪ್ಪತ್ತರ ಹುಡುಗಿಯರೂ ನಾಚುವಂತೆ ಫಿಟ್ ಆಗಿರುವ ಬಾಲಿವುಡ್ ನಟಿಯರು ಯಾರು ಗೊತ್ತಾ! ಇಲ್ಲಿದೆ ನೋಡಿ ಮಾಹಿತಿ

ಇತರ ಯಾವುದೇ ಸಿನಿಮಾ ಇಂಡಸ್ಟ್ರಿಗೆ ಹೋಲಿಸಿದ್ರು ಬಾಲಿವುಡ್ ಒಂದು ಫ್ಯಾಂಟಸಿ ಜಗತ್ತು. ಇಲ್ಲಿ ತುಸು ರಂಗು ಹೆಚ್ಚೇ ಎನಿಸುತ್ತದೆ. ಇನ್ನು ನೀವು ಇತರ ಭಾಷೆಯ ಯಾವುದೇ ಸಿನಿಮಾ ನಟಿಯರಿಗೆ ಹೋಲಿಸಿದರೆ ಬಾಲಿವುಡ್ ನಟಿಯರ ಫಿಟ್ನೆಸ್ ಸ್ವಲ್ಪ ಜಾಸ್ತಿ. ಇಂದಿಗೂ ಇಲ್ಲಿನ ಎಷ್ಟು ನಟಿಯರನ್ನೂ ನೋಡಿ ಅವರ ವಯಸ್ಸಿನ ಊಹಿಸುವುದಕ್ಕೂ ಸಾಧ್ಯವಿಲ್ಲ. ಅಷ್ಟು ಫಿಟ್ ಅಂಡ್ ಫೈನ್ ಆಗಿ ಇರುತ್ತಾರೆ.

ಸಿನಿಮಾಗಳಲ್ಲಿ ನಟಿಸುವುದು ಮಾತ್ರವಲ್ಲದೆ ಜಾಹಿರಾತುಗಳಲ್ಲಿಯೂ ಸಿನಿಮಾ ತಾರೆಯರನ್ನು ಕಾಣಬಹುದು. ಅದರಲ್ಲೂ ಕೆಲವು ನಟಿಯರಂತು ತುಂಬಾನೇ ಅದ್ಭುತವಾಗಿ ಕಾಣಿಸಿಕೊಳ್ಳುತ್ತಾರೆ. ಹಾಗಂತ ಅವರ ವಯಸ್ಸು 20ರ ಆಸು ಪಾಸು ಎಂದುಕೊಳ್ಳಬೇಡಿ. 40 ದಾಟಿದ ಸ್ಟಾರ್ ನಟಿಯರೇ ಇಂದು ಹೆಚ್ಚಾಗಿದ್ದಾರೆ. ಹಾಗಾದ್ರೆ ಬನ್ನಿ ವಯಸ್ಸು ಅನ್ನೋದು ಕೇವಲ ನಂಬರ್ ಅಷ್ಟೇ ಎನ್ನುವಂತಹ ಬ್ಯೂಟಿ ಗಳನ್ನು ನೋಡೋಣ.

ಕರೀನಾ ಕಪೂರ್; 41 ವರ್ಷದ ಕರೀನಾ ಕಪೂರ್ ಬಾಲಿವುಡ್ ಇಂಡಸ್ಟ್ರಿಯಲ್ಲಿ ಅತ್ಯಂತ ಸುಂದರವಾದ ನಟಿ ಎನಿಸಿಕೊಂಡವರು. ಅಷ್ಟೇ ಅಲ್ಲ ಇಂದಿಗೂ ಅತಿ ಹೆಚ್ಚು ಹಣ ಸಂಭಾವನೆಯಾಗಿ ಪಡೆಯುವ ನಟಿ ಈಕೆ. ನಟಸೇಫ ಅಲಿ ಖಾನ್ ಅವರನ್ನು ಮದುವೆಯಾಗಿ ಇದೀಗ ಎರಡು ಮಕ್ಕಳ ತಾಯಿಯಾಗಿರುವ ಕರೀನಾ ಕಪೂರ್ ಇಂದಿಗೂ ಬ್ಯೂಟಿ ಕ್ವೀನ್ ಎನಿಸಿದ್ದಾರೆ.

ರಾಣಿ ಮುಖರ್ಜಿ; ಬಾಲಿವುಡ್ ನಲ್ಲಿ ಒಂದು ಕ್ರೇಜಿ ಸೃಷ್ಟಿಸಿದ ನಟಿ ರಾಣಿ ಮುಖರ್ಜಿ ಇವರ ವಯಸ್ಸು 44 ಆದರೆ ಅವರು ಸಾಧಿಸಿದ ಸಕ್ಸಸ್ ಮಾತ್ರ ಈ ವಯಸ್ಸಿನ ಮೂರು ಪಟ್ಟು. 1990ರ ದಶಕದಲ್ಲಿ ಅತ್ಯಂತ ರೋಮ್ಯಾಂಟಿಕ್ ಹೀರೋಯಿನ್ ಎಂದು ಕರೆಸಿಕೊಂಡಿರುವ ರಾಣಿ ಮುಖರ್ಜಿ ಕುಚ್ ಕುಚ್ ಹೋತಾ ಹೇ, ಸಾತಿಯಾ, ಬಂಟಿ ಔರ್ ಬಬ್ಲಿ  ಇಂತಹ ಅದ್ಭುತ ಸಿನಿಮಾಗಳಲ್ಲಿ ನಟಿಸಿದ ತಾರೆ.

ವಿದ್ಯಾ ಬಾಲನ್; ವಿದ್ಯಾಬಾಲನ್ ಅವರ ವಯಸ್ಸು 43 ಸೀರೆಯಲ್ಲಿ ಹೆಚ್ಚು ಫೇಮಸ್ ಆದ ವಿದ್ಯಾಬಾಲನ್ ಬಾಲಿವುಡ್ ನ ಅತ್ಯಂತ ದೊಡ್ಡ ಸೆಲೆಬ್ರಿಟಿ.  ಸಾಮಾನ್ಯವಾಗಿ ನಟಿಯರು ಕುಳ್ಳಗಿದ್ದರೆ ಅವಕಾಶಗಳು ಕಡಿಮೆ. ಆದರೆ ವಿದ್ಯಾಬಾಲನ್ಗೆ ಇದೆ ವರವಾಯಿತು. ಹಾಗಾಗಿ ವಿದ್ಯಾಬಾಲನ್ ಅವರು ಮಹಿಳಾ ಪ್ರಧಾನ ಪಾತ್ರದಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಕಹಾನಿ, ಪರಿಣಿತ, ಪಾ ಈ ಎಲ್ಲಾ ಸಿನಿಮಾಗಳಲ್ಲಿ ವಿದ್ಯಾಬಾಲನ್ ಅವರ ಅಭಿನಯವನ್ನು ನೋಡದೆ ಚಂದ.

ಸನ್ನಿ ಲಿಯೋನ್; ಬಾಲಿವುಡ್ ನಟಿಗೆ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಅಭಿಮಾನಿಗಳಿದ್ದಾರೆ ಸನ್ನಿ ಲಿಯೋನ್ ಇತ್ತೀಚಿಗೆ ತಮ್ಮ 41ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.  ಇವರು ಬಾಲಿವುಡ್ ನಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿಲ್ಲ. ಆದರೆ ಬಾಲಿವುಡ್ ನ ನಂಬರ್ ಒನ್ ಐಟಂ ಸಾಂಗ್ ಮಾಡುವ ನಟಿಯರಲ್ಲಿ ಸನ್ನಿ ಲಿಯೋನ್ ಮುಂಚೂಣಿಯಲ್ಲಿ ಇದ್ದಾರೆ.

ಐಶ್ವರ್ಯ ರೈ: ಮಿಸ್ ವರ್ಲ್ಡ್ ಕಿರೀಟವನ್ನು ಮೂಡಿಗೆರೆಸಿಕೊಂಡ ನಟಿ ಐಶ್ವರ್ಯ ರೈ ಅವರಿಗೆ ಇದೀಗ 48 ವರ್ಷ ವಯಸ್ಸು ಆದರೆ ಐಶ್ವರ್ಯ ರೈ ನೋಡಿದ್ರೆ ನಿಮಗೆ ಹೀಗೆ ಎಂದಿಗೂ ಅನ್ನಿಸಲು ಸಾಧ್ಯವೇ ಇಲ್ಲ ಅಂತಹ ಅದ್ಭುತ ಲುಕ್ ಹೊಂದಿರುವ ನಟಿ ಇವರು ಬಾಲಿವುಡ್ ನಲ್ಲಿ ಬಹು ಬೇಡಿಕೆಯ ನಟಿಯರಲ್ಲಿ ಐಶ್ವರ್ಯ ರೈ ಕೂಡ ಒಬ್ಬರು.

Leave A Reply

Your email address will not be published.