Cricket news: ಕೆ ಎಲ್ ರಾಹುಲ್ ಹಾಗೂ ಅತಿಯಾ ಶೆಟ್ಟಿ ಮದುವೆಗೆ ಸಾಕ್ಷಿಯಾಗಲಿದೆ ಕ್ರಿಕೆಟ್ ಲೋಕ; ಮದುವೆ ಯಾವಾಗ ಗೊತ್ತೆ!?

Cricket news: ಸದ್ಯ ಟೀಮ್ ಇಂಡಿಯಾ (Team India) ದ ಸ್ಟಾರ್ ಬ್ಯಾಟ್ಸ್ ಮ್ಯಾನ್ ಕೆ. ಎಲ್ ರಾಹುಲ್ (K.L.Rahul) ಕ್ರಿಕೆಟ್ ಆಟದಲ್ಲಿ ಗೆಲುವು ಸಾಧಿಸುವುದಕ್ಕೆ ಸ್ವಲ್ಪ ಎಡವಿದ್ರೂ, ಪ್ರೀತಿ ವಿಷಯದಲ್ಲಿ ಮಾತ್ರ ಗೆದ್ದಿದ್ದಾರೆ. ಇನ್ನೇನು ತನ್ನ ಮನದರಸಿಯ ಜೊತೆ ಹಸೆ ಮಣೆ ಏರಲಿದ್ದಾರೆ. ಕೆಎಲ್ ರಾಹುಲ್ ಹಾಗೂ ಅತಿಯಾ ಶೆಟ್ಟಿ (Athiya Shetty) ಅವರ ವಿವಾಹದ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ವರದಿ ಮಾಡಲಾಗಿದೆ. ಇದೀಗ ಇವರಿಬ್ಬರು ಯಾವಾಗ ದಾಂಪತ್ಯ (Marriage) ಜೀವನಕ್ಕೆ ಕಾಲಿರಿಸಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

JYO 1 | Live Kannada News
Cricket news: ಕೆ ಎಲ್ ರಾಹುಲ್ ಹಾಗೂ ಅತಿಯಾ ಶೆಟ್ಟಿ ಮದುವೆಗೆ ಸಾಕ್ಷಿಯಾಗಲಿದೆ ಕ್ರಿಕೆಟ್ ಲೋಕ; ಮದುವೆ ಯಾವಾಗ ಗೊತ್ತೆ!? https://sihikahinews.com/kl-rahul-and-athiya-shetty-marriage/

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಅವರು ಇದೀಗ ಹೆಚ್ಚು ಸುದ್ದಿಯಲ್ಲಿದ್ದಾರೆ ಟಿ20 ವಿಶ್ವಕಪ್ 2022ನಲ್ಲಿ ಹೆಚ್ಚು ಉತ್ತಮ ಪ್ರದರ್ಶನ ತೋರಿಸದ ಇವರನ್ನ ಸದ್ಯ ತಂಡದಿಂದ ಹೊರಕ್ಕೆ ಇಡಲಾಗಿದೆ. ನ್ಯೂಜಿಲ್ಯಾಡ್ (New Zealand) ವಿರುದ್ಧದ ಟಿ 20 ಮತ್ತು ಒಡಿಐ (ODI) ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ಇನ್ನು ಶ್ರೀಲಂಕಾ ವಿರುದ್ಧದ ನಡೆಯಲಿರುವ ಮೂರು ಪಂದ್ಯಗಳ ಟಿ ಟ್ವೆಂಟಿ (T20) ಹಾಗೂ ಏಕದಿನ ಸರಣಿಯಲ್ಲಿಯೂ ಕೂಡ ಟೀಮ್ ಇಂಡಿಯಾದ ಉಪನಾಯಕ ಕೆ ಎಲ್ ರಾಹುಲ್ ಆಡುತ್ತಿಲ್ಲ.  ಬಾಂಗ್ಲಾದೇಶ (Bangladesh) ದ ವಿರುದ್ಧ ಟೆಸ್ಟ್ ಸರಣಿ (Test match) ಆಡಿದ ಬಳಿಕ ರಾಹುಲ್ ಬಿಸಿಸಿಐ ನಿಂದ ಸಣ್ಣ ಬ್ರೇಕ್ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಇದನ್ನೂ ಓದಿ: Cricket News: ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಕೆಎಲ್ ರಾಹುಲ್ ಬೇಡಿಕೊಂಡಿದ್ದು ಏನಂತೆ ಗೊತ್ತಾ? ಬಾಂಗ್ಲಾ ವಿರುದ್ಧ ಗೆಲುವು ನಮ್ದೆ ಅಂತಿದ್ದಾರೆ ರಾಹುಲ್!

ಏನು ಕ್ರಿಕೆಟ್ ಆಟದಿಂದ ಸದ್ಯಾ ಬ್ರೇಕ್ ತೆಗೆದುಕೊಂಡಿರುವ ಕೆಎಲ್ ರಾಹುಲ್ ಜನವರಿ 2003ರ ಮೊದಲ ವಾರದಲ್ಲಿಯೇ ಪ್ರೀತಿಸಿದ ಹುಡುಗಿ ಅತಿಯ ಶೆಟ್ಟಿಯ ಜೊತೆ ಮದುವೆಯಾಗಲಿದ್ದಾರೆ. ಬಾಲಿವುಡ್ ನ ಸ್ಟಾರ್ ನಟ ಸುನಿಲ್ ಶೆಟ್ಟಿ ಅವರ ಮಗಳು ಅತಿಯಾ ಶೆಟ್ಟಿ. ರಾಹುಲ್ ತಾವಾಗೆ ಬಿಸಿಸಿಐನಿಂದ ವಿರಾಮ ಕೇಳಿರುವುದಾಗಿ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಕೆಲವು ವೈಯಕ್ತಿಕ ಕಾರಣಗಳಿಂದಾಗಿ ರಾಹುಲ್ ವಿಶ್ರಾಂತಿ ಬಯಸಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ತಮ್ಮ ಮದುವೆ ವಿಚಾರಕ್ಕೂ ಕೂಡ ವಿಶ್ರಾಂತಿ ಬಯಸಿರಬಹುದು ಎಂದು ಊಹಿಸಲಾಗುತ್ತಿದೆ. ಸುನಿಲ್ ಶೆಟ್ಟಿ ಅವರ ಮಗಳು ಅತಿಯ ಶೆಟ್ಟಿ ಜೊತೆ ಕೆಎಲ್ ರಾಹುಲ್ 2018 ರಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇದನ್ನ ಸುನಿಲ್ ಶೆಟ್ಟಿ ಕೂಡ ಒಮ್ಮೆ ಖಚಿತಪಡಿಸಿದ್ರು. ಸಿನಿಮಾ ನಟಿಯರು ಹಾಗೂ ಕ್ರಿಕೆಟ್ ಆಟಗಾರರು ಪ್ರೀತಿಸಿ ಮದುವೆ ಆಗಿರುವ ಸಾಕಷ್ಟು ಹಿಸ್ಟರಿ ಇದೆ ಇದೀಗ ರಾಹುಲ್ ಹಾಗೂ ಅತಿಯಾ ಶೆಟ್ಟಿ, ಹೆಸರು ಕೂಡ ಈ ಲಿಸ್ಟ್ ಗೆ ಸೇರಿಕೊಳ್ಳಲಿದೆ. ರಾಹುಲ್ ವಿಶ್ರಾಂತಿ ಪಡೆದು ಮದುವೆಯಾಗಿ ಬಂದ ನಂತರ ಮತ್ತೆ ಟೀಮ್ ಇಂಡಿಯಾ ಕ್ರಿಕೆಟ್ ನಲ್ಲಿ ಫಾರ್ಮ್ ಉಳಿಸಿಕೊಳ್ಳುತ್ತಾರಾ? ಕಾದು ನೋಡಬೇಕು.

Comments are closed.