Winter Care: ಚಳಿಗಾಲದಲ್ಲಿ ತ್ವಚೆ ರಕ್ಷಣೆಗೆ ಇದೊಂದು ವಸ್ತು ಸಾಕು, ಮಾರ್ಕೆಟ್ ನಿಂದ ಮಾಯಿಶ್ಚರೈಸರ್ ತರುವ ಅಗತ್ಯವೇ ಇಲ್ಲ, ಯಾವ ವಸ್ತು ಗೊತ್ತಾ?

Winter Care: ಸ್ನೇಹಿತರೆ ಸಾಮಾನ್ಯವಾಗಿ ನಾವೆಲ್ಲರೂ ತೆಂಗಿನೆಣ್ಣೆಯನ್ನು ಮನೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಬಳಸುತ್ತೇವೆ. ಅಡುಗೆ (Food) ಮಾಡುವುದಕ್ಕೆ, ಪೂಜೆಗೆ, ತ್ವಚೆಗೆ (Skin Care) ಹೀಗೆ.. ತೆಂಗಿನೆಣ್ಣೆ (Coconut Oil) ಯಲ್ಲಿ ಸಾಕಷ್ಟು ಆರೋಗ್ಯಕರ ಪ್ರಯೋಜನಗಳು ಕೂಡ ಇವೆ. ಅದರಲ್ಲೂ ತ್ವಚೆಗೆ ತೆಂಗಿನೆಣ್ಣೆಯಷ್ಟು ಪರಿಣಾಮಕಾರಿ ಚಿಕಿತ್ಸೆ ಬೇರೊಂದಿಲ್ಲ. ಹಾಗಾದರೆ ಬನ್ನಿ ತೆಂಗಿನೆಣ್ಣೆಯನ್ನು ಹೇಗೆಲ್ಲಾ ಬಳಸಬಹುದು ನೋಡೋಣ.

JYO 1 | Live Kannada News
Winter Care: ಚಳಿಗಾಲದಲ್ಲಿ ತ್ವಚೆ ರಕ್ಷಣೆಗೆ ಇದೊಂದು ವಸ್ತು ಸಾಕು, ಮಾರ್ಕೆಟ್ ನಿಂದ ಮಾಯಿಶ್ಚರೈಸರ್ ತರುವ ಅಗತ್ಯವೇ ಇಲ್ಲ, ಯಾವ ವಸ್ತು ಗೊತ್ತಾ? https://sihikahinews.com/use-coconut-oil-for-winter-skin-care/

ಮೊದಲನೆಯದಾಗಿ ಕೂದಲಿ (Hair care)ಗೆ ತೆಂಗಿನೆಣ್ಣೆ ಬಳಸುವುದು ಬಹಳ ಒಳ್ಳೆಯದು. ನಮ್ಮ ಪೂರ್ವಜರು ಕೂಡ ಕೂದಲಿಗೆ ತೆಂಗಿನೆಣ್ಣೆ ಯನ್ನು ಬಳಸುತ್ತಿದ್ದರು. ಹಾಗಾಗಿಯೇ ನಮ್ಮ ಹಿಂದಿನವರ ಕೂದಲು ಎಷ್ಟು ಸಮೃದ್ಧವಾಗಿ ಇರುತ್ತಿತ್ತು ಅಲ್ವೇ? ಕೂದಲಿಗೆ ತೆಂಗಿನೆಣ್ಣೆಯನ್ನ ಸ್ವಲ್ಪ ಬಿಸಿ ಮಾಡಿ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ ನಂತರ ಸ್ವಲ್ಪ ಸಮಯ ಬಿಟ್ಟು ಕೂದಲನ್ನು ತೊಳೆಯಿರಿ. ಇದನ್ನೂ ಓದಿ: Astrological Remedies: ಮನೆಯಲ್ಲಿ ಈ ತುಳಸಿ ಗಿಡ ನೆಟ್ಟರೆ ಮನೆಯಲ್ಲಿ ದಾರಿದ್ರ್ಯ ಖಂಡಿತ! ಯಾವ ತುಳಸಿ ಗೊತ್ತಾ?

ಇನ್ನು ಚಳಿಗಾಲದಲ್ಲಿ ದಿನವೂ ತಪ್ಪದೇ ತೆಂಗಿನೆಣ್ಣೆ ಮಸಾಜ್ ಮಾಡಿದರೆ ಮಾರುಕಟ್ಟೆಯಲ್ಲಿ ಸಿಗುವ ಬೇರೆ ಮಾಯಿಶ್ಚೈಸರ್ (Moisturizer)  ಗಳೇ ಬೇಕಾಗಿಲ್ಲ. ಜೊತೆಗೆ ಸ್ನಾನ ಮಾಡುವಾಗ ನೀರಿಗೆ ಒಂದು ಹನಿ (ಒಂದು ಬಕೆಟ್ ನೀರಿಗೆ) ತೆಂಗಿನೆಣ್ಣೆ ಹಾಕಿಕೊಂಡು ಸ್ನಾನ ಮಾಡಿದ್ರೆ ತ್ವಚೆ ಡ್ರೈ ಆಗುವುದಿಲ್ಲ.

ಇನ್ನು ತೆಂಗಿನೆಣ್ಣೆ ಎನ್ನುವುದು ಅತ್ಯಂತ ಉತ್ತಮ ಮೇಕಪ್ ರಿಮೂವರ್ (Makeup Remover) . ನೀವು ನೂರಾರು ರೂಪಾಯಿ ಹಣ ಕೊಟ್ಟು ಮೇಕಪ್ ರಿಮೂವರ್ ತರುವ ಬದಲು ತೆಂಗಿನೆಣ್ಣೆಯನ್ನು ಬಳಸಿ ಸುಲಭವಾಗಿ ಮೇಕಪ್ ರಿಮೂವ್ ಮಾಡಿಕೊಳ್ಳಬಹುದು.

ಇನ್ನು ಕೈ ಕಾಲುಗಳ ಹೇರ್ ತೆಗೆಯುವ ಮೊದಲು ತೆಂಗಿನೆಣ್ಣೆಯನ್ನು ಲೈಟ್ ಆಗಿ ಹಚ್ಚಿ ಕೂದಲು ತೆಗೆದ ನಂತರವೂ ತೆಂಗಿನೆಣ್ಣೆ ಹಚ್ಚಿ. ತ್ವಚೆ ಮೃದುವಾಗುತ್ತದೆ.

ತುಟಿ ಚಳಿಗಾಲದಲ್ಲಿ ಬಿರುಕು ಬಿಡುವುದು ಸಹಜ. ಹಾಗಿದ್ದಾಗ ತೆಂಗಿನೆಣ್ಣೆಯನ್ನು ಆಗಾಗ ಹಚ್ಚಿ ತುಟಿ ಮೃದುವಾಗುತ್ತದೆ.

Comments are closed.