Horoscope: ತುಲಾ ರಾಶಿಯವರಿಗೆ ಶನಿ ಕಾಟದಿಂದ ಮುಕ್ತಿ; 2023ರ ತುಲಾ ರಾಶಿಯ ವಾರ್ಷಿಕ ಭವಿಷ್ಯ ಹೇಗಿದೆ ಗೊತ್ತಾ?

Horoscope: ಪ್ರತಿ ಬಾರಿ ಗ್ರಹಗಳು ತಮ್ಮ ಸ್ಥಾನಪಲ್ಲಟ ಮಾಡಿದಾಗ ಚಲನೆ ಮಾಡಿದಾಗ ಈ ಎಲ್ಲಾ ರಾಶಿಗಳ ಮೇಲೂ ಒಂದಲ್ಲಾ ಒಂದು ರೀತಿಯ ಪ್ರಭಾವ ಬೀರುತ್ತದೆ. ಕೆಲವು ಗ್ರಹಗಳು ಸಕಾರಾತ್ಮಕ ಪ್ರಭಾವ ಬೀರಿದರೆ ಕೆಲವು ರಾಶಿಗಳ್ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು ಹೊಸ ವರ್ಷ ಅಂದರೆ 2023ರಲ್ಲಿ ತುಲಾ ರಾಶಿಯ ಮೇಲೆ ಯಾವ ರಾಶಿಯ ಸ್ಥಾನಪಲ್ಲಟ ಯಾವ ರೀತಿ ಪರಿಣಾಮ ಬೀರಬಹುದು ನೋಡೋಣ ಬನ್ನಿ.

ವೃತ್ತಿ ಜೀವನ

ತುಲಾ ರಾಶಿಯವರಿಗೆ ವರ್ಷದ ಆರಂಭದಲ್ಲಿ ಶನಿಯಿಂದ ಮುಕ್ತಿ ಸಿಗುತ್ತದೆ. ಹಾಗಾಗಿ ವೃತ್ತಿ ಜೀವನ ಉತ್ತಮವಾಗಿರುತ್ತದೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸು ಸಿಗುತ್ತಿದೆ. ಈ ವರ್ಷ ತುಲಾ ರಾಶಿಯವರು ಹೊಸ ಕೆಲಸವನ್ನು ಮಾಡುವ ಸಾಧ್ಯತೆ ಇದೆ. ಇನ್ನು ಕೆಲಸ ಮಾಡುವ ಸ್ಥಳದಲ್ಲಿ ಗೌರವ, ಬಡ್ತಿ ಸಿಗುವ ಸಾಧ್ಯತೆ ಇದೆ. ಇಲ್ಲಿಯವರೆಗೆ ಯಾವ ಸಮಸ್ಯೆ ನಿಮ್ಮನ್ನು ಕಾಡುತ್ತಿತ್ತು. ಅದನ್ನು ತೊಡೆದುಹಾಕಿ ನೀವು ನಿಮ್ಮ ಕೆಲಸದಲ್ಲಿ ಹೆಚ್ಚು ಗಮನ ಕೇಂದ್ರೀಕರಿಸುತ್ತೀರಿ. ಆದಾಗ್ಯೂ ನಿಮಗೆ ಯಾವುದೇ ಜವಾಬ್ದಾರಿಯನ್ನು ನೀಡಿದರೆ ಅದನ್ನು ಬಹಳ ಗಂಭೀರವಾಗಿ ಪರಿಗಣಿಸಿ ಆ ಜವಾಬ್ದಾರಿಯನ್ನು ನಿಭಾಯಿಸಿ ಇಲ್ಲದೆ ಇದ್ದರೆ ಸಮಸ್ಯೆ ಉಂಟಾಗಬಹುದು. ಒಟ್ಟಾರೆ ವೃತ್ತಿ ಜೀವನದಲ್ಲಿ ಉತ್ತಮ ಫಲ ಈ ವರ್ಷ ಸಿಗಲಿದೆ. ಇದನ್ನೂ ಓದಿ: Yearly Horoscope: ವೃಷಭ ರಾಶಿಯ 2023 ವಾರ್ಷಿಕ ರಾಶಿ ಫಲ ಹೇಗಿದೆ ಗೊತ್ತಾ ಇಲ್ಲಿದೆ ನೋಡಿ?

ಆರ್ಥಿಕ ಪರಿಸ್ಥಿತಿ

ತುಲಾ ರಾಶಿಯವರ ಈ ವರ್ಷದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ ಅಲ್ಲದೆ ಹೆಚ್ಚು ಹಣ ಸಂಗ್ರಹಿಸುವ ಸಾಧ್ಯತೆ ಇದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಉತ್ತಮ ಲಾಭ ಸಿಗುತ್ತದೆ ಆದರೆ ಅನುಭವಿ ಹೂಡಿಕೆದಾರರನ್ನ ಕೇಳಿ ಈ ಕೆಲಸಕ್ಕೆ ಕೈ ಹಾಕುವುದು ಒಳ್ಳೆಯದು. ಹಿಂದಿನ ವರ್ಷದಲ್ಲಿ ನಷ್ಟ ಅನುಭವಿಸಿ ಲಾಭ ಕಡಿಮೆ ಗಳಿಸಿದ ವ್ಯಾಪಾರಸ್ಥರಿಗೆ ಕೂಡ ಈ ವರ್ಷ ಲಾಭ ಸಿಗಲಿದೆ. ಸಾಲ ತೆಗೆದಕೊಂಡವರು ಸಾಲವನ್ನು ಮರುಪಾವತಿ ಮಾಡಬಹುದು. ಏಪ್ರಿಲ್ ತಿಂಗಳ ನಂತರ ಆದಾಯದಲ್ಲಿ ಹೆಚ್ಚಳ ಆಗುತ್ತದೆ. ಅದಕ್ಯೂ ಆಗಸ್ಟ್ ನಿಂದ ನವೆಂಬರ್ ವರೆಗೆ ಹಣಕಾಸಿನ ವಿಚಾರದಲ್ಲಿ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಇದನ್ನೂ ಓದಿ:Kannada Astrology: ಗುರು ಬದಲಾವಣೆಯಿಂದ ಕನ್ಯಾ ರಾಶಿಯವರಿಗೆ ಸಿಗಲಿದೆ ಉತ್ತಮ ಫಲ ಕನ್ಯಾ ರಾಶಿ 2023ರ ವಾರ್ಷಿಕ ಭವಿಷ್ಯ ಹೇಗಿದೆ ಗೊತ್ತಾ?

 ಕೌಟುಂಬಿಕ ಹಾಗೂ ವಿವಾಹ ಜೀವನ

ವೈವಾಹಿಕ ಜೀವನ ಈ ವರ್ಷ ಸುಧಾರಿಸುತ್ತದೆ. ಏಳನೇ ಮನೆಯಲ್ಲಿ ಗುರು ಇರುವುದರಿಂದ ಪತಿ-ಪತ್ನಿಯರ ನಡುವೆ ಇರುವ ಕಲಹ, ಮನಸ್ಥಾಪಗಳು ಕೊನೆಗೊಳ್ಳುತ್ತವೆ. ಜೀವನದಲ್ಲಿ ಹೊಸ ಭರವಸೆ ಮೂಡುತ್ತದೆ ನಿಮ್ಮ ಸಂಗಾತಿ ನಿಮ್ಮ ಜೊತೆ ಸ್ನೇಹಿತರಂತೆ ಉತ್ತಮವಾಗಿ ಇರುತ್ತಾರೆ. ನಿಮ್ಮಿಬ್ಬರ ಜೀವನದಲ್ಲಿ ಹೊಸ ಅತಿಥಿ ಆಗಮಿಸುವ ಸಾಧ್ಯತೆ ಇದೆ. ಇನ್ನು ಒಂಟಿಯಾಗಿರುವವರು ಮಾರ್ಚ್ ತಿಂಗಳಿನ ನಂತರ ಸಂಗಾತಿಯನ್ನು ಪಡೆಯಬಹುದು ಪ್ರೀತಿಯಲ್ಲಿ ಇರುವವರು ನಿಮ್ಮ ಸಂಬಂಧದ ಬಗ್ಗೆ ಕಾಳಜಿ ವಹಿಸಿ. ಮದುವೆಯ ಪ್ರಸ್ತಾಪ ಈ ವರ್ಷ ಮಾಡುವುದು ಅಷ್ಟು ಸೂಕ್ತವಲ್ಲ. ಶನಿಯಿಂದ ಮುಕ್ತಿ ಪಡೆಯುವ ತುಲಾ ರಾಶಿಯವರು ಮನೆಯವರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳುತ್ತಾರೆ. ನಿಮ್ಮ ಸಹೋದರಿಯ ಬೆಂಬಲ ನಿಮಗೆ ಸಿಗುತ್ತದೆ. ಇನ್ನು ಈ ವರ್ಷ ನೀವು ಮದುವೆ ವಯಸ್ಸಿಗೆ ಬಂದಿದ್ದರೆ ನಿಮ್ಮ ಮನೆಯವರು ನಿಮ್ಮ ಮದುವೆಯನ್ನು ನಿಶ್ಚಯಿಸುವ ಸಾಧ್ಯತೆಯೂ ಇದೆ. ಇದನ್ನೂ ಓದಿ:Kannada Astrology: ವರ್ಷದ ಆರಂಭದಲ್ಲಿಯೇ ಚಲಿಸುವ ಗ್ರಹಗಳು ವರ್ಷಪೂರ್ತಿ ಸಿಂಹ ರಾಶಿಯ ಮೇಲೆ ಎಂತಹ ಪರಿಣಾಮ ಬೀರಲಿವೆ ಗೊತ್ತಾ?

ಆರೋಗ್ಯ

ಇನ್ನು ಆರೋಗ್ಯದ ಬಗ್ಗೆ ಹೇಳುವುದಾದರೆ ಈ ರಾಶಿಯವರ ಆರೋಗ್ಯ ಸ್ಥಿತಿ ಹೊಸ ವರ್ಷದ ಆರಂಭದಿಂದ ಉತ್ತಮವಾಗಿರುತ್ತದೆ ಆದರೆ ಮಾರ್ಚ್ ತಿಂಗಳಿನ ಹೊರಗೆ ಶೀತ ಕೆಮ್ಮು ಜ್ವರ ಇಂತಹ ಸಣ್ಣಪುಟ್ಟ ಸಮಸ್ಯೆ ನಿಮ್ಮನ್ನ ಭಾವಿಸಬಹುದು ಅದನ್ನು ಹೊರತುಪಡಿಸಿದರೆ ವರ್ಷ ಪೂರ್ತಿ ಆರೋಗ್ಯ ಉತ್ತಮವಾಗಿರುತ್ತದೆ ಹಾಗಾಗಿ ನೀವು ಇತರ ಚಟುವಟಿಕೆಯಲ್ಲಿ ಸರಿಯಾಗಿ ಪಾಲ್ಗೊಂಡು ಯಶಸ್ಸನ್ನ ಗಳಿಸುತ್ತೀರಿ. ಇದನ್ನೂ ಓದಿ: Astrology: ಹೊಸ ವರ್ಷ ಮೇಷ ರಾಶಿಯವರಿಗೆ ಹೊತ್ತು ತರಲಿದೆ ಭಾರಿ ಅದೃಷ್ಟ; ವೃತ್ತಿ, ವಿವಾಹ, ಹಣದ ಹರಿವು ಹೀಗಿರಲಿದೆ ಗೊತ್ತೇ?

ಅದೃಷ್ಟ ಸಂಖ್ಯೆ ಮತ್ತು ಪರಿಹಾರಗಳು

ತಲಾ ರಾಶಿಯವರ ಅದೃಷ್ಟ ಸಂಖ್ಯೆ- 5 ಮತ್ತು 8. ಇನ್ನು ಸಮಸ್ಯೆಯ ಪರಿಹಾರಕ್ಕೆ ಶುಕ್ರವಾರದಂದು ಉಪವಾಸ ಮಾಡುವುದು ಒಳ್ಳೆಯದು. ಪ್ರತಿದಿನ ತಪ್ಪದೆ ಶ್ರೀಸೂಕ್ತವನ್ನು ಪಠಿಸಿ. ಶ್ರೀ ಗಜೇಂದ್ರ ಮೋಕ್ಷ ಸ್ತೋತ್ರವನ್ನು ಪಠಿಸಿ. ನಿರ್ಗತಿಕರಿಗೆ ಕೈಲಾದಷ್ಟು ಸಹಾಯ ಮಾಡಿದರೆಒಳಿತು. ಅದೇ ರೀತಿ ಶುಕ್ಲ ಪಕ್ಷದ ಶುಕ್ರವಾರ, ವಜ್ರ ಅಥವಾ ರತ್ನವನ್ನು ಉಂಗುರದ ಬೆರಳಿಗೆ  ಧರಿಸುವುದು ಉತ್ತಮ ಫಲ ಕೊಡುತ್ತದೆ.

Comments are closed.