Karnataka international film festival 2022: ಮೊದಲ ಚಿತ್ರಕ್ಕೇ ’ಅತ್ಯುತ್ತಮ ನಾಯಕ ನಟ’ ಪ್ರಶಸ್ತಿ ಮುಡಿಗೇರಿಸಿಕೊಂಡ ವಿರೇನ್ ಕೇಶವ್!

Karnataka international film festival 2022: ಸಿನಿಮಾದಲ್ಲಿ ನಟಿಸಿದ ಮಾತ್ರಕ್ಕೆ ಎಲ್ಲರೂ ಯಶಸ್ಸು ಸಾಧಿಸುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಪ್ರತಿಭೆಯ ಜೊತೆಗೆ ನಟರಲ್ಲಿ ಲಕ್ (Luck) ಕೂಡ ಬೇಕು ಹಾಗೆ ನೋಡುವುದಾದರೆ ತಮ್ಮ ಮೊದಲ ಚಿತ್ರದಲ್ಲಿಯೇ ಅತ್ಯದ್ಭುತ ಪ್ರತಿಭೆಯನ್ನು ತೋರಿಸಿ ಚೊಚ್ಚಲ ನಾಯಕ ನಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ವೀರೇನ್ ಕೇಶವ್ (Viren Keshav) ನಿಜಕ್ಕೂ ಸ್ಯಾಂಡಲ್ ವುಡ್ (Sandalwood) ಇಂಡಸ್ಟ್ರಿಯ ಉದಯೋನ್ಮುಖ ನಟ ಎನಿಸಿಕೊಳ್ಳುವುದರಲ್ಲಿ ಡೌಟ್ ಇಲ್ಲ. ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಧಾರವಾಡ (Dharwad) ಇವರು ಆಯೋಜಿಸಿದ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ 2022, ಈ ಗೌರವಾನ್ವಿತ ವೇದಿಕೆಯಲ್ಲಿ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ವೀರೇನ್ ಕೇಶವ್ ತಮ್ಮದಾಗಿಸಿಕೊಂಡಿದ್ದಾರೆ.

ಡಾ. ಶಿವಪ್ಪ ಅವರ ನಿರ್ಮಾಣ (Production) ದಲ್ಲಿ ಕಾಕ್ಟೇಲ್ (Cocktail)  ಎನ್ನುವ ಚಿತ್ರ ಸಿದ್ಧವಾಗಿದೆ. ಇನ್ನೇನು ಅಭಿಮಾನಿಗಳ ಎದುರು ವಿರೇನ್ ಕೇಶವ್ ಅವರ ಚೊಚ್ಚಲ ಸಿನಿಮಾ ತೆರೆ ಕಾಣಲಿದೆ. ವೀರೇನ್ ಕೇಶವ್ ಅವರಿಗೆ ಬಾಲ್ಯದಿಂದಲೂ ಕಲೆ ಸಾಹಿತ್ಯ ನಾಟಕ ಮೊದಲಾದವುಗಳಲ್ಲಿ ಆಸಕ್ತಿ ಇತ್ತು ಹಾಗಾಗಿ ಶಾಲಾ-ಕಾಲೇಜುಗಳಲ್ಲಿ ಒಂದಲ್ಲ ಒಂದು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ನಟನೆಯ ಬಗ್ಗೆ ಅಪಾರವಾದ ಆಸಕ್ತಿ ಇದ್ದ ವಿರೇನ್ ಎಂಬಿಎ ಶಿಕ್ಷಣವನ್ನ ಪಡೆದ ನಂತರ ಮುಂಬೈನಲ್ಲಿರುವ ಅನುಪಮ್ ಖೇರ್ (Anupam Kher) ಆಕ್ಟಿಂಗ್ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ.

ನಟನೆಗೆ ಬರುವುದಕ್ಕೂ ಮೊದಲು ಒಬ್ಬ ಸಂಪೂರ್ಣ ನಟನಾಗಲು ಯಾವ ರೀತಿ ವಿದ್ಯೆಯನ್ನ ಕರಗತ ಮಾಡಿಕೊಳ್ಳಬೇಕು ಎಂಬುದು ವಿರೇನ್ ಕೇಶವ ಅವರು ಚೆನ್ನಾಗಿ ಅರಿತಂತಿದೆ. ಹಾಗಾಗಿ ಅವರ ಚೊಚ್ಚಲ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದ್ದು!

ಕಾಕ್ಟೇಲ್ ಸಿನಿಮಾ ಭಾರಿ ಕುತೂಹಲ ಮೂಡಿಸಿದೆ. ಇದೇ ಬರುವ ಜನವರಿ 6ರಂದು ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು ಸಿನಿಪ್ರಿಯರು ಕಾತುರದಿಂದ ಈ ಸಿನಿಮಾ ವೀಕ್ಷಿಸಲು ಕಾಯುತ್ತಿದ್ದಾರೆ. ಕೊಕ್ಟೇಲ್ ಸಿನಿಮಾದ ಹಾಡು ಹಾಗೂ ಫಸ್ಟ್ ಲುಕ್ ರಿಲೀಸ್ ಆಗಿದೆ ಇದರಲ್ಲಿ ಪ್ರತಿಭಾನ್ವಿತ ಹುಡುಗ್ ವಿರೇನ್ ಕೇಶವ್ ಹಾಗೂ ನಾಯಕಿಯಾಗಿ  ಅಭಿನಯಿಸುತ್ತಿರುವ ಚರಿಷ್ಮಾ ಅವರ ನಟನೆಯನ್ನು ಜನ ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ ವಿಜಯಲಕ್ಷ್ಮಿ ಕಂಬೈನ್ಡ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ ನಿರ್ದೇಶಕ ಶ್ರೀರಾಮ್ ಆಕ್ಷನ್ ಕಟ್ ಹೇಳಿದ್ದಾರೆ. ಇದನ್ನೂ ಓದಿ: Kannada Film: <strong>ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿರಸಿಕರಿಗೆ ‘ಕಾಕ್ಟೇಲ್’(Cocktail) ನೀಡಿದ ವೀರೇನ್ ಕೇಶವ್</strong>

ಇನ್ನು ಶೋಭರಾಜ್, ರಮೇಶ್ ಪಂಡಿತ್, ಮಹಾಂತೇಶ್, ಶಿವಮಣಿ, ಚಂದ್ರಕಲಾ ಮೋಹನ್, ಕರಿ ಸುಬ್ಬು ಮೊದಲಾದ ದಿಗ್ಗಜ ನಟರು ಮುಖ್ಯ ಭೂಮಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಾಕ್ಟೇಲ್ ಸಿನಿಮಾದ ಸುಮಧುರ ಹಾಡುಗಳನ್ನು ಎ2 ಮ್ಯೂಸಿಕ್ ಬಿಡುಗಡೆ ಮಾಡಿದ್ದು ಯೂಟ್ಯೂಬ್ ನಲ್ಲಿ ನೀವು ನೋಡಬಹುದು. ಅರ್ಮಾನ್ ಮಲ್ಲಿಕ್ ಹಾಡಿರುವ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದೆ.

ಸ್ಯಾಂಡಲ್ ವುಡ್ ನ ಉದಯೋನ್ಮುಖ, ಪ್ರತಿಭಾವಂತ ನಟ ವೀರೇಂದ್ರ ಕೇಶವ್ ಅವರ ಮೊದಲ ಸಿನಿಮಾಕ್ಕೆ ಅವರ ಅಭಿಮಾನಿಗಳು ಕನ್ನಡಿಗರು ಬೆಸ್ಟ್ ವಿಶಸ್ ತಿಳಿಸಿದ್ದಾರೆ ಜೊತೆಗೆ ಚೊಚ್ಚಲ ನಟ ಎನ್ನುವ ಪ್ರಶಸ್ತಿ ಗಳಿಸಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Comments are closed.