ಹೊಸ ವರ್ಷಕ್ಕೆ ತೂಕ ಇಳಿಸುವ ನಿರ್ಧಾರ ಕೈಗೊಂಡಿದ್ದೀರಾ? ಸೈಡ್ ಎಫೆಕ್ಟ್ ಇಲ್ಲದ ಆಯುರ್ವೇದಿಕ್ ಟಿಪ್ಸ್ ಏನು ಗೊತ್ತಾ?

ಬಹುತೇಕ ಜನರು ವರ್ಷದ ಆರಂಭದಲ್ಲಿ ಕೆಲವು ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಕೆಲವೊಂದು ಕೆಟ್ಟ ಚಟಗಳನ್ನು ಮಾಡುತ್ತಿದ್ದರೆ ಅದನ್ನು ಬಿಡಬೇಕು. ಉದ್ಯಮದಲ್ಲಿ ಹೆಚ್ಚಿನ ಲಾಭಗಳಿಸಬೇಕು, ವಿದ್ಯಾರ್ಥಿಗಳಾದರೆ ಹೆಚ್ಚಿನ ಅಧ್ಯಯನ ಮಾಡಬೇಕು ಹೀಗೆ ಹಲವು ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಇನ್ನು ಕೆಲವರು ಆರೋಗ್ಯದ ಕಾರಣಕ್ಕಾಗಿ ತೂಕ ಹೆಚ್ಚಾಗಿದ್ದು ಅದನ್ನು ಇಳಿಸಬೇಕು ಎನ್ನುವ ನಿರ್ಧಾರ ಕೈಗೊಂಡಿರುತ್ತಾರೆ. ಅದಕ್ಕೆ ಸರಿಯಾದ ದಾರಿ ಮಾತ್ರ ತಿಳಿದಿರುವುದಿಲ್ಲ. ಈಗ ನಾವು ಹೇಳುವ ಟ್ರಿಕ್ಸ್ ಫಾಲೋ ಮಾಡಿದರೆ ನಿಮಗೆ ಯಾವುದೇ ಸೈಡ್ ಎಫೆಕ್ಟ್ ಇಲ್ಲದ ತೂಕವನ್ನು ಇಳಿಸಿಕೊಳ್ಳಬಹುದು.

ಹೊಸ ವರ್ಷ ಆಗಮನವಾಗಿಬಿಟ್ಟಿದೆ. ಎಲ್ಲರು ಸಖತ್ ಆಗಿ ಈ ವರ್ಷವನ್ನು ಸೆಲಬ್ರೇಟ್ ಮಾಡಿರುತ್ತಾರೆ. ಸ್ನೇಹಿತರು, ಮನೆ ಮಂದಿಯ ಜೊತೆ ಚೆನ್ನಾಗಿ ಎಂಜಾಯ್ ಮಾಡಿರುತ್ತಾರೆ. ಈ ವೇಳೆ ಹಲವು ರೆಸಲ್ಯೂಶನ್ ಸಹಿತ ತೆಗೆದುಕೊಂಡಿರುತ್ತಾರೆ.

ತೂಕ ಕಳೆದುಕೊಳ್ಳಲು ಆಯುರ್ವೇದ ಮಾರ್ಗ ಬಹಳ ಪರಿಣಾಮಕಾರಿ ಹಾಗೂ ಯಾವುದೇ ಅಡ್ಡ ಪರಿಣಾಮವಿರುವುದಿಲ್ಲ. ಈ ಆಯುರ್ವೇದಿಕ್ ಮಾರ್ಗ ನಿಮಗೆ ವರ್ಷ ಪೂರ್ತಿ ಆರೋಗ್ಯವಾಗಿರಲೂ ಸಹಾಯ ಮಾಡುತ್ತವೆ.

ತೂಕ ಇಳಿಸಲು ದೇಹದಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗುವುದು ಮುಖ್ಯವಾಗಿರುತ್ತದೆ. ಅದಕ್ಕೆ ನೀವು ಬೆಳಿಗ್ಗೆ ಬೇಗನೇ ಎಳಬೇಕು. ದೇಹಕ್ಕೆ ಸರಿಯಾದ ಪೋಷಣೆ ಸಿಗಲು ಹಾಗೂ ಚಯಾಪಚಯ ಕ್ರಿಯೆ ಸರಿಯಾಗಲು ಸೂರ್ಯನ ಬೆಳಕು ಬೇಕು. ವಿಟಾಮಿನ್ ಡಿ ಪಡೆಯುವ ಸಲುವಾಗಿ ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುನ್ನ ಎಳುವುದನ್ನು ರೂಢಿ ಮಾಡಿಕೊಳ್ಳಿ. ಬೆಳಿಗ್ಗೆ ೯ ಗಂಟೆಯೊಳಗೆ ಸೂರ್ಯನ ಬಿಸಿಲು ನಿಮಗೆ ಸೋಕಿದರೆ ನಿಮಗೆ ಸಾಕಷ್ಟು ಪ್ರಮಾಣದ ವಿಟಾಮಿನ್ ಡಿ ಸಿಗುತ್ತದೆ. ಈ ಸಣ್ಣ ಅಭ್ಯಾಸ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ.

ಅಡುಗೆ ಮಾಡುವುದು ಬೇಜಾರಿನ ಕೆಲಸವಲ್ಲ. ಆಹಾರವನ್ನು ನೀವೆ ಕಾಳಜಿಯಿಂದ ತಯಾರು ಮಾಡಬೇಕು. ನಿಮಗೆ ಇಷ್ಟವಾದ, ನಿಮಗೆ ಮನಸ್ಸಿಗೆ ಖುಷಿ ಅನಿಸುವ ಅಡುಗೆ ಮಾಡಿ ಊಟ ಮಾಡಬೇಕು. ಇದು ದೇಹದ ಬಗ್ಗೆ ಕಾಳಜಿ ವಹಿಸಲು ಅತ್ಯುತ್ತಮ ಮಾರ್ಗವಾಗಿದೆ. ನೀವೇ ತಯಾರಿಸಿದ ಆಹಾರ ಸೇವನೆ ಮಾಡುವುದು ನಿಮ್ಮ ಆರೋಗ್ಯ ವೃದ್ಧಿಗೆ ಸಹಕಾರಿ.

ಮುಖ್ಯವಾಗಿ ಪಂಚೆಂದ್ರಿಯಗಳ ಬಗ್ಗೆ ಲಕ್ಷ್ಯ ವಹಿಸಬೇಕು. ಅವುಗಳು ಆರೋಗ್ಯವಂತವಾಗಿ ಇರುವಂತೆ ನೋಡಿಕೊಳ್ಳಬೇಕು. ಕಿವಿಗೆ ಆಗಾಗ ತೆಂಗಿನ ಎಣ್ಣೆ ಹಾಕುತ್ತ ಇರಬೇಕು. ಚರ್ಮದ ತೇವಾಂಶ ಕಾಪಾಡಿಕೊಳ್ಳಬೇಕು. ಕಣ್ಣು, ಮೂಗಿನ ಆರೋಗ್ಯದತ್ತಲೂ ಹೆಚ್ಚಿನ ಲಕ್ಷ್ಯ ವಹಿಸಬೇಕು. ಈ ರೀತಿ ಮಾಡುವುದರಿಂದ ಒತ್ತಡ ರಹಿತ ಜೀವನ ನಿಮ್ಮದಾಗುತ್ತದೆ.

Comments are closed.