Care For Health: ಬೆಳಿಗ್ಗೆ ಎದ್ದ ತಕ್ಷಣ ಹೀಗೆಲ್ಲಾ ಆಗತ್ತಾ? ಹಾಗಾದ್ರೆ ಡೌಟೇ ಬೇಡ; ಕೂಡಲೇ ವೈದ್ಯರನ್ನ ಸಂಪರ್ಕಿಸಿ; ಯಾವ ಖಾಯಿಲೆಯ ಮುನ್ಸೂಚನೆ ಗೊತ್ತೇ?

Care For Health: ಇಂದಿನ ಒತ್ತಡ ಜೀವನ (Stressful Life) ದಲ್ಲಿ ಮಧುಮೇಹ (Diabetes) ಹಾಗೂ ರಕ್ತದೊತ್ತಡ (BP) ಸಾಮಾನ್ಯ ಕಾಯಿಲೆ ಆಗಿಬಿಟ್ಟಿದೆ. ಇದಕ್ಕೆ ನಾವು ನಡೆಸುವ ಜೀವನದ ವಿಧಾನವೂ ಒಂದು ಕಾರಣ ಎಂದರೆ ತಪ್ಪಾಗುವುದಿಲ್ಲ. ನಮ್ಮ ಆಹಾರ ಪದ್ದತಿ, ಪ್ರತಿದಿನ ಬೆಳಿಗ್ಗೆ ಯೋಗ (Yoga), ಧ್ಯಾನ ವ್ಯಾಯಾಮ ಮಾಡಿದಲ್ಲಿ ಮಧುಮೇಹ ಬರುವುದಿಲ್ಲ. ಆದರೆ ನಮ್ಮ ಕೆಲಸದ ಒತ್ತಡದಲ್ಲಿ ನಮಗೆ ಇದಕ್ಕೆಲ್ಲ ಸಮಯ ಮೀಸಲಿರುವುದು ಕಷ್ಟಸಾಧ್ಯವಾಗಿದೆ. ಹಾಗಾಗಿಯೇ ನಾವೇ ಮಧುಮೇಹಕ್ಕೆ ಆಹ್ವಾನ ನೀಡುತ್ತಿದ್ದೆವೆಯೋ ಎಂದು ಕೆಲವೊಂದು ಬಾರಿ ಜನರಿಗೆ ಅನಿಸುತ್ತದೆ. ಅದೇನೆ ಇರಲಿ ಪ್ರತಿಯೊಂದು ರೋಗವು ಬರುವ ಮೊದಲು ಅದರ ಕೆಲವೊಂದು ಮುನ್ಸೂಚನೆಗಳು ಸಿಗುತ್ತದೆ. ಹಾಗೆಯೇ ಮಧುಮೇಹ ಕೂಡ. ಈ ಮಧುಮೇಹ ರೋಗದ ಮುನ್ಸೂಚನೆಗಳೇನು ಎಂದು ಈಗ ನಾವು ತಿಳಿದುಕೊಳ್ಳೋಣ.

ಮನುಷ್ಯನ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾದಾಗ ಬೆಳಿಗ್ಗೆ ಎದ್ದ ತಕ್ಷಣ ವಾಕರಿಕೆ ಭಾವನೆ ಬರುತ್ತದೆ. ಇದು ಮಧುಮೇಹದ ದೊಡ್ಡ ಸಂಕೇತವಾಗಿದೆ. ನೀವು ನಿಯಮಿತವಾಗಿ ವಾಂತಿ ಮಾಡಲು ಆರಂಭಿಸಿದಲ್ಲಿ ಖಂಡಿತವಾಗಿಯೂ ಗ್ಲೂಕೋಸ್ (Glucose)  ಪರೀಕ್ಷೆ ಮಾಡಿ. ಇದನ್ನೂ ಓದಿ: New Technology: ಥಟ್ ಅಂತ ಕರೆಂಟ್ ಹೋಗಿ ಕತ್ತಲಾದ್ರೆ ಭಯ ಪಡುವ ಅಗತ್ಯವಿಲ್ಲ; ಕರೆಂಟ್ ಹೋದ್ರೂ 5 ತಾಸು ಉರಿಯತ್ತೆ ಈ ಬಲ್ಬ್, ಎಷ್ಟು ಕಡಿಮೆ ಬೆಲೆ ಗೊತ್ತಾ?

ನಿದ್ರೆಯಿಂದ ಎದ್ದ ತಕ್ಷಣ ಹಲವರಿಗೆ ಮಸುಕು ಮಸುಕಾಗಿ ಕಾಣಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿದೆ ಎನ್ನುವುದರ ಸಂಕೇತವಾಗಿದೆ. ವಾಸ್ತವವಾಗಿ ಮಧುಮೇಹದಿಂದಾಗಿ ಕಣ್ಣಿನ ಮಸೂರವು ದೊಡ್ಡದಾಗಲು ಆರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕಡಿಮೆ ದೃಷ್ಟಿಯ ದೂರುಗಳನ್ನು ಹೊಂದುವುದು ಸಾಮಾನ್ಯವಾಗಿದೆ.

ಮಧುಮೇಹ ರೋಗಿಗಳಿಗೆ ಬೆಳಿಗ್ಗೆ ಎದ್ದ ತಕ್ಷಣ ಬಾಯಿಯು ಒಣಗಿರುತ್ತದೆ. ಬೆಳಗಿನ ಜಾವದಲ್ಲಿ ಅತಿಯಾದ ಬಾಯಾರಿಕೆ ಕಾಣಿಸಿಕೊಂಡರೆ ತಕ್ಷಣವೇ ರಕ್ತದಲ್ಲಿನ ಸಕ್ಕರೆ ಮಟ್ಟ ಪರೀಕ್ಷಿಸಿಕೊಳ್ಳಿ.

ಈ ಮೂರು ಲಕ್ಷಣಗಳ ಹೊರತಾಗಿ ಮಧುಮೇಹ ರೋಗಿಗಳು ಇತರ ಹಲವಾರು ಲಕ್ಷಣಗಳನ್ನು ಸಹ ಅನುಭವಿಸುತ್ತಾರೆ. ಅದನ್ನು ನಿರ್ಲಕ್ಷಿಸಬೇಡಿ. ಕೂಡಲೇ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು.

Comments are closed.