Rahul Dravid Love Story: ರಾಹುಲ್ ದ್ರಾವಿಡ್ ಮತ್ತು ವಿಜೇತಾ ಪೆಂಡಾರ್ಕರ್ ಆರಾಧ್ಯ ಲವ್ ಸ್ಟೋರಿ ಬಗ್ಗೆ ಅದೆಷ್ಟು ವಿಭಿನ್ನ ಗೊತ್ತೇ?? ದ್ರಾವಿಡ್ ಲವ್ ಸ್ಟೋರಿ ಹೇಗಿತ್ತು ಗೊತ್ತೇ??

Rahul Dravid Love Story: ಬಹುಶಃ ರಾಹುಲ್ ದ್ರಾವಿಡ್ ಅವರ ಬಗ್ಗೆ ಯಾರಿಗೂ ವಿಶೇಷ ಪರಿಚಯ ಬೇಕಾಗಿಲ್ಲ ಕ್ರಿಕೆಟ್ ಮಹಾನ್ ಗೋಡೆ ಎಂದೇ ಕರೆಸಿಕೊಂಡಿದ್ದ ರಾಹುಲ್ ದ್ರಾವಿಡ್ ಇಂದು ಒಬ್ಬ ಕ್ರಿಕೆಟ್ (Cricket) ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಬ್ಬ ಕ್ರಿಕೆಟ್ ಈಗ ಮಾತ್ರ ಅಲ್ಲದೆ ಒಬ್ಬ ಅದ್ಭುತ ವ್ಯಕ್ತಿತ್ವ ಹೊಂದಿದ ವ್ಯಕ್ತಿ ಕೂಡ ಹೌದು. ಪ್ರತಿಯೊಬ್ಬ ಆಟಗಾರರಿಂದ ಗೌರವಿಸಲ್ಪಟ್ಟ ಆಟಗಾರ ಅಂದ್ರೆ ಇವರು. ಅತ್ಯಂತ ಸಹಾನುಭೂತಿಯ ಆಟಗಾರರಾಗಿದ್ದವರು. ಕ್ರಿಕೆಟ್ ಅನ್ನು ಹೊರತುಪಡಿಸಿ ರಾಹುಲ್ ದ್ರಾವಿಡ್ ಅವರ ವೈಯಕ್ತಿಕ ಜೀವನ ಅದರಲ್ಲೂ ವಿವಾಹ ಕೂಡ ಹೆಚ್ಚು ಇಂಟರೆಸ್ಟಿಂಗ್ ಆಗಿದೆ. ಯಾಕೆಂದರೆ ಕ್ರಿಕೆಟ್ ಲೋಕದಿಂದಲೇ ದೂರ ಇರುವ ವೈದ್ಯರೊಬ್ಬರನ್ನ ಪ್ರೀತಿಸಿ ಮದುವೆ ಆದವರು ರಾಹುಲ್ ದ್ರಾವಿಡ್.

ರಾಹುಲ್ ದ್ರಾವಿಡ್ ಅವರ ಲವ್ ಸ್ಟೋರಿ:

ರಾಹುಲ್ ಅವರು ವಿಜೇತ ಪೆಂಡಾರ್ಕರ್ಸ್ ಎಂಬವರನ್ನು ವಿವಾಹವಾಗಿದ್ದಾರೆ. ವಿಜೇತ ಪೆಂದಾರ್ಕರ್ಸ್ ಹುಟ್ಟಿದ್ದು 1976ರಲ್ಲಿ ಅವರ ತಂದೆ ಭಾರತೀಯ ವಾಯುಪಡಿಯಲ್ಲಿ ವಿಂಗ್ ಕಮಾಂಡರ್ ಅಧಿಕಾರಿಯಾಗಿದ್ದವರು. ಆಕೆಯ ತಾಯಿ ಖ್ಯಾತ ಡಯಟೀಶೀಯನ್. ತಂದೆಯ ಕೆಲಸದ ನಿಮಿತ್ತ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆ ಆಗುತ್ತಿತ್ತು ಹಾಗಾಗಿ ಬೇರೆ ಬೇರೆ ಸ್ಥಳಗಳಲ್ಲಿ ಇವರು ವಾಸವಾಗಿತ್ತು ನಂತರ ವಿಜೇತ ಅವರ ತಂದೆಯ ನಿವೃತ್ತಿ ಬಳಿಕ ನಾಗ್ಪುರದಲ್ಲಿ ಇವರ ಕುಟುಂಬ ಬಂದು ನೆಲೆಸಿತು ವಿಜೇತ ಅಲ್ಲಿಯೇ ಅಧ್ಯಯನವನ್ನು ಮುಗಿಸಿ ವೈದ್ಯಕೀಯ ಪದವಿಯನ್ನು ಕೂಡ ಪಡೆದರು

ಕುಟುಂಬಗಳ ಸಮ್ಮಿಲನ

ದ್ರಾವಿಡ್ ಹಾಗೂ ಟೆಂಡರ್ಕರ್ ಕುಟುಂಬ ಕಳೆದ 35 ವರ್ಷಗಳಿಗಿಂತಲೂ ಹೆಚ್ಚಿನ ಪರಿಚಯ ಹೊಂದಿದ್ದಾರೆ ವಿಜೇತ ಅವರ ತಂದೆ 1968 ರಿಂದ 71 ರಲ್ಲಿ ಬೆಂಗಳೂರಿಗೆ ನೇಮಕಗೊಳ್ಳುತ್ತಾರೆ. ಇಲ್ಲಿ ಎರಡು ಕುಟುಂಬಗಳು ಪರಸ್ಪರ ಭೇಟಿಯಾಗುತ್ತವೆ ಇಬ್ಬರ ನಡುವೆ ನಿಕಟ ಸಂಬಂಧ ಕೂಡ ಬೆಳೆಯುತ್ತದೆ ಇದೇ ಸಮಯದಲ್ಲಿ ರಾಹುಲ್ ಹಾಗೂ ವಿಜೇತ ಕೂಡ ಭೇಟಿಯಾಗಿದ್ದರು. ರಾಹುಲ್ ಕೆ ವಿಜೇತ ಮೇಲೆ ಮನಸ್ಸಿತ್ತು ಹಾಗಾಗಿ ನಾಗಪುರಕ್ಕೆ ಬಂದಾಗೆಲ್ಲ ಒಮ್ಮೆಯಾದರೂ ವಿಜೇತ ಅವರನ್ನ ಮೀಟ್ ಆಗಿ ಹೋಗುತ್ತಿದ್ದರಂತೆ ಎಂಬುದಾಗಿ ವಿಜೇತ ಅವರ ಸ್ನೇಹಿತರು ಕೂಡ ತಿಳಿಸುತ್ತಾರೆ. ಕುಟುಂಬದವರು ಮಕ್ಕಳ ಭಾವನೆಯನ್ನು ಬೇಗ ಅರ್ಥ ಮಾಡಿಕೊಂಡರು ಹಾಗಾಗಿ ಅವರಿಬ್ಬರನ್ನು ಮದುವೆಯ ಬಂಧನದಲ್ಲಿ ಸಿಲುಕಿಸಲು ನಿರ್ಧರಿಸುತ್ತಾರೆ. ಕೊನೆಗೆ ಮನೆಯವರ ಒಪ್ಪಿಗೆಯಂತೆ ದ್ರಾವಿಡ್ ಹಾಗೂ ವಿಜೇತ ಅವರ ಪ್ರೇಮ ವಿವಾಹ ನಡೆಯುತ್ತದೆ.

ಆದರೆ ಒಬ್ಬ ಕ್ರಿಕೆಟಿಗನ ಜೊತೆ ಮದುವೆಯಾಗಲು ವಿಜೇತಳಿಗೆ ಸ್ವಲ್ಪ ಹೆದರಿಕೆ ಇತ್ತಂತೆ. ಯಾಕಂದ್ರೆ ವಿಚಿತ್ರ ಬಹಳ ಸರಳವಾಗಿ ಬದುಕಿದವರು ಹೆಚ್ಚು ಸುದ್ದಿಯಲ್ಲಿ ಇರಬೇಕಾಗುತ್ತೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು. 2002ರಲ್ಲಿ ಇವರಿಬ್ಬರ ಮದುವೆ ಮಾಡಲು ಪೋಷಕರು ನಿರ್ಧರಿಸಿದ್ದರು. ಆದರೆ 2003 ರಲ್ಲಿ ವಿಶ್ವಕಪ್ ಇದ್ದು ಅದರ ತಯಾರಿಯಲ್ಲಿ ರಾಹುಲ್ ಇದ್ದರು ಹಾಗಾಗಿ ವಿಶ್ವಕಪ್ ನಂತರ ಇವರ ವಿವಾಹ ನಡೆಸುವುದಕ್ಕೆ ಮನೆಯವರು ಕೂಡ ತೀರ್ಮಾನಿಸುತ್ತಾರೆ. ಹಾಗಾಗಿ ನಿಶ್ಚಿತಾರ್ಥವನ್ನು ಮಾಡಿ ಮುಗಿಸಲಾಗಿತ್ತು. ವಿಜೇತ ರಾಹುಲ್ ಅವರ ಆಟವನ್ನು ನೋಡಲು ಅವರ ಜೊತೆಗೆ ದಕ್ಷಿಣ ಆಫ್ರಿಕಾ ಕೆ ಕೂಡ ಭೇಟಿ ನೀಡಿದ್ದರು ಆದರೆ ಈ ವಿಷಯವನ್ನು ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ.

ಕೊನೆಗೆ 2003 ಮೇ ನಾಲ್ಕರಂದು ರಾಹುಲ್ ಹಾಗೂ ವಿಜೇತ ಅವರ ದಾಂಪತ್ಯ ಜೀವನ ಆರಂಭವಾಯಿತು. ಬೆಂಗಳೂರಿನ ಹೊರವಲಯದಲ್ಲಿರುವ ಗಡಿ ಭದ್ರತಾ ಪಡೆ ತರಬೇತಿ ಕೇಂದ್ರದಲ್ಲಿ ವಿವಾಹ ನಡೆಸಲಾಗಿತ್ತು. ಮಹಾರಾಷ್ಟ್ರ ಸಂಪ್ರದಾಯದಂತೆ ಮದುವೆ ಬಹಳ ಅಚ್ಚುಕಟ್ಟಾಗಿ ಬಂದು ಬಾಂಧವರ ಸಮ್ಮುಖದಲ್ಲಿ ನೆರವೇರಿತು. ಏನು ಮದುವೆಯಾದ ನಂತರವೂ ತಮ್ಮ ಮದುವೆಯ ಫೋಟೋವನ್ನು ಯಾವ ಮೀಡಿಯಾದಲ್ಲಿಯೂ ಕೂಡ ರಾಹುಲ್ ಹಂಚಿಕೊಂಡಿರಲಿಲ್ಲ. ಮದುವೆಯ ಸಮಯದಲ್ಲಿ ಯಾವ ಮಾಧ್ಯಮದ ಸಿಬ್ಬಂದಿಯು ಒಳಗೆ ಬರಲು ಪ್ರವೇಶ ಇರಲಿಲ್ಲ. ಇನ್ನು ಈ ಮದುವೆಯನ್ನ ಖಾಸಗಿಯಾಗಿಯೇ ಇಡಬೇಕು ಎನ್ನುವ ಕಾರಣಕ್ಕೆ ಸತಿ ಹೊರಗೆ ಹೋಗದಂತೆ ಸಾಕಷ್ಟು ಭದ್ರತೆ ಮಾಡಲಾಗಿತ್ತು. ಮದುವೆ ಸಮಾರಂಭಕ್ಕೆ ಬಂದವರು ಮದುವೆ ಮುಗಿಯುವವರೆಗೂ ಆಚೆ ಹೋಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ದ್ರಾವಿಡ್ ಆಪ್ತರಾದ ಅನಿಲ್ ಕುಂಬ್ಳೆ ಹಾಗೂ ವೆಂಕಟೇಶ್ ಪ್ರಸಾದ್ ಮಾತ್ರ ಮದುವೆಗೆ ಹೋಗಿದ್ದರು ಎನ್ನಲಾಗಿದೆ.

Rahul Dravid Love Story 1 | Live Kannada News
Rahul Dravid Love Story: ರಾಹುಲ್ ದ್ರಾವಿಡ್ ಮತ್ತು ವಿಜೇತಾ ಪೆಂಡಾರ್ಕರ್ ಆರಾಧ್ಯ ಲವ್ ಸ್ಟೋರಿ ಬಗ್ಗೆ ಅದೆಷ್ಟು ವಿಭಿನ್ನ ಗೊತ್ತೇ?? ದ್ರಾವಿಡ್ ಲವ್ ಸ್ಟೋರಿ ಹೇಗಿತ್ತು ಗೊತ್ತೇ?? https://sihikahinews.com/rahul-dravid-love-story/

ಮದುವೆಯ ನಂತರ ಸ್ಟಾರ್ ಹೋಟೆಲ್ ನಲ್ಲಿ ಆರತಕ್ಷತೆಯನ್ನು ಕೂಡ ಇಟ್ಟುಕೊಳ್ಳಲಾಗಿತ್ತು. ಈ ಸಮಯದಲ್ಲಿ ಮಾಧ್ಯಮದವರನ್ನು ಒಳಗೆ ಬಿಡಲಾಗಿತ್ತು ಜೊತೆಗೆ ತನ್ನ ಮದುವೆಯ ಗೌಪ್ಯತೆ ಕಾಪಾಡಿಕೊಂಡಿದ್ದಕ್ಕಾಗಿ ಮಾಧ್ಯಮಕ್ಕೆ ರಾಹುಲ್ ದ್ರಾವಿಡ್ ಧನ್ಯವಾದ ತಿಳಿಸಿದರು ವಿಜೇತ ಅವಳಿಗೆ ಯಾವುದೇ ಮುಜುಗರ ಆಗಬಾರದು ಎನ್ನುವ ಕಾರಣಕ್ಕೆ ರಾಹುಲ್ ಇಂತಹ ವ್ಯವಸ್ಥೆ ಮಾಡಿದ್ದರು ಎನ್ನಲಾಗಿದೆ ಈ ಮದುವೆಯ ನಂತರ ಎಲ್ಲರೂ ಸಂತೋಷಪಟ್ಟಿದ್ದಾರೆ ರಾಹುಲ್ ಅವರ ಗುಣಕ್ಕೆ ಮನಸೋತಿದ್ದಾರೆ.

ರಾಹುಲ್ ಹಾಗೂ ವಿಜೇತ ದಂಪತಿಗಳಿಗೆ 2005ರಲ್ಲಿ ಸಮಿತ್ ಎಂಬ ಮಗ ಹುಟ್ಟಿದ್ದಾನೆ ಎರಡನೆಯ ಮಗ ಹುಟ್ಟಿದ್ದು 2009ರಲ್ಲಿ. ಮಕ್ಕಳ ಜೊತೆ ಸುಖವಾಗಿ ಸಂಸಾರ ನಡೆದಿರುವ ರಾಹುಲ್ ದ್ರಾವಿಡ್ ಕ್ರಿಕೆಟ್ ಗಳಿಗೆ ಮಾರ್ಗದರ್ಶನ ನೀಡುವುದನ್ನು ಬಿಟ್ಟಿಲ್ಲ..

Comments are closed.