Kannada News: ಒಂದು ಕಾಲದ ಟಾಪ್ ನಟಿ, ರಾಧಿಕಾ ರವರು ಮೂರು ಮದುವೆಯಾಗಲು ಕಾರಣವೇನು ಗೊತ್ತೇ? ಹಿಂದಿರುವ ಕಾರಣ ಕೇಳಿದರೆ ಕಣ್ಣೀರು ಹಾಕ್ತಿರಾ.

Kannada News: 80ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗವನ್ನು ಆಳಿದ ಖ್ಯಾತ ನಟಿಯರಲ್ಲಿ ನಟಿ ರಾಧಿಕಾ (Radhika) ಕೂಡ ಒಬ್ಬರು. ಇವರು ಕೆರಿಯರ್ ಶುರು ಮಾಡಿದ್ದು ತಮಿಳು ಸಿನಿಮಾ (Tamil Film industry) ಗಳಲ್ಲಿ ನಟಿಸುವ ಮೂಲಕ. ಆದರೆ ತೆಲುಗು, ಮಲಯಾಳಂ ಕನ್ನಡ ಎಲ್ಲಾ ಭಾಷೆಗಳಲ್ಲೂ ನಟಿಸಿದ್ದಾರೆ. ರಾಧಿಕಾ ಅವರು ತಮಿಳು ಕಿರುತೆರೆಯಲ್ಲು ಬಹಳ ಹೆಸರು ಮಾಡಿರುವ ನಟಿ. ರಾಧಿಕಾ ಅವರು ನಟಿಯಾಗಿ ಎಷ್ಟು ಯಶಸ್ಸು ಗಳಿಸಿದ್ದಾರೋ, ಅವರ ವೈಯಕ್ತಿಕ ಜೀವನದ ವಿಚಾರದಿಂದ ಬಹಳ ಸುದ್ದಿಯಾಗಿದ್ದಾರೆ. ಅದು ಮೂರು ಮದುವೆಯಾದ ಕಾರಣಕ್ಕೆ. ಇದನ್ನೂ ಓದಿ: Kannada Easy Recipe: ಮನೆಯಲ್ಲಿಯೇ ದಿಡೀರ್ ಎಂದು ಕೆಲವೇ ನಿಮಿಷಗಳಲ್ಲಿ ಜೋಳದ ನೀರ್ ದೋಸೆ ಮಾಡುವುದು ಹೇಗೆ ಗೊತ್ತೇ??

ಆದರೆ ನಿಜಕ್ಕೂ ಅವರ ಜೀವನದಲ್ಲಿ ನಡೆದಿದ್ದೇನು ಎಂದು ತಿಳಿದರೆ ಬಹಳ ಬೇಸರ ಆಗುತ್ತದೆ. ರಾಧಿಕಾ ಅವರು ಮೊದಲಿಗೆ ಪ್ರತಾಪ್ (Pratap) ಅವರ ಜೊತೆಗೆ ಮದುವೆಯಾದರು, ಆದರೆ ಆ ವ್ಯಕ್ತಿಯ ನಿಜವಾದ ಸ್ವರೂಪ ಮದುವೆಯಾದ ಎರಡು ವರ್ಷಗಳಲ್ಲಿ ಗೊತ್ತಾಯಿತು. ಬಹಳ ಕಷ್ಟಪಟ್ಟ ರಾಧಿಕಾ ಅವರು ಅವರಿಂದ ದೂರವಾದರು. ಬಳಿಕ ಕೆಲಸಮಯ ಒಂಟಿಯಾಗಿದ್ದ ರಾಧಿಕಾ ಅವರು ಬ್ರಿಟನ್ ವ್ಯಕ್ತಿ ರಿಚರ್ಡ್ (Richard) ಅವರೊಡನೆ ಮದುವೆ (Marriage)ಯಾದರು. ರಿಚರ್ಡ್ ಮತ್ತು ರಾಧಿಕಾ ದಂಪತಿಗೆ ಜನಿಸಿದ ಮಗಳು ರಯಾನ್. ಆದರೆ ಈ ಮದುವೆ ಕೂಡ ಹೆಚ್ಚು ಸಮಯ ಉಳಿಯಲಿಲ್ಲ. ರಿಚರ್ಡ್ ಇಂದ ತಮ್ಮ ಅರ್ಧ ಆಸ್ತಿ ಕಳೆದುಕೊಂಡರು ರಾಧಿಕಾ. ಇದನ್ನೂ ಓದಿ: Kiccha Sudeep: ಕಿಚ್ಚ ಸುದೀಪ್ ಸೇರೋದಕ್ಕೆ ಹೊರಟಿರೋದು ಇದೇ ಪಕ್ಷ ನೋಡಿ; ಕೊನೆಗೂ ಅಧಿಕೃತವಾಗಿ ಅನೌನ್ಸ್ ಮಾಡೇಬಿಟ್ರು ಕಿಚ್ಚ ಸುದೀಪ್, ಯಾವ ಪಕ್ಷ ಗೊತ್ತೇ?

ಬಳಿಕ ಅವರಿಂದಲೂ ದೂರವಾದರು, ಆ ಸಮಯಕ್ಕೆ ಚಿತ್ರರಂಗದಲ್ಲಿ ಅವಕಾಶ ಸಿಗುವುದು ಕಡಿಮೆಯಾಗಿ, ರಾಧಿಕಾ ಅವರು ಪೂರ್ತಿ ಆಸ್ತಿ ಕಳೆದುಕೊಂಡು, ಸಾಲಕ್ಕೆ ಸಿಲುಕಿ ಬಹಳ ಕಷ್ಟದಲ್ಲಿರುವಾಗ, ಕಿರುತೆರೆ ಲೋಕಕ್ಕೆ ನಟಿಯಾಗಿ ಮತ್ತು ನಿರ್ಮಾಪಕಿಯಾಗಿ ಬಂದು ಯಶಸ್ಸು ಗಳಿಸಿದರು. ನಂತರ 1995ರಲ್ಲಿ ಪ್ರೇಮ ಕಾವಾಲಿ ಎನ್ನುವ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಶರತ್ ಕುಮಾರ್ (Sharath Kumar) ಅವರು ರಾಧಿಕಾ ಅವರಿಗೆ ಮದುವೆಯಾಗುವುದಾಗಿ ಕೇಳಿದರಂತೆ, ಆದರೆ ಆಗ ರಾಧಿಕಾ ಅವರಿಗೆ ಮದುವೆಯ ಮೇಲೆ ನಂಬಿಕೆ ಕಳೆದುಹೋಗಿತ್ತಂತೆ. ಅದೇ ಕಾರಣಕ್ಕೆ ಅವರು ನಿರ್ಧಾರವನ್ನು ತಮ್ಮ ತಂದೆ ತಾಯಿಗೆ ಬಿಟ್ಟುಬಿಟ್ಟರಂತೆ. ತಂದೆ ತಾಯಿ ಹೇಳಿದ ನಂತರ ಶರತ್ ಕುಮಾರ್ ಅವರೊಡನೆ ಮದುವೆಯಾಗಿ ಇಂದು ಸಂತೋಷದ ಜೀವನ ನಡೆಸುತ್ತಿದ್ದಾರೆ.

Comments are closed.