Kannada Astrology: ಜಪ್ಪಯ್ಯ ಅಂದ್ರು ಈ ರಾಶಿಯವರನ್ನ ಯಾರು ಅಲ್ಲಾಡಿಸುವುದಕ್ಕೂ ಸಾಧ್ಯವಿಲ್ಲ ಬೇಕಾದ್ರೆ ಟ್ರೈ ಮಾಡಿ, ನೀವು ಅಷ್ಟೇ ಸ್ಟ್ರಾಂಗ್ ಆಗಿರಬಹುದು, ನಿಮ್ಮ ರಾಶಿಯೂ ಇದ್ಯಾ ನೋಡಿ!

Kannada Astrology: ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನುಷ್ಯನ ರಾಶಿ ನಕ್ಷತ್ರದ ಆಧಾರದ ಮೇಲೆ, ಅವರ ಜಾತಕದ ಆಧಾರದ ಮೇಲೆ ಅವರಲ್ಲಿ ಇಂತಹದ್ದೇ ಗುಣ ಸ್ವಭಾವ ಇದೆ ಎಂದು ಹೇಳಲಾಗುತ್ತದೆ. ಜಾತಕದ ಪ್ರಕಾರ ಒಬ್ಬೊಬ್ಬರ ಗುಣ ಸ್ವಭಾವ ಒಂದೊಂದು ರೀತಿ ಇರುತ್ತದೆ ಕೆಲವರು ಸಿಕ್ಕಾಪಟ್ಟೆ ಧೈರ್ಯಶಾಲಿಗಳಾಗಿದ್ದರೆ ಇನ್ನೂ ಕೆಲವರು ಸಾಕಷ್ಟು ಪುಕ್ಕಲುತನ ಹೊಂದಿರುತ್ತಾರೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಗುಣ ಸ್ವಭಾವ ಇರುವುದು ಸಹಜ. ಕೆಲವರು ಧೈರ್ಯಶಾಲಿಗಳು, ಕೆಲವರು ನಾಚಿಕೆ ಸ್ವಭಾವದವರು, ಎಲ್ಲಾ ವಿಷಯಕ್ಕೂ ಹೆದರುವವರು ಹೀಗೆ ಹಲವಾರು ರೀತಿಯ ಜನರು ಇರುತ್ತಾರೆ ಆದರೆ ಈ ಕೆಳಗಿನ ರಾಶಿಯ ಜನರು ಮಾತ್ರ ಪ್ರಳಯವಾದರೂ ಸರಿ ಯಾವ ವಿಷಯಕ್ಕೂ ಹಿಂಜರಿಯುವುದಿಲ್ಲ ಅಂತಹ ಸ್ಟ್ರಾಂಗ್ ವ್ಯಕ್ತಿತ್ವ ನಿಮ್ಮಲ್ಲಿಯೂ ಇದಿಯಾ ನೋಡಿಕೊಳ್ಳಿ.

ಮೇಷ ರಾಶಿ:

ಮೇಷ ರಾಶಿಯವರ ನಿರ್ಭೀತ ಮನೋಭಾವವೇ ಅವರನ್ನು ಗೆಲ್ಲಿಸಲು ಸಹಾಯ ಮಾಡುತ್ತೆ. ಇವರು ತುಂಬಾನೇ ಧೈರ್ಯ ಶಾಲೆಗಳು ಧೈರ್ಯ ಮತ್ತು ಶೌರ್ಯದ ಅಧಿಪತಿಯಾದ ಮಂಗಳನ ಪ್ರಭಾವ ಇವರ ಮೇಲಿದೆ. ಹಾಗಾಗಿ ಈ ರಾಶಿಯ ಜನರು ಯಾವುದೇ ಪರಿಸ್ಥಿತಿಯಲ್ಲಿಯೂ ಭಯಪಡದೆ ಮುನ್ನುಗ್ಗುತ್ತಾರೆ. ಅಷ್ಟೇ ಅಲ್ಲ ಇತರ ಭಯವನ್ನು ಹೋಗಲಾಡಿಸುವ ಶಕ್ತಿಯು ಕೂಡ ಇವರಲ್ಲಿದೆ.

ಸಿಂಹ ರಾಶಿ:

 ಹೆಸರು ಸೂಚಿಸುವಂತೆ ಸಿಂಹನ ಆಳ್ವಿಕೆ ಇವರದ್ದು. ಕಷ್ಟದ ಸಂದರ್ಭದಲ್ಲಿಯೂ ಕೂಡ ಪರಿಹಾರ ಕಂಡುಕೊಳ್ಳುವ ಶಕ್ತಿ ಇವರಲ್ಲಿದೆ ಜೊತೆಗೆ ಸಹಾಯ ಮಾಡುವ ಮನೋಭಾವವು ಇರುತ್ತದೆ. ಇವರಲ್ಲಿ ನಾಯಕತ್ವ ಗುಣ ಹೆಚ್ಚು. ಹಾಗಾಗಿ ಎಲ್ಲರನ್ನೂ ಲೀಡ್ ಮಾಡುವ ಕೆಪಾಸಿಟಿ ಇವರಲ್ಲಿದೆ.

ವೃಶ್ಚಿಕ ರಾಶಿ:

ನೋಡುವುದಕ್ಕೆ ಬಹಳ ಶಾಂತ ಸ್ವಭಾವದವರು ಇವರು. ಆದರೆ ಇವರು ಯಾವ ವಿಷಯಕ್ಕೂ ಎದೆ ಗುಂದುವುದಿಲ್ಲ. ಸಿಕ್ಕಾಪಟ್ಟೆ ಶಕ್ತಿಶಾಲಿಗಳು. ಎಂತಹ ಕಠಿಣ ಪರಿಸ್ಥಿತಿ ಇದ್ದರೂ ಸರಿ, ಅದನ್ನ ಎದುರಿಸಲು ಮುಂದಾಗುತ್ತಾರೆ. ಧೈರ್ಯ ಹಾಗೂ ಇವರಲ್ಲಿ ತೋರಿಸುವ ಹೆಚ್ಚಾಗಿಯೇ ಇರುತ್ತದೆ.

ಧನು ರಾಶಿ;

ಧನು ರಾಶಿ ಅಗ್ನಿ ಅಂಶದ ಅಧಿಪತಿ ಎಂದು ಹೇಳಲಾಗುತ್ತದೆ ಅಪಾಯಕಾರಿ ಕೆಲಸಗಳನ್ನು ಕೂಡ ನಿಭಾಯಿಸುವಂತಹ ತಾಕತ್ತು ಇವರಲ್ಲಿದೆ ಜೀವನದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳುವುದಕ್ಕೂ ಇವರು ಸಿದ್ದರಾಗಿರುತ್ತಾರೆ ಸಾಕಷ್ಟು ಕಷ್ಟಕರದ ಕೆಲಸವನ್ನು ಮಾಡಿ ಗೆಲ್ಲುವ ಸಾಮರ್ಥ್ಯ ಇವರಲ್ಲಿದೆ.

ಕುಂಭ ರಾಶಿ:

ಅಧೈರ್ಯ ಎನ್ನುವುದು ಇವರಿಗೆ ಗೊತ್ತೇ ಇಲ್ಲ. ಜೀವನವನ್ನು ಹೆಚ್ಚು ಇಷ್ಟಪಡಲು ಇವರಲ್ಲಿರುವ ನಿರ್ಭೀತಿಯೇ ಕಾರಣ. ಇವರು ಯಾರೊಂದಿಗೆ ಯಾವ ವಿಚಾರ ಮಾತನಾಡುವುದಕ್ಕೂ ಹೆದರುವುದಿಲ್ಲ ತಾವು ಹೇಳಬೇಕಾದ ರೀತಿಯಲ್ಲಿಯೇ ಹೇಳಿ ಮುಗಿಸುತ್ತಾರೆ.

Comments are closed.