Dhruva Sarja: ಮಾರ್ಟಿನ್ ಸಿನೆಮಾಗೆ ಧ್ರುವ ಸರ್ಜಾ ಪಡೆದಿರುವ ಸಂಭಾವನೆ ಎಷ್ಟು ಗೊತ್ತೇ?? ಯಪ್ಪಾ ಒಂದು ಸಿನೆಮಾಗೆ ಇಷ್ಟೊಂದಾ??

Dhruva Sarja: ಚಂದನವನದಲ್ಲಿ ತಮ್ಮದೇ ಆದ ರೀತಿಯಲ್ಲಿ ಆಕ್ಷನ್ ಇಮೇಜ್ ಇಂದ ಹೆಸರು ಮಾಡಿರುವವರು ನಟ ಧ್ರುವ ಸರ್ಜಾ. ಅರ್ಜುನ್ ಸರ್ಜಾ ಅವರಂತಹ ಸ್ಟಾರ್ ಹೀರೋ ಅಕ್ಕನ ಮಗ ಆಗಿದ್ದರು ಕೂಡ ಅವರ ಹೆಸರು ಬಳಕೆ ಮಾಡದೆ, ತಮ್ಮ ಪ್ರತಿಭೆ ಇಂದ ಅವಕಾಶ ಪಡೆದುಕೊಂಡರು ಧ್ರುವ. ಮೊದಲ ಸಿನಿಮಾ ಇಂದ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದರು. ಇವರು ನಟಿಸಿದ್ದು ಕಡಿಮೆ ಸಿನಿಮಾಗಳಲ್ಲೇ ಆಗಿದ್ದರು, ಒಳ್ಳೆಯ ಅಭಿಮಾನಿ ಬಳಗ ಗಳಿಸಿಕೊಂಡರು ಧ್ರುವ.

ಇಂದು ಇವರಿಗೆ ಚಿತ್ರರಂಗದಲ್ಲಿ ದೊಡ್ಡ ಮಾಸ್ ಫ್ಯಾನ್ ಬೇಸ್, ಆಕ್ಷನ್ ಪ್ರಿನ್ಸ್ ಎಂದು ಹೆಸರು ಎಲ್ಲವೂ ಇದೆ. ಧ್ರುವ ಸರ್ಜಾ ಅವರು ಈಗ ಮಾರ್ಟಿನ್ ಸಿನಿಮಾ ಮೂಲಕ ಸಿನಿಮಾಪ್ರಿಯರ ಎದುರು ಬರುವುದಕ್ಕೆ ರೆಡಿ ಆಗಿದ್ದಾರೆ. ಮಾರ್ಟಿನ್ ಸಿನಿಮಾಗೆ ಅರ್ಜುನ್ ಸರ್ಜಾ ಅವರು ಕಥೆ ಬರೆದಿದ್ದು, ಸಿನಿಮಾ ನಿರ್ದೇಶನ ಮಾಡಿರುವುದು ಎಪಿ ಅರ್ಜುನ್. ಧ್ರುವ ಅವರ ಮೊದಲ ಸಿನಿಮಾ ಕೂಡ ಎಪಿ ಅರ್ಜುನ್ ಅವರ ಜೊತೆಯಲ್ಲೇ ಆಗಿತ್ತು. ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಅವರಿಗೆ ನಾಯಕಿಯಾಗಿ ನಟಿ ವೈಭವಿ ಶಾಂಡಿಲ್ಯ ನಟಿಸಿದ್ದಾರೆ..

ಮಾರ್ಟಿನ್ ಸಿನಿಮಾ ಟೀಸರ್ ಹಿಂದೆಂದೂ ಯಾವ ಸಿನಿಮಾ ಕೂಡ ಬಿಡುಗಡೆ ಆಗದ ರೀತಿಯಲ್ಲಿ, ಪ್ರೀಮಿಯರ್ ಶೋ ಮೂಲಕ ಟೀಸರ್ ಬಿಡುಗಡೆ ಆಯಿತು. ಟೀಸರ್ ನೋಡಿದ ಧ್ರುವ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದು, ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಧ್ರುವ ಅವರು ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರು ಹಾಗಾಗಿ ಮಾರ್ಟಿನ್ ಸಿನಿಮಾಗೆ ಧ್ರುವ ಅವರು ತೆಗೆದುಕೊಂಡಿರುವ ಸಂಭಾವನೆ ಎಷ್ಟು ಎಂದು ಈಗ ಚರ್ಚೆ ನಡೆಯುತ್ತಿದ್ದು, ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಧ್ರುವ ಸರ್ಜಾ ಅವರು ಮಾರ್ಟಿನ್ ಸಿನಿಮಾಗೆ 8 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ.

Comments are closed.