Vaishnavi Gowda: ಅಗ್ನಿಸಾಕ್ಷಿ ಸನ್ನಿಧಿಯ ಕೈ ಮೇಲೆ ಸ್ಪೆಷಲ್ ಟ್ಯಾಟೂ; ಅದರ ಅರ್ಥ ತಿಳಿದು ತಾವೂ ಹಚ್ಚೆ ಹಾಕಿಸಿಕೊಳ್ಳಲು ಮುಂದಾದ ಅಭಿಮಾನಿಗಳು, ಅರ್ಥ ಏನು ಗೊತ್ತಾ?

Vaishnavi Gowda: ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿರುವವರು ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಅವರು. ಅವರು ವಿಧ್ಯಾಭರಣ (Vidya bharana) ಎನ್ನುವ ಉದ್ಯಮಿ ಜೊತೆ ನಿಶ್ಚಿತಾರ್ಥ (Engagement)  ಮಾಡಿಕೊಳ್ಳಲು ಮುಂದಾಗಿದ್ದರು. ಮನೆಯಲ್ಲಿ ನಡೆದ ಶಾಸ್ತ್ರವೊಂದರ ಫೋಟೊ (Photo) ವೊಂದು ಸಾಮಾಜಿಕ ಜಾಲತಾಣ (Social Media) ದಲ್ಲಿ ಬಹಳ ವೈರಲ್ ಆಗಿದ್ದು, ಅಭಿಮಾನಿಗಳು ಕೂಡ ಬಹಳ ಸಂತಸಗೊಂಡಿದ್ದರು. ಹಲವರು ಆದಷ್ಟು ಶೀಘ್ರ ಮದುವೆ ಆಗಲಿ, ಹ್ಯಾಪಿ ಮ್ಯಾರೀಡ್ ಲೈಪ್ ಎಂದೆಲ್ಲ ವಿಷ್ ಮಾಡಿದ್ದರು. ಆದರೆ ವಿದ್ಯಾಭರಣ ಅವರು ಬೇರೆ ಯುವತಿಯನ್ನು ಪ್ರೇಮಿಸುತ್ತಿದ್ದಾರೆ ಎನ್ನುವ ಆಡಿಯೋ ಬಿಡುಗಡೆಯಾದ ನಂತರ ವೈಷ್ಣವಿ ಗೌಡ ಅವರು ವಿದ್ಯಾಭರಣ ಅವರ ಜೊತೆಗಿನ ಮಾತುಕತೆಯನ್ನು ಮುರಿದುಕೊಂಡಿದ್ದಾರೆ. ಇದರಿಂದ ಬಹಳ ದುಃಖದಲ್ಲಿದ್ದಾರೆ. ಈ ವಿಚಾರ ವಾಹಿನಿಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಬಹಳ ದೊಡ್ಡ ಪ್ರಮಾಣದ ಚರ್ಚೆಗೆ ಕಾರಣವಾಗಿತ್ತು. ಏನೇ ಆಗಲಿ ಇಬ್ಬರ ಸಂಬಂಧ ಹಳಸಿರುವುದಂತೂ ಸತ್ಯ.

JYO 1 | Live Kannada News
Vaishnavi Gowda: ಅಗ್ನಿಸಾಕ್ಷಿ ಸನ್ನಿಧಿಯ ಕೈ ಮೇಲೆ ಸ್ಪೆಷಲ್ ಟ್ಯಾಟೂ; ಅದರ ಅರ್ಥ ತಿಳಿದು ತಾವೂ ಹಚ್ಚೆ ಹಾಕಿಸಿಕೊಳ್ಳಲು ಮುಂದಾದ ಅಭಿಮಾನಿಗಳು, ಅರ್ಥ ಏನು ಗೊತ್ತಾ? https://sihikahinews.com/actress-vaishnavi-gowda-got-her-first-tattoo/

ಈ ಎಲ್ಲ ಘಟನೆಗಳನ್ನು ಮರೆಯುವ ಸಲುವಾಗಿ ವೈಷ್ಣವಿ ಗೌಡ ಅವರು ಹೊಸ ಹೆಜ್ಜೆ ಇಟ್ಟಿದ್ದಾರೆ.  ಈ ಅಗ್ನಿ ಸಾಕ್ಷಿಯ ಸುಂದರಿ ತನ್ನ ಕೈ ಮೇಲೆ ಟ್ಯಾಟೂ (Tattoo) ವೊಂದನ್ನು ಹಾಕಿಸಿಕೊಂಡಿದ್ದಾರೆ. ಅದನ್ನು ಸಾಮಾಜಿಕ ಜಾಲತಾನದಲ್ಲಿ ಹರಿಬಿಟ್ಟಿದ್ದಾರೆ. ಟ್ಯಾಟೋ ಎಲ್ಲರೂ ಹಾಕಿಸಿಕೊಳ್ಳುತ್ತಾರೆ. ಅದರಲ್ಲೇನು ವಿಶೇಷ ಅಂತಿರಾ. ಖಂಡಿತಾ ವಿಶೇಷವಾಗಿದೆ ಈ ಟ್ಯಾಟೋ. ಯಾಕೆಂದರೆ ಇದು ಆದ್ಯಾತ್ಮಕ ಸಂಬಧಿಸಿದ ಟ್ಯಾಟೋ ಆಗಿದೆ. ಈ ಟ್ಯಾಟೋ ಹೆಸರು ಹಿ ರೈಸಿಂಗ್ ವುಮನ್ ಸಿಂಬೋಲ್ ಎಂದು.

ಈ ಟ್ಯಾಟೋ ಅರ್ಥ ಏನೆಂದು ನೋಡಿದರೆ, ರೈಸಿಂಗ್ ವುಮನ್ ಚಹ್ನೆಯೂ ದೈವಿಕ ಸ್ತ್ರಿ ಶಕ್ತಿಯನ್ನು ( ಚಂದ್ರ) ಪ್ರತಿನಿಧಿಸುತ್ತದೆ. ದೈವಿಕ ಪುಲ್ಲಿಂಗ ಶಕ್ತಿಯೊಂದಿಗೆ( ಸೂರ್ಯ) ಸೇರಿ ಆತ್ಮದೊಂದಿಗೆ ದೈವಿಕ ವಿಲೀನವನ್ನು ಸೃಷ್ಟಿಸುತ್ತದೆ. ಇದೇ ಟ್ಯಾಟೋ ಅರ್ಥ ಎಂದು ವೈಷ್ಣವಿ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Comments are closed.