Vastu Tips: ಅಡುಗೆಮನೆಯಲ್ಲಿ ಈ ವಸ್ತುಗಳು ಖಾಲಿಯಾಗದಂತೆ ನೋಡಿಕೊಳ್ಳಿ; ಇಲ್ಲವಾದಲ್ಲಿ ಮನೆಯಲ್ಲಿ ಆರ್ಥಿಕ ನಷ್ಟ ಉಂಟಾಗುತ್ತೆ!

Vastu Tips: ಹಿಂದೂ ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ದೇವರ ಕೋಣ ಬಿಟ್ರೆ ಅತ್ಯಂತ ಪ್ರಮುಖ ಹಾಗೂ ಪವಿತ್ರ ಸ್ಥಳ ಎಂಬುದಾಗಿ ಪರಿಗಣಿಸುವಂತಹ ಸ್ಥಳ ಅಂದ್ರೆ ಅದು ಅಡುಗೆಮನೆ. ಅಡುಗೆಮನೆ ಕೇವಲ ಸೂಚಿಯಾಗಿರುವುದು ಮಾತ್ರವಲ್ಲದೆ ಕೆಲವೊಂದು ವಸ್ತುಗಳು ಅಡುಗೆ ಮನೆಯಲ್ಲಿ ಇದ್ದರೆ ಮಾತ್ರ ಚಂದ ಎಂಬುದಾಗಿ ಹೇಳಲಾಗುತ್ತದೆ. ಇನ್ನು ವಾಸ್ತುಶಾಸ್ತ್ರದ ಪ್ರಕಾರ ಈ ಕೆಲವೊಂದು ವಸ್ತುಗಳು ಖಾಲಿ ಆಗಬಾರದು ಎನ್ನುವುದಾಗಿ ಹೇಳಲಾಗುತ್ತೆ. ಹಾಗಿದ್ರೆ ಬನ್ನಿ ಇವತ್ತಿನ ಈ ಲೇಖನದ ಮೂಲಕ ಯಾವೆಲ್ಲ ವಸ್ತುಗಳು ಅಡುಗೆ ಮನೆಯಲ್ಲಿ ಖಾಲಿಯಾಗಬಾರದು ಹಾಗೂ ಅವುಗಳಿಂದ ಏನೆಲ್ಲಾ ನೆಗೆಟಿವ್ ಪರಿಣಾಮಗಳು ಉಂಟಾಗುತ್ತವೆ ಎನ್ನುವುದನ್ನು ತಿಳಿಯೋಣ ಬನ್ನಿ.

ಈ ವಸ್ತುಗಳು ಅಡಿಗೆ ಮನೆಯಲ್ಲಿ ಯಾವತ್ತು ಖಾಲಿ ಆಗಬಾರದು!

  • ಮೊದಲನೆಯದಾಗಿ ಯಾವುದೇ ಕಾರಣಕ್ಕೂ ಅಡುಗೆ ಮನೆಯಲ್ಲಿ ಹಿಟ್ಟು ಖಾಲಿಯಾಗಬಾರದು. ಹಿಟ್ಟು ಮನೆಯಲ್ಲಿ ಡಬ್ಬಿಯಲ್ಲಿ ಖಾಲಿಯಾಗುವುದಕ್ಕಿಂತ ಮುಂಚೇನೆ ಮನೆಯಲ್ಲಿ ತಂದಿಟ್ಟರೆ ಒಳ್ಳೆಯದು. ಯಾವತ್ತೂ ಕೂಡ ತಳ ಭಾಗದಲ್ಲಿ ಖಾಲಿಯಾಗುವ ಸಂದರ್ಭದಲ್ಲಿ ಕೂಡ ಅದನ್ನು ಉಜ್ಜಿ ತೆಗೆಯುವ ರೀತಿಯಲ್ಲಿ ಬಳಸಬಾರದು. ಅಂದ್ರೆ ಅಷ್ಟರ ಮಟ್ಟಿಗೆ ಖಾಲಿಯಾಗುವವರೆಗೂ ಕೂಡ ಕಾಯಬಾರದು ಎನ್ನುವುದಾಗಿದೆ. ಈ ರೀತಿ ಅಡುಗೆ ಮನೆಯಲ್ಲಿ ಹಿಟ್ಟಿನ ಡಬ್ಬ ಖಾಲಿ ಮಾಡಿಕೊಂಡರೆ ಇದು ನಿಮ್ಮ ಜೀವನದ ಮೇಲೆ ಸಾಕಷ್ಟು ನಕಾರತ್ಮಕ ಪರಿಣಾಮ ಬೀರುತ್ತದೆ ಹಾಗೂ ನಿಮ್ಮ ಕೆಲಸಗಳಲ್ಲಿ ಕೂಡ ಯಾವುದೇ ರೀತಿಯ ಬೆಳವಣಿಗೆ ಕಾಣದ ರೀತಿಯಲ್ಲಿ ಮಾಡಬಹುದಾಗಿದೆ. ಇದು ನಿಮ್ಮ ಅದೃಷ್ಟದ ಮೇಲೆ ಕೂಡ ಅಪಶಕುನ ಬೀರುವ ರೀತಿಯಲ್ಲಿ ಮಾಡುತ್ತದೆ. ಎಲ್ಲಕ್ಕಿಂತ ಪ್ರಮುಖ ಎನ್ನುವಂತೆ ಈ ಸಂದರ್ಭದಲ್ಲಿ ನೀವು ಸಾಕಷ್ಟು ಆರ್ಥಿಕ ಸಮಸ್ಯೆಯನ್ನು ನಿಮ್ಮ ಮೇಲೆ ಎಳೆದುಕೊಳ್ಳುವಂತಹ ಸಾಧ್ಯತೆ ಇರುತ್ತದೆ.
  • ಎರಡನೇದಾಗಿ ಯಾವತ್ತೂ ಕೂಡ ಮನೆಯಲ್ಲಿ ಅರಿಶಿನ ಪುಡಿ ಖಾಲಿಯಾಗುವುದರ ಅವರಿಗೆ ಕಾಯಬೇಡಿ. ಅರಿಶಿನ ಪುಡಿ ಖಾಲಿಯಾಗುವುದಕ್ಕಿಂತ ಮುಂಚೇನೆ ಒಂದೆರಡು ಪ್ಯಾಕೆಟ್ ತಂದಿಟ್ಟುಕೊಂಡು ಬಿಡಿ. ಒಂದು ವೇಳೆ ಇದು ನಿಮ್ಮ ಅಡುಗೆ ಮನೆಯಲ್ಲಿ ಖಾಲಿ ಆದರೆ ನಿಮ್ಮ ಜೀವನದಲ್ಲಿ ಗುರುದೋಷದ ಎಂಟ್ರಿ ಆಗುತ್ತದೆ. ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಹಿನ್ನಡೆಗಳನ್ನು ಕಾಣಬೇಕಾಗುತ್ತದೆ. ನೀವು ಮಾಡಬೇಕು ಎಂದು ಅಂದುಕೊಂಡಿರುವಂತಹ ಕೆಲವೊಂದು ಶುಭಕಾರ್ಯಗಳು ಕೂಡ ನಿಲ್ಲುವಂತ ಸಾಧ್ಯತೆ ಹೆಚ್ಚಾಗಿದೆ. ನಿಮ್ಮ ಜೀವನದಲ್ಲಿ ಹತಾಶೆ ಹಾಗೂ ನಿರಾಸೆ ಹೆಚ್ಚಾಗಲಿದೆ. ಅಪ್ಪಿತಪ್ಪಿಯು ಬೇರೆಯವರಿಂದ ಅರಿಶಿನ ಪುಡಿಯನ್ನು ಪಡೆದುಕೊಳ್ಳುವುದು ಅಥವಾ ನೀವು ಅವರಿಗೆ ನೀಡುವುದನ್ನು ಮಾಡುವುದಕ್ಕೆ ಹೋಗಬೇಡಿ ಇದರಿಂದ ಬೇರೆಯವರು ನಿಮ್ಮ ವಿರುದ್ಧ ದ್ವೇಷವನ್ನು ಹೊಂದಿದ್ದರೆ ಮಾಟ ಮಂತ್ರ ಮಾಡಿಸುವ ಸಾಧ್ಯತೆ ಇರುತ್ತದೆ.
  • ಯಾವತ್ತೂ ಕೂಡ ಮನೆಯಲ್ಲಿ ಅಕ್ಕಿ ಖಾಲಿಯಾಗದಂತೆ ನೋಡಿಕೊಳ್ಳಿ ಯಾಕೆಂದರೆ ಮನೆಯಲ್ಲಿ ಅಕ್ಕಿ ಖಾಲಿಯಾಗೋದು ನಿಮಗೆ ಜೀವನದಲ್ಲಿ ಶುಕ್ರದೋಶ ಉಂಟಾಗುವುದಕ್ಕೆ ಕಾರಣವಾಗುತ್ತದೆ. ಶುಕ್ರ ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಳ್ಳೆಯದನ್ನು ಎಲ್ಲರಿಗೂ ಉಂಟು ಮಾಡುತ್ತಾನೆ. ಆತನೇ ನಿಮ್ಮ ರಾಶಿಯಲ್ಲಿ ಕೆಟ್ಟವನಾದರೆ ನೀವು ಯಾವ ರೀತಿಯಲ್ಲಿ ಕಷ್ಟ ಪಡಬೇಕಾಗುತ್ತದೆ ಅನ್ನೋದನ್ನ ಸ್ವಲ್ಪ ಯೋಚಿಸಿ.
  • ಇನ್ನು ಅಡುಗೆ ಮನೆಯಲ್ಲಿ ಅತ್ಯಂತ ಪ್ರಮುಖವಾಗಿ ಇರಬೇಕಾಗಿರುವಂತಹ ಮತ್ತೊಂದು ವಸ್ತು ಅಂದರೆ ಅದು ಉಪ್ಪು. ಮನೆಯಲ್ಲಿ ಉಪ್ಪು ಖಾಲಿ ಆದರೂ ಕೂಡ ನೀವು ನಿಮ್ಮ ಆರ್ಥಿಕ ವಿಚಾರ ಸೇರಿದಂತೆ ಬೇರೆ ಬೇರೆ ಜೀವನದ ಸಮಸ್ಯೆಗಳನ್ನ ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ.
Vastu Tips