Kannada Bigg Boss: ವೀಕ್ಷಕರ ಜೊತೆ ಮನೆಯವರಿಗೂ ಶಾಕ್ ನೀಡಿದ ಬಿಗ್ ಬಾಸ್; ಈ ವಾರ ಆಟ ಮುಗಿಸಿದವರು ಇವರೆ ನೋಡಿ

Kannada Bigg Boss: ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್-೯ ಶುರುವಾಗಿ ಆಗಲೇ ೮೪ ದಿನಗಳು ಕಳೆದಿವೆ. ಈಗಾಗಲೇ ೧೧ ಜನರು ತಮ್ಮ ಆಟ ಮುಗಿಸಿ ಮನೆಗೆ ತೆರಳಿದ್ದಾರೆ. ವಾರದಿಂದ ವಾರಕ್ಕೆ ಕುತೂಹಲ ಮೂಡಿಸುತ್ತಿದೆ ಬಿಗ್ ಬಾಸ್. ಈ ವಾರವಂತೂ ಬಿಗ್ ಬಾಸ್ ಮನಮಂದಿ ಜಿದ್ದಿಗೆ ಬಿದ್ದವರಂತೆ ಮನೋರಂಜನೆ ನೀಡಿದ್ದರು. ಜೊತೆಗೆ ಬಿಗ್ ಬಾಸ ಸಹ ಅದೇ ರೀತಿಯ ವಿವಿಧ ಟ್ವಿಸ್ಟ್ ಹಾಗೂ ಮೈಂಡ್ ಗೇಮ್ ಟಾಸ್ಕ್ ನೀಡಿದ್ದರು. ೨೧ ಸಾವಿರ ಪಾಯಿಂಟ್ಗಳಲ್ಲಿ ಕೊನೆಗೆ ಮನೆಮಂದಿ ಉಳಿಸಿಕೊಳ್ಳಲು ಸಾಧ್ಯವಾಗಿದ್ದು ಕೇವಲ ೧೦೦೦ ಪಾಯಿಂಟ್. ಆದರೂ ಕುತೂಹಲ ಇರುವುದು ಈ ವಾರ ಎಲಿಮಿನೇಟ್ ಆಗುತ್ತಾರೆ ಎನ್ನುವುದು.

ಹೌದು.. ಬಿಗ್ ಬಾಸ್ ಮನೆಯಲ್ಲಿ ವಾರಾಂತ್ಯ ಬಂದರೆ ಸಾಕು ತಾವು ಅಭಿಮಾನಿಸುವ ಆಟಗಾರ ಎಲಿಮಿನೇಟ್ ಆಗಬಾರದು ಎಂದು ಪಾರ್ಥಿಸುತ್ತಾರೆ. ಆದರೂ ಕೆಲವೊಮ್ಮೆ ಉತ್ತಮವಾಗಿ ಆಟವಾಡುತ್ತಿರುವವರು, ಫೈನಲ್ ವರೆಗೆ ಇದ್ದೆ ಇರುತ್ತಾರೆ ಎಂದು ಕೊಂಡವರು ಎಲಿಮಿನೇಟ್ ಆಗಿದ್ದಾರೆ. ಆ ಪೈಕಿ ದರ್ಶ್, ನೇಹಾ ಗೌಡ, ಸಾನಿಯಾ ಅಯ್ಯರ್, ವಿನೋದ್ ಗೊಬ್ಬರಗಾಲ, ಪ್ರಶಾಂತ್ ಸಂಬರ್ಗಿ ಕೂಡ ಇದ್ದರು. ಇವರೆಲ್ಲವರೂ ಈಗಾಗಲೇ ಆಟ ಮುಗಿಸಿ ಮನೆಗೆ ಬಂದಿದ್ದಾರೆ. ಈ ವಾರ ಯಾರು ಮನೆಯಿಂದ ಯಾರು ಹೋಗಬಹುದು ಎನ್ನುವ ಕುತೂಹಲ ಎಲ್ಲರಲ್ಲಿಯೂ ಮನೆ ಮಾಡಿತ್ತು. ಅದಕ್ಕೀಗ ಫುಲ್ ಸ್ಟಾಪ್ ಬಿದ್ದಿದೆ.

ಈ ವಾರ ಬಿಗ್ಬಾಸ್ ಮನೆಯಿಂದ ಕಿರುತೆರೆ ಹಾಗೂ ಹಿರಿತೆರೆಯ ನಟಿ, ನಿರೂಪಕಿ ಅನುಪಮಾ ಗೌಡ ಅವರು ತಮ್ಮ ಆಟಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಫೈನಲ್ಗೆ ತೆರಳುವ ಇವರ ಕನಸು ಭಗ್ನವಾಗಿದೆ. ಇದು ಅನುಪಮಾ ಗೌಡ ಅವರಿಗೆ ಎರಡನೇ ಅವಕಾಶವಾಗಿತ್ತು. ಇವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರೊಂದಿಗೂ ಚೆನ್ನಾಗಿಯೇ ಇದ್ದರು. ಆದರೂ ಒಂದು ಗುಂಪಿನ ಜೊತೆ ಹೆಚ್ಚು ಸಲುಗೆಯಿಂದ ಇರುವುದೇ ಇವರಿಗೆ ಮುಳುವಾಯಿತಾ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಇದನ್ನೂ ಓದಿ:Kannada Bigg Boss: ಬಿಗ್ ಬಾಸ್ ಮನೆಯಲ್ಲಿ ಮಿಣಿ ಮಿಣಿ ಮೀನಾಕ್ಷಿಗೆ ವರನ ಹುಡುಕಾಟ, ಮದುವೆ ಆಗೋದಕ್ಕೆ ನೀವು ರೆಡಿನಾ?
ಅನುಪಮಾ ಗೌಡ ಅವರು ಕಿರುತೆರೆಯ ಮೂಲಕ ಜನರಿಗೆ ಪರಿಚಯವಾದವರು. ಇವರು ಲಕ್ಷಾಂತರ ಜನ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನೀಡಲಾದ ಎಲ್ಲ ಟಾಸ್ಕ್ಗಳನ್ನು ಚೆನ್ನಾಗಿಯೇ ಆಡಿದ್ದರು. ಅಡುಗೆ ಮಾಡುವಲ್ಲೂ ಇವರು ನಿಪುಣರು. ಆದರೂ ಸಹ ಇವರಿಗೆ ಫೈನಲ್ ತಲುಪಲು ಸಾಧ್ಯವಾಗಿಲ್ಲ.

ಇವರು ಹೆಚ್ಚಿನದಾಗಿ ಅಮೂಲ್ಯ ಗೌಡ, ರಾಕೇಶ್ ಅಡಿಗ, ಅರುಣ್ ಸಾಗರ್, ದಿವ್ಯ ಉರುಡುಗ ಇರುವ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು. ಇದೇ ಇವರಿಗೆ ಮುಳುವಾಗಿರಬಹುದು. ಈ ಗುಂಪಿನವರು ಯಾವಾಗಲೂ ಆರ್ಯವರ್ಧನ್ ಗುರೂಜಿ, ಪ್ರಶಾಂತ್ ಸಂಬರ್ಗಿ, ರೂಪೇಶ್ ರಾಜಣ್ಣ ಅವರನ್ನು ಟಾರ್ಗೆಟ್ ಮಾಡುತ್ತಿದ್ದರು. ಅವರಿಗೆ ಕಳಪೆ ನೀಡುತ್ತಿದ್ದರು. ಉತ್ತಮ ಹೆಚ್ಚಿನದಾಗಿ ತಮಗೆ ಸಿಗುವಂತೆ ನೋಡಿಕೊಳ್ಳುತ್ತಿದ್ದರು. ಇದು ಪ್ರೇಕ್ಷಕರಿಗೆ ಇಷ್ಟವಾಗಿಲ್ಲ ಎಂದು ಅಂದಾಜಿಸಬಹುದು. ಇದೇ ಅನುಪಮಾ ಗೌಡ ಅವರು ಮನೆಯಿಂದ ಹೊರಬರಲು ಕಾರಣವಾಯಿತು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

Comments are closed.