ATM Tips: ಇನ್ಮುಂದೆ ಹಣ ತೆಗೆಯೋದಕ್ಕೆ ಎಟಿಎಂ ಗೆ ಹೋಗ್ಬೇಡಿ ಮನೆಯಲ್ಲಿ ಕುಳಿತುಕೊಂಡಲ್ಲೇ ಹಣ ಬರುತ್ತೆ!

ATM Tips: ನಮ್ಮ ಮನೆಯ ಅಕ್ಕಪಕ್ಕದಲ್ಲಿ ಅಥವಾ ನಮ್ಮ ಊರಿನಲ್ಲಿ ಪ್ರತಿಯೊಂದು ಬ್ಯಾಂಕಿಗೂ ಕೂಡ ಅದರದೇ ಆದಂತಹ ಎಟಿಎಂ ಇದ್ದೇ ಇರುತ್ತದೆ. ನಮ್ಮ ಹಣಕಾಸಿನ ಅವಶ್ಯಕತೆಗಳನ್ನ ಅಲ್ಲಿ ಎಟಿಎಂ ಕಾರ್ಡ್ ಅನ್ನು ಬಳಸಿಕೊಂಡು ಹಣವನ್ನು ನೀವು ಪಡೆದುಕೊಳ್ಳಬಹುದು. ಆದರೆ ಕೆಲವರಿಗೆ ಮನೆಯಿಂದ ಹೊರಗೆ ಹೋಗುವಂತಹ ಪರಿಸ್ಥಿತಿಯಲ್ಲಿ ಇರೋದಿಲ್ಲ ಅಂತವರು ಏನು ಮಾಡಬೇಕು ಅನ್ನೋದಾಗಿ ಯೋಚನೆ ಮಾಡ್ತಾ ಇದ್ರೆ ಇನ್ಮುಂದೆ ತಲೆಬಿಸಿ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ ಮನೆಯಲ್ಲಿ ಕುಳಿತುಕೊಂಡಲ್ಲೇ ನೀವು ಎಟಿಎಂಗೆ ಹೋಗದೆ ಹಣವನ್ನು ಮನೆಯಲ್ಲಿ ಪಡೆದುಕೊಳ್ಳಬಹುದು. ಹೌದು ಸ್ನೇಹಿತರೆ, ಜಾರಿಗೆ ಬಂದಿರುವಂತಹ ಹೊಸ ಟೆಕ್ನಾಲಜಿಯ ಮೂಲಕ ನೀವು ಕೇವಲ ಆಧಾರ್ ಕಾರ್ಡ್ ಮುಖಾಂತರವೇ ಈ ಹಣವನ್ನು ಮನೆಯಲ್ಲಿ ಕುಳಿತುಕೊಂಡಲ್ಲೆ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ ಇದು ಯಾವ ಟೆಕ್ನಾಲಜಿ ಯಾವ ಯೋಜನೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

ಆಧಾರ್ ಮೂಲಕ ಮನೆಯಲ್ಲಿ ಕುಳಿತುಕೊಂಡೆ ಹಣವನ್ನು ಪಡೆದುಕೊಳ್ಳಿ!

ಆಧಾರ್ ಕಾರ್ಡ್ ಮೂಲಕ ನೀವು ಯಾವುದೇ ಹತ್ತಿರದ ಎಟಿಎಂ ಗೆ ಹೋಗಬೇಕಾದ ಅಗತ್ಯ ಕೂಡ ಇರೋದಿಲ್ಲ ಮನೆಯಲ್ಲಿ ಕುಳಿತುಕೊಂಡೆ ಈ ಟೆಕ್ನಾಲಜಿಯ ಮೂಲಕ ಹಣವನ್ನು ಪಡೆದುಕೊಳ್ಳಬಹುದಾಗಿದೆ. ನಿಮ್ಮ ಊರಿನ ಲೋಕಲ್ ಪೋಸ್ಟ್ ಮ್ಯಾನ್ ಇದನ್ನು ನಿಮಗೆ ತಂದುಕೊಡದಿದ್ದಾರೆ ಹಾಗೂ ಇದಕ್ಕಾಗಿ ನೀವು ಬಯೋಮೆಟ್ರಿಕ್ ನೀಡಬೇಕಾಗಿರುತ್ತದೆ. ನಿಮ್ಮ ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದೆ ಅನ್ನೋದನ್ನ ಖಚಿತಪಡಿಸಿಕೊಳ್ಳಬೇಕಾಗಿದೆ.

ಯಾವ ರೀತಿ ಪಡೆದುಕೊಳ್ಳೋದು?

ಮೊದಲಿಗೆ ಇಂಡಿಯನ್ ಪೋಸ್ಟ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ಗೆ ಹೋಗಿ ಇದಕ್ಕಾಗಿ ನೀವು ಅಪ್ಲೈ ಮಾಡಬೇಕಾಗಿರುತ್ತದೆ ಅನ್ನೋದನ್ನ ನೆನಪಿಟ್ಟುಕೊಳ್ಳಿ. ಅಪ್ಲೈ ಮಾಡಿದ ಕೂಡಲೇ ನಿಮ್ಮ ಲೋಕಲ್ ಪೋಸ್ಟ್ ಮ್ಯಾನ್ ನಿಮ್ಮ ಮನೆಗೆ ಮೈಕ್ರೋ ಎಟಿಎಂ ಅನ್ನು ತೆಗೆದುಕೊಂಡು ಬರುತ್ತಾರೆ. ಇಲ್ಲಿ ನೀವು ಬಯೋಮೆಟ್ರಿಕ್ ಪ್ರೋಸೆಸ್ ಅನ್ನು ಸರಿಯಾದ ರೀತಿಯಲ್ಲಿ ಕಂಪ್ಲೀಟ್ ಮಾಡಿದ ನಂತರ ನೀವು ಕೇಳುವಂತಹ ಹಣ ಅಂದ್ರೆ ಇಲ್ಲಿ ನೀವು 10,000ಗಳವರೆಗೆ ಕ್ಯಾಶ್ ಪಡೆದುಕೊಳ್ಳುವಂತಹ ಅವಕಾಶವನ್ನು ಹೊಂದಿರುತ್ತೀರಿ ಹೀಗಾಗಿ ಅಲ್ಲಿಯವರೆಗೆ ನಿಮಗೆ ಹಣವನ್ನು ಪೋಸ್ಟ್ ನಿಮಗೆ ನೀಡುತ್ತಾರೆ.

ನಿಮ್ಮ ಲೋಕಲ್ ಪೋಸ್ಟ್ ಮ್ಯಾನ್ ನಿಮಗೆ ಮನೆಗೆ ಬಂದು ಹಣ ನೀಡಿರುವುದಕ್ಕಾಗಿ ಹೆಚ್ಚಿನ ಶುಲ್ಕವನ್ನು ಪಡೆದುಕೊಳ್ಳುವುದಿಲ್ಲ. ಈ ಸಂದರ್ಭದಲ್ಲಿ ನಿಮ್ಮ ಬ್ಯಾಂಕ್ ಆಯ್ಕೆ ಮಾಡುವುದು ಅದರಿಂದ ಪ್ರಮುಖವಾಗಿರುತ್ತದೆ. ನಿಮ್ಮ ಆಧಾರ್ ಕಾರ್ಡ್ ಡೀಟೇಲ್ಸ್ ಹಾಗೂ ಬ್ಯಾಂಕ್ ಆಯ್ಕೆ ಸರಿಯಾದ ರೀತಿಯಲ್ಲಿ ಇರಬೇಕಾಗುತ್ತದೆ ಇಲ್ಲವಾದರೆ ಹಣದ ಟ್ರಾನ್ಸಾಕ್ಷನ್ ರಿಜೆಕ್ಷನ್ ಆಗುವಂತಹ ಸಾಧ್ಯತೆ ಇರುತ್ತದೆ.

https://ippbonline.com ಇದು ಅಧಿಕೃತ ವೆಬ್ಸೈಟ್ ಆಗಿದ್ದು ಇಲ್ಲಿ ನೀವು ಅಪ್ಲೈ ಮಾಡುವ ಮೂಲಕ ಹಣವನ್ನು ಪಡೆದುಕೊಳ್ಳುವಂತಹ ಅವಕಾಶವಿದೆ. ಇಲ್ಲಿ ನಿಮ್ಮ ಮೊಬೈಲ್ ನಂಬರ್ ಮಾಹಿತಿ ಇಮೇಲ್ ಐಡಿ ಮಾಹಿತಿ ಹಾಗೂ ನಿಮ್ಮ ಪಿನ್ ಕೋಡ್ ಮಾಹಿತಿಯನ್ನ ಸಬ್ಮಿಟ್ ಮಾಡಬೇಕಾಗಿರುತ್ತದೆ. ಕೊನೆಯಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಅನ್ನು ಇಲ್ಲಿ ಒದಗಿಸಬೇಕಾಗುತ್ತದೆ. ಕೊನೆಗೆ ಒಪ್ಪಿಗೆಯನ್ನು ಸೂಚಿಸುವಂತಹ ಬಟನ್ ಕ್ಲಿಕ್ ಮಾಡಿದರೆ ಸಾಕು ನಿಮಗೆ ಬೇಕಾಗಿರುವಂತಹ ಹಣವನ್ನು ನೀವು ಮನೆಯಲ್ಲಿ ಕುಳಿತುಕೊಂಡಲ್ಲೇ ಪಡೆದುಕೊಳ್ಳುವಂತಹ ಅವಕಾಶವಿದೆ.

Comments are closed.