Indian Model: ಬೀದಿಯಲ್ಲಿ ಬಲೂನ್ ಮಾರುತ್ತಿದ್ದ ಹುಡುಗಿ ಇಂದು ಕಣ್ಮನ ಸೆಳೆಯುವ ಟಾಪ್ ರೇಟೆಡ್ ಮಾಡೆಲ್; ಈ ಅದೃಷ್ಟ ಬಂದಿದ್ದು ಹೇಗೆ ಗೊತ್ತಾ?

Indian Model: ಭಾರತೀಯರಾದ ನಾವು ಜ್ಯೋತಿಷ್ಯ, ಸಂಪ್ರದಾಯ, ಅದೃಷ್ಟಗಳನ್ನು ನಂಬುತ್ತೇವೆ. ಕೆಲವೊಮ್ಮೆ ಬಹಳ ಕಷ್ಟ ಎನಿಸಿದ ಕೆಲಸಗಳು ಸಲೀಸಾಗಿ ಆದಾಗ ಅಥವಾ ನಾವು ಮನಸ್ಸಿನಲ್ಲಿ ಅಂದುಕೊಂಡ ವಿಷಯಗಳು ಘಟಿಸಿದಾಗ ಅದನ್ನು ನಾವು ಅದೃಷ್ಟವೆಂದು ಭಾವಿಸುತ್ತವೆ. ಕೆಲವೊಮ್ಮೆ ನಾವು ಅಂದುಕೊಳ್ಳದಿದ್ದರೂ ಅದೃಷ್ಟ (Luck) ಬಂದರೆ ಜೀವನವೇ ಬದಲಾಗಿ ಬಿಡುತ್ತದೆ ಎನ್ನುವದಕ್ಕೆ ಕೇರಳದಲ್ಲಿ ಬೀದಿ ಬದಿಯಲ್ಲಿ ಬಲೂನ್ ಮಾರುತ್ತಿದ್ದ ಹುಡುಗಿಯ ಕಥೆಯೇ ಸಾಕ್ಷಿಯಾಗಿದೆ.

ಈಗಂತೂ ಸೋಶಿಯಲ್ ಮೀಡಿಯಾ (Social Media) ಜಮಾನಾ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಯಾರ್ಯಾರೋ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿರುತ್ತಾರೆ. ಸೋಶಿಯಲ್ ಮೀಡಿಯಾ ಮಾಯೆಯಿಂದಾಗಿ ೬೦ ವರ್ಷದ ಕಾರ್ಮಿಕನೊಬ್ಬ ಮಾಡೆಲ್ ಆದ ಕಥೆಯನ್ನು ನೀವು ಕೇಳಿಯೇ ಇರುತ್ತೀರಿ. ಇದು ಸಹ ಅಂತಹುದೆ ಆಗಿದೆ.

ಬಲೂನ್ ಮಾರುವ ಹುಡುಗಿ ಮಾಡೆಲ್ ಆಗಿದ್ದು ಹೀಗೆ;

ಕೇರಳದಲ್ಲಿ ಹಬ್ಬ ಹರಿದಿನ, ಜಾತ್ರೆಗಳಲ್ಲಿ ಬಲೂನ್ ಮಾರುತ್ತಿದ್ದ ಹುಡುಗಿ ಈಗ ಇಂಟರ್ನೆಟ್ ಸೆನ್ಸೆಶನ್ ಆಗಿದ್ದಾರೆ. ಬಿಸಿಲಿನ ಬಗ್ಗೆ ಚಿಂತಿಸದೆ ತನ್ನ ಹೊಟ್ಟೆ ಪಾಡಿಗಾಗಿ ಬಲೂನ್ ಮಾರಾಟ ಮಾಡುತ್ತಿದ್ದವಳು ಇಂದು ಸಾಮಾಜಿಕ ಜಾಲತಾಣದಲ್ಲಿ ಸೆನ್ಸೆಶನ್ ಕ್ರಿಯೇಟ್ ಮಾಡಿದ್ದಾಳೆ. ಈ ಬಲೂನ್ ಮಾರುವ ಹುಡುಗಿಯ ಹೆಸರು ಕಿಸ್ಬು (Kisbhu). ಇವಳು ಮೂಲತಃ ರಾಜಸ್ತಾನ (Rajasthan) ದವಳು. ಮನೆಯಲ್ಲಿ ತುಂಬಾ ಬಡತನ ಇರುವುದರಿಂದ ಅವರ ಕುಟುಂಬ ಕೇರಳ (Kerala)ಕ್ಕೆ ಆಗಮಿಸಿ ಅಲ್ಲಿ ಹಬ್ಬ ಹರಿದಿನ, ಜಾತ್ರೆ, ಉತ್ಸವಗಳಲ್ಲಿ ಬಲೂನ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಇದನ್ನೂ ಓದಿ: Winter Food for Men: ಚಳಿಗಾಲದಲ್ಲಿ ಪುರುಷರು ಈ ಆಹಾರಗಳನ್ನು ಸೇವಿಸುವುದರಿಂದ ಏನಾಗುತ್ತೇ ಗೊತ್ತೇ?

ಹೀಗೆ ಒಂದು ದಿನ ಕಿಸ್ಬು ಅವರು ಕೇರಳದ ಅಂದಾಲೂರಿನ ಕಾವು ಹಬ್ಬದಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದಳು. ಈ ವೇಳೆ ಆ ಹಬ್ಬಕ್ಕೆ ಬಂದಿದ್ದ ಫೋಟೊ ಗ್ರಾಫರ್ ಅರ್ಜುನ್ ಕೃಷ್ಣನ್ (Arjun Krishnan) ಅವರ ಕಣ್ಣಿಗೆ ಬೀಳುತ್ತಾಳೆ. ರವಿ ಕಾಣದ್ದನ್ನು ಕವಿ ಕಂಡ.. ಆದ್ರೆ ಯಾರೂ ಕಾಣದ್ದನ್ನು ಒಂದು ಕ್ಯಾಮರಾ ಕಣ್ಣು ಕಾಣಬಲ್ಲದು ಎನ್ನುವುದಕ್ಕೆ ಇದೇ ಸಾಕ್ಷಿ! ಆ ಫೋಟೋಗ್ರಾಫರ್, ಈಕೆ ವಿವಿಧ ಬಂಗಿಯ ಫೋಟೊಗಳನ್ನು ತೆಗೆಯುತ್ತಾರೆ. ನಂತರ ಇದನ್ನು ಕಿಸ್ಬು ಹಾಗೂ ಆಕೆಯ ತಾಯಿಗೂ ತೋರಿಸುತ್ತಾರೆ. ಇದರಿಂದ ಅವರಿಗೂ ಖುಷಿಯಾಗುತ್ತದೆ. ನಂತರ ಇದನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಳ್ಳುತ್ತಾರೆ. ಅಲ್ಲಿ ಈ ಫೋಟೊಗೆ ಸಿಕ್ಕಾಪಟ್ಟೆ ಮೆಚ್ಚುಗೆ ಸಿಗುತ್ತದೆ. ಇದನ್ನೂ ಓದಿ:Astrology: ಹೊಸ ವರ್ಷದಲ್ಲಿ ಈ ಮೂರು ರಾಶಿಯವರಿಗೆ ರಾಹುವಿನಿಂದ ಅದೃಷ್ಟವೋ ಅದೃಷ್ಟ, ಯಾವ ರಾಶಿಯವರು ಯೋಗ ಪುರುಷರು ಗೊತ್ತೇ?

ಕಿಸ್ಬು ಅವರ ಫೋಟೋ ವೈರಲ್ ಆಗುತ್ತಿದ್ದಂತೆ ಮೇಕೋವರ್ ಮಾಡುವ ರಮ್ಯಾ ಎನ್ನುವವರು ಕಿಸ್ಬು ಅವರನ್ನು ಸಂಪರ್ಕಿಸಿ ಮೇಕೋವರ್ ಮಾಡಿಸಿಕೊಳ್ಳುವಂತೆ ಕೇಳುತ್ತಾರೆ. ಇದಕ್ಕೆ ಕಿಸ್ಬು ಒಪ್ಪಿಗೆ ನೀಡುತ್ತಾರೆ. ನಂತರ ರಮ್ಯ ಅವರು ಕಿಸ್ಬು ಅವರಿಗೆ ಮೇಕಪ್ ಮಾಡಿ ಫೋಟೊ ಶೂಟ್ ಮಾಡಿಸುತ್ತಾರೆ. ಈ ರೀತಿ ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಊಹಿಸಲು ಸಾಧ್ಯವಿಲ್ಲದಷ್ಟು ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಹೀಗೆ ಕಿಸ್ಬು ಅವರು ಸಾಮಾಜಿಕ ಜಾಲತಾಣದ ಸೆನ್ಸೆಶನ್ ಆಗಿ ಹೊರ ಹೊಮ್ಮಿದ್ದಾರೆ.

Comments are closed.