Benefits of Camphor: ಜಸ್ಟ್ ಒಂದು ಕರ್ಪೂರ ತೆಗೆದುಕೊಂಡ ಈ ಚಿಕ್ಕ ಕೆಲಸ ಮಾಡಿ ಸಾಕು, ನಿಮ್ಮ ಜೀವನವೇ ವಜ್ರವಾಗಿ ಬದಲಾಗಿ ಬಿಡುತ್ತದೆ. ಏನು ಮಾಡಬೇಕು ಗೊತ್ತೇ??

Benefits of Camphor: ಸಾಮಾನ್ಯವಾಗಿ ಮನೆಯಲ್ಲಿ ಕರ್ಪೂರವನ್ನು ನಿತ್ಯವು ಬಳಸಲಾಗುತ್ತದೆ. ದೇವರಿಗೆ ಕರ್ಪೂರದ ಆರತಿಯನ್ನು ಸಮರ್ಪಿಸಿ , ದೇವರ ಪೂಜೆ ಮಾಡಲಾಗುತ್ತೆ ಕರ್ಪೂರ ಎನ್ನುವುದು ಒಂದು ವಿಶೇಷವಾದ ರಾಸಾಯನಿಕ. ಇದನ್ನ ಔಷಧ, ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಬಳಸುವುದು ಮಾತ್ರವಲ್ಲದೆ ಇನ್ನು ಸಾಕಷ್ಟು ವಿಷಯಗಳಿಗೆ ಕರ್ಪೂರವನ್ನು ಮುಖ್ಯ ವಸ್ತುವಾಗಿ ಬಳಸಲಾಗುತ್ತದೆ.  ಕರ್ಪೂರವನ್ನು ಹಿಂದುಗಳು ಮಂಗಳಕರ ಎಂದು ಪರಿಗಣಿಸುತ್ತಾರೆ. ಜ್ಯೋತಿ ಶಾಸ್ತ್ರದ ಪ್ರಕಾರ ಕರ್ಪೂರ ಹಲವಾರು ಸಮಸ್ಯೆಗಳನ್ನ ನಿವಾರಿಸಬಲ್ಲದು ನಮ್ಮ ದಿನನಿತ್ಯದ ಬಳಕೆಯಲ್ಲಿ ಕರ್ಪೂರ ಇದ್ದರೆ ಅದರಿಂದ ಸಾಕಷ್ಟು ಸಮಸ್ಯೆಗಳು ನಿವಾರಣೆ ಆಗುತ್ತವೆ. ಇನ್ನು ಕಫ ಮತ್ತು ವಾತ ನಾಶಪಡಿಸುವ ಶಕ್ತಿ ಕೂಡ ಕರ್ಪೂರದಲ್ಲಿದೆ ಕರ್ಪೂರದ ಪರಿಮಳ ಮನಸ್ಸನ್ನು ಏಕಾಗ್ರತೆಗೊಳಿಸುತ್ತದೆ.

ಕರ್ಪೂರದ ಪ್ರಯೋಜನ ನೋಡುವುದಾದರೆ ಕರ್ಪೂರದ ಎಣ್ಣೆಯು ಚರ್ಮದ ರಕ್ತ ಪರಿಚಲನೆಯನ್ನು ಸಮತೋಲಿತಗೊಳಿಸುತ್ತದೆ. ಮೊಡವೆ, ಉರಿಯು,ತ ಆಯ್ಲಿ ಸ್ಕಿನ್ ಕೂಡ ಕರ್ಪೂರವನ್ನು ಬಳಸಬಹುದು. ಸಂಧಿವಾತ ಅಥವಾ ಇತರ ನೋವುಗಳು ಇದ್ದರೆ ಕರ್ಪೂರದಿಂದ ತಯಾರಾದ ಮೂಲವನ್ನು ಬಳಸಲಾಗುತ್ತದೆ. ಕುತ್ತಿಗೆ ನೋವಿದ್ದರೂ ಕೂಡ ಈ ಕರ್ಪೂರದಿಂದ ತಯಾರಾದ ಮುಲಾಮಿನಿಂದ ಉಪಶಮನ ಸಿಗುತ್ತದೆ ಅಷ್ಟೇ ಅಲ್ಲ ಕಫದಿಂದಾಗಿ ಎದೆ ಬಿಗಿದುಕೊಂಡಿದ್ದರೆ ಕರ್ಪೂರದ ಎಣ್ಣೆಯನ್ನು ಉಜ್ಜಿದರೆ ಸಾಕು ಕಫ ಕರಗುತ್ತದೆ.

ಇನ್ನು ಬೇಸಿಗೆಯಲ್ಲಿ ತಲೆನೋವಿನ ಸಮಸ್ಯೆ ಇದ್ರೆ ಶುಂಠಿ ಅರ್ಜುನ ತೊಗಟೆ ಮತ್ತು ಬಿಳಿಚಂದನದ ಪೇಸ್ಟ್ ಅನ್ನು ತಯಾರಿಸಿ ಅದನ್ನು ಕರ್ಪೂರದ ಜೊತೆಗೆ ಬೆರಸಿ ಹಚ್ಚಿದರೆ ತಲೆನೋವು ನಿವಾರಣೆಯಾಗುತ್ತದೆ. ನೆಗಡಿ ಅಥವಾ ಜ್ವರ ಇದ್ದಾಗ ಬಿಸಿನೀರಿನಲ್ಲಿ ಕರ್ಪೂರವನ್ನು ಹಾಕಿ ಹಬೆಯ ನಾ ತೆಗೆದುಕೊಳ್ಳಬೇಕು. ಆಗ ಸಾಕಷ್ಟು ಹಿತ ಎನಿಸುತ್ತದೆ. ಇನ್ನು ಕರ್ಪೂರವನ್ನು ಸಾಸಿವೆ ಅಥವಾ ಎಳ್ಳೆಣ್ಣೆಯ ಜೊತೆಗೆ ಮಿಶ್ರಣ ಮಾಡಿ ಬೆನ್ನು ಮತ್ತು ಎದೆಯ ಭಾಗಕ್ಕೆ ಹಚ್ಚಿದರೆ ಕಫ ಬಿಗಿದುಕೊಂಡಿದ್ದು ಸಡಿಲವಾಗುತ್ತದೆ ಇದನ್ನ ಮಕ್ಕಳಿಗೂ ಕೂಡ ಹಚ್ಚಬಹುದು.

ಇನ್ನು ಕೂದಲಿಗೂ ಕೂಡ ಕರ್ಪೂರ ಬಹಳನೇ ಉಪಯುಕ್ತ ಪ್ರಯೋಜನವನ್ನು ನೀಡಬಹುದು ಕೂದಲಿನ ಉದುರುವಿಕೆ ಸಮಸ್ಯೆ ಇದ್ದರೆ ತಲೆಹೊಟ್ಟಿನ ಸಮಸ್ಯೆ ಇದ್ದರೆ ಕೊಬ್ಬರಿ ಎಣ್ಣೆಯಲ್ಲಿ ಕರ್ಪೂರವನ್ನು ಪುಡಿ ಮಾಡಿ ಮಿಕ್ಸ್ ಮಾಡಿ ತಲೆಗೆ ಲೇಪಿಸುತ್ತಾ ಬನ್ನಿ ನಿಯಮಿತವಾಗಿ ಇತರ ಮಾಡಿದರೆ ಕೂದಲಿನ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ.

ಇನ್ನು ಸ್ವಲ್ಪ ಕರ್ಪೂರವನ್ನು ಪುಡಿ ಮಾಡಿ ಅದಕ್ಕೆ ಎರಡು ಚಮಚದಷ್ಟು ಲವೆಂಡರ್ ಎಣ್ಣೆಯನ್ನು ಬೆರೆಸಬೇಕು ನಂತರ ಸ್ಪ್ರೇ ಬಾಟಲಿಗೆ ಈ ಮಿಶ್ರಣವನ್ನು ಹಾಕಿ ಮರೆತು ತುಂಬಾ ಸ್ಪ್ರೇ ಮಾಡಿ ಇದು ರೂಮ್ ಫ್ರೆಶ್ನರ್ ಅಂತೆ ಕೆಲಸ ಮಾಡುತ್ತದೆ ಜೊತೆಗೆ ಸೊಳ್ಳೆ ಮೊದಲಾದ ಕ್ರಿಮಿ ಕೀಟಗಳು ಮನೆ ಒಳಗೆ ನುಸುಳದಂತೆ ನೋಡಿಕೊಳ್ಳುತ್ತದೆ.

ಇನ್ನು ಚರ್ಮದಲ್ಲಿ ತುರಿಕೆ ಅಥವಾ ಒಡೆಯುವುದು ಇಂತಹ ಸಮಸ್ಯೆ ಇದ್ದರೆ ಕೊಬ್ಬರಿ ಎಣ್ಣೆ ಜೊತೆ ಕರ್ಪೂರದ ಪುಡಿಯನ್ನು ಸೇರಿಸಿ ಹಚ್ಚಿಕೊಳ್ಳಿ ಚಳಿಗಾಲದಲ್ಲಿ ಬಿರುಕು ಬಿಟ್ಟ ಹಿಮ್ಮಡಿಗಳಿಗೂ ಕೂಡ ಇದನ್ನ ಲೇಪಿಸಿದರೆ ತಕ್ಷಣ ಪರಿಹಾರ ಸಿಗುತ್ತದೆ.

Comments are closed.