BOB Job: ಬ್ಯಾಂಕ್ ಆಫ್ ಬರೋಡದಿಂದ ಜಾಬ್ ಆಫರ್; ಕೈತುಂಬಾ ಸಂಬಳ; ಅಪ್ಲೈ ಮಾಡೋದಕ್ಕೆ ಲಾಸ್ಟ್ ಡೇಟ್ ಯಾವಾಗ ಗೊತ್ತಾ?

BOB Job: ಒಂದು ವೇಳೆ ನೀವು ಕೆಲಸ ಇಲ್ಲದೆ ಉದ್ಯೋಗವನ್ನು ಹುಡುಕ್ತಾ ಇದ್ರೆ ಖಂಡಿತವಾಗಿ ಈ ಮಾಹಿತಿ ನಿಮಗೆ ಉಪಯುಕ್ತಕಾರಿಯಾಗಿದೆ. ಭಾರತದ ಜನಪ್ರಿಯ ಹಾಗೂ ನಂಬಿಕಸ್ತ ಬ್ಯಾಂಕುಗಳಲ್ಲಿ ಒಂದಾಗಿರುವಂತಹ ಬ್ಯಾಂಕ್ ಆಫ್ ಬರೋಡದಲ್ಲಿ ಹುದ್ದೆ ಖಾಲಿ ಇದ್ದು ಆಹ್ವಾನಕ್ಕಾಗಿ ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆಯನ್ನು ಕೂಡ ಪ್ರಾರಂಭಿಸಲಾಗಿದ್ದು ಒಂದುವೇಳೆ ನೀವು ಅರ್ಹರಾಗಿದ್ರೆ ಹಾಗೂ ಆಸಕ್ತಿಯನ್ನು ಹೊಂದಿದ್ದರೆ ಅರ್ಜಿಯನ್ನು ಸಲ್ಲಿಸಬಹುದಾಗಿದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಬ್ಯಾಂಕ್ ಆಫ್ ಬರೋಡದಲ್ಲಿ ಖಾಲಿ ಹುದ್ದೆಗೆ ಆಹ್ವಾನ!

ಎಜುಕೇಶನ್ ಕ್ವಾಲಿಫಿಕೇಷನ್ ಹಾಗೂ ವಯೋ ಮಾನ್ಯತೆ

  • ಬಿಎ, ಎಮ್ ಬಿ ಎ, ಎಂ ಸಿ ಎ, ಹಾಗೂ ಎಂ ಎಸ್ ಸಿ ಪದವಿಯನ್ನು ಯಾವುದೇ ಮಾನ್ಯತೆ ಪಡೆದಿರುವಂತಹ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿರಬೇಕಾಗಿರುತ್ತದೆ.

ನಿಯಮಗಳ ಪ್ರಕಾರ 21 ವರ್ಷದಿಂದ 45 ವರ್ಷಗಳ ನಡುವಿನ ವಯೋಮಿತಿಯನ್ನು ಹೊಂದಿರಬೇಕಾಗಿರುತ್ತದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ವಯೋಮಿತಿಯ ಸಡಿಲಿಕೆಯನ್ನು ಮಾಡಲಾಗುತ್ತದೆ ಎಂಬುದಾಗಿ ಕೂಡ ತಿಳಿಸಲಾಗಿದೆ.

ಉದ್ಯೋಗ ಸ್ಥಳ

ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಬ್ಯಾಂಕ್ ಆಫ್ ಬರೋಡದ ದಕ್ಷಿಣ ಕನ್ನಡ ಜಿಲ್ಲೆಯ ಬ್ರಾಂಚ್ ನಲ್ಲಿ ಪೋಸ್ಟಿಂಗ್ ಮಾಡಲಾಗುತ್ತದೆ ಎಂಬುದಾಗಿ ತಿಳಿದು ಬಂದಿದ್ದು ಹೀಗಾಗಿ ಇಲ್ಲಿನ ಅಭ್ಯರ್ಥಿಗಳಿಗೆ ಪ್ರಮುಖ ಆದ್ಯತೆಯನ್ನು ನೀಡಬಹುದಾಗಿದೆ ಎಂಬುದಾಗಿ ಕೂಡ ಭಾವಿಸಬಹುದಾಗಿದೆ.

ಸಿಗುವಂತಹ ಸಂಬಳ!

ಬ್ಯಾಂಕ್ ಆಫ್ ಬರೋಡದ ಈ ಹುದ್ದೆಗೆ ಆಯ್ಕೆಯಾಗುವಂತಹ ಅಭ್ಯರ್ಥಿಗಳಿಗೆ ತಿಂಗಳಿಗೆ ಹತ್ತರಿಂದ ಹದಿನೈದು ಸಾವಿರ ರೂಪಾಯಿಗಳ ಆರಂಭಿಕ ಸಂಬಳವನ್ನು ನೀಡಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.

ಆಯ್ಕೆ ಪ್ರಕ್ರಿಯೆ ಹಾಗೂ ಅರ್ಜಿ ಹಾಕುವ ವಿಧಾನ!

ಬ್ಯಾಂಕ್ ಆಫ್ ಬರೋಡದ ಈ ಹುದ್ದೆಗೆ ಅಭ್ಯರ್ಥಿಗಳನ್ನ ಇಂಟರ್ವ್ಯೂ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.

ಅಭ್ಯರ್ಥಿಗಳು ಅರ್ಜಿಯನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳ ಜೊತೆಗೆ ಪ್ರಾದೇಶಿಕ ವ್ಯವಸ್ಥಾಪಕರು
ಬ್ಯಾಂಕ್ ಆಫ್ ಬರೋಡಾ
ಪ್ರಾದೇಶಿಕ ಕಛೇರಿ
R.E.B ಎನ್ಕ್ಲೇವ್
ನೆಲ ಮಹಡಿ
ದುಗ್ಗಮ್ಮ ದೇರಣ್ಣ ಹಾಲ್ ಹತ್ತಿರ
ಬೈಪಾಸ್ ರಸ್ತೆ
ದರ್ಬೆ ಪುತ್ತೂರು
ದಕ್ಷಿಣ ಕನ್ನಡ
ಕರ್ನಾಟಕ-574202 ಈ ವಿಳಾಸಕ್ಕೆ ಕಳುಹಿಸಬೇಕಾಗಿರುತ್ತದೆ.

ಜೂನ್ ಒಂದನೇ ತಾರೀಖಿನಂದು ಅರ್ಜಿ ಸಲ್ಲಿಕೆ ಪ್ರಾರಂಭವಾಗಿರುತ್ತದೆ. ಹೀಗಾಗಿ ಇವತ್ತೇ ನೀವು ಅರ್ಜಿಯನ್ನು ಸಲ್ಲಿಸುವಂತಹ ಆಸಕ್ತಿಯನ್ನು ಹೊಂದಿದ್ದರೆ ಸರಿಯಾದ ರೀತಿಯಲ್ಲಿ ಅರ್ಜಿಯನ್ನು ಭರ್ತಿ ಮಾಡಿದ ನಂತರ ಮೇಲೆ ನೀಡಿರುವಂತಹ ವಿಳಾಸಕ್ಕೆ ಪೋಸ್ಟ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸ ಬಹುದಾಗಿದೆ. ಬ್ಯಾಂಕ್ ಆಫ್ ಬರೋಡ ಒಂದು ಪ್ರತಿಷ್ಠಿತ ಬ್ಯಾಂಕ್ ಆಗಿರುವ ಕಾರಣದಿಂದಾಗಿ ಭವಿಷ್ಯದಲ್ಲಿ ಕೂಡ ಖಂಡಿತವಾಗಿ ನಿಮಗೆ ಈ ಸಂಸ್ಥೆಯಲ್ಲಿ ಕೆಲಸ ಮಾಡುವುದರಿಂದ ಸಾಕಷ್ಟು ಲಾಭಗಳನ್ನು ಹಾಗೂ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

Comments are closed.