Darshan Viral Video: ದರ್ಶನ್ ಗೆ ಹತ್ತಿರವಾಗಿದ್ದು ಬೇರೆ ಯಾರೋ, ಆದರೆ ವಿಜಯಲಕ್ಷ್ಮಿ ಹತ್ರ ಉಗಿಸಿಕೊಂಡಿದ್ದು ಮಾತ್ರ ಮೇಘಾ ಶೆಟ್ಟಿ; ಎಲ್ಲಾ ಗೊತ್ತಿದ್ರೂ ದರ್ಶನ್ ಮಾತ್ರ ಸುಮ್ಮನೆ ಇರೋದ್ಯಾಕೋ? ಇಲ್ಲಿದೆ ನೋಡಿ ವೈರಲ್ ವಿಡಿಯೋ!

Darshan Viral Video: ನಟ ದರ್ಶನ (Darshan) 46ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ಅಭಿಮಾನಿಗಳು ಅವರ ಹುಟ್ಟು ಹಬ್ಬ (Birthday) ವನ್ನು ಬಹಳ ಗ್ರಾಂಡ್ ಆಗಿ ಆಚರಿಸಿದ್ದಾರೆ. ಆದರೆ ಈ ಬಾರಿಯ ಹುಟ್ಟುಹಬ್ಬ ಪ್ರತಿ ವರ್ಷಕ್ಕಿಂತ ಬಹಳ ವಿಭಿನ್ನವಾಗಿತ್ತು. ಈ ಬಾರಿ ಯಾವ ಹಾರ, ತುರಾಯಿ, ಕೇಕ್ (cake) ಹಾಲಿನ ಅಭಿಷೇಕ ಇತರಹದ ದುಂದು ವೆಚ್ಚಗಳು ಇರಲಿಲ್ಲ ಅದರ ಬದಲಿಗೆ ದವಸ ಧಾನ್ಯಗಳನ್ನ ತಂದು ದರ್ಶನ್ ಮನೆಯ ಎದುರು ತುಂಬಿಸಿದ್ದರು. ದರ್ಶನ್ ಅಭಿಮಾನಿಗಳು ಇದನ್ನು ಅಗತ್ಯ ಇದ್ದವರಿಗೆ ತಲುಪಿಸುವ ಜವಾಬ್ದಾರಿಯನ್ನು ದರ್ಶನ್ ಅವರೇ ತೆಗೆದುಕೊಂಡಿದ್ದಾರೆ.

ಇನ್ನು ದರ್ಶನ್ ಅಂದ್ರೆ ಎಷ್ಟು ದೊಡ್ಡ ಕ್ರೇಜ್ (Craze) ಇದೆ ಅನ್ನೋದು ನಾವು ಪ್ರತ್ಯೇಕವಾಗಿ ಹೇಳಬೇಕಿಲ್ಲ ಯಾಕೆಂದರೆ ಇಡೀ ಕರುನಾಡೆ ದರ್ಶನ್ ಅವರ ಬೆನ್ನೆಲುಬಾಗಿ ನಿಂತಿದೆ ಅವರನ್ನು ಅಷ್ಟಾಗಿ ಪ್ರೀತಿಸುತ್ತಾರೆ. ಇನ್ನು ದರ್ಶನ್ ಅವರಿಗೆ ಮಹಿಳಾ ಅಭಿಮಾನಿಗಳು ಇತರ ಕಲಾವಿದರಿಗೆ ಹೋಲಿಸಿದರೆ ತುಸು ಜಾಸ್ತಿ ಎನ್ನಬಹುದು. ಒಮ್ಮೆ ದರ್ಶನ್ ಅವರನ್ನು ನೇರವಾಗಿ ಭೇಟಿ ಆದರೆ ಸಾಕು ಎನ್ನುವ ಅದೆಷ್ಟು ಮಹಿಳಾ ಅಭಿಮಾನಿಗಳು ಇದ್ದಾರೆ. ಕೇವಲ ಜನಸಾಮಾನ್ಯರು ಮಾತ್ರವಲ್ಲದೆ ಸೆಲೆಬ್ರಿಟಿ (Celebrities) ಕಲಾವಿದೆಯರಿಗೂ ಕೂಡ ದರ್ಶನ್ ಅಂದರೆ ಪಂಚಪ್ರಾಣ ಅಂಥವರಲ್ಲಿ ನಟಿ ಮೇಘ ಶೆಟ್ಟಿ (Megha Shetty) ಕೂಡ ಒಬ್ಬರು. ಇದನ್ನೂ ಓದಿ: Actor Shakti Prasad: ಕನ್ನಡ ಚಿತ್ರರಂಗದ ಖ್ಯಾತ ಖಳನಟ ಶಕ್ತಿ ಪ್ರಸಾದ್ ಕುಟುಂಬಕ್ಕೆ ’ಸರ್ಜಾ’ ಸರ್ ನೇಮ್ ಇಟ್ಕೊಂಡಿದ್ದು ಯಾಕೆ ಗೊತ್ತಾ? ಅಯ್ಯೋ ನಿಜಕ್ಕೂ ಗ್ರೇಟ್ ಕಣ್ರಿ!

ಜೊತೆ ಜೊತೆಯಲಿ ಧಾರಾವಾಹಿ (Jotejoteyal;I serial) ಯ ಖ್ಯಾತಿಯ ಮೇಘ ಶೆಟ್ಟಿ ಈಗಾಗಲೇ ತಾನು ದರ್ಶನ್ ಅವರ ಫ್ಯಾನ್ ಎಂದು ಹೇಳಿಕೊಂಡಿದ್ದರು. ಅದಕ್ಕೆ ತಕ್ಕ ಹಾಗೆ ದರ್ಶನ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಸ್ನೇಹಿತರ ಜೊತೆಗೆ ಸೇರಿ ಒಂದು ಪಾರ್ಟಿ (Party) ಅರೆಂಜ್ ಮಾಡಿದ್ದರು. ಅಭಿಮಾನಿಗಳು ಕೇಳಿದ್ದಕ್ಕೆ ಇಲ್ಲ ಎನ್ನುವ ಪ್ರವೃತ್ತಿ ದರ್ಶನ್ ಅವರದಲ್ಲ ಹಾಗಾಗಿ ಮೇಘ ಶೆಟ್ಟಿ ಹಾಗೂ ಸ್ನೇಹಿತರು ಸಿದ್ಧಪಡಿಸಿದ ಪಾರ್ಟಿಗೆ ದರ್ಶನ್ ಅವರು ಹೋಗಿದ್ದರು. ಇದನ್ನೂ ಓದಿ: Weekend with Ramesh: ನಿಜಕ್ಕೂ ಸಾಧಕರ ಸೀಟ್ನಲ್ಲಿ ರಮೇಶ್ ಜೊತೆ ಕುಳಿತುಕೊಳ್ಳಲು ಆ ಇಬ್ಬರು ಸಾಧಕರಿಗೆ ಇರುವಷ್ಟು ಅರ್ಹತೆ ಬೇರೆ ಯಾರಿಗೂ ಇಲ್ಲ; ಅವರು ಯಾರು ಗೊತ್ತೆ?

ಪಾರ್ಟಿಯಲ್ಲಿ ದರ್ಶನ್ ಅವರ ಜೊತೆಗೆ ಮೇಘ ಶೆಟ್ಟಿ ಹಾಗೂ ಅವರ ಸ್ನೇಹಿತೆ ಪವಿತ್ರ ಗೌಡ (Pavitra Gowda) ಮೊದಲ ದವರು ಬಹಳ ಕ್ಲೋಸ್ ಆಗಿದ್ದರು. ದರ್ಶನ್ ಅವರ ಜೊತೆಗೆ ನಿಂತು ತೆಗೆಸಿದ ಫೋಟೋಗಳನ್ನು ಪವಿತ್ರ ಗೌಡ ಕೂಡ ಆಗಾಗ ತಮ್ಮ ಸೋಶಿಯಲ್ ಮೀಡಿಯಾ (social media) ದಲ್ಲಿ ಶೇರ್ ಮಾಡುತ್ತಾರೆ. ಈ ತರಹದ ವಿಡಿಯೋ ನೋಡಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ (Vijaylaxmi) ಗೆ ಸರಿ ಹೋಗಿಲ್ಲ ಹಾಗಾಗಿ ಅವರು ತಕ್ಷಣ ಇದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡಿದ್ದಾರೆ.

ಮೇಘ ಶೆಟ್ಟಿ ಅವರಲ್ಲಿ ಕಳಕಳಿಯ ವಿನಂತಿ ಮಾಡಿಕೊಂಡಿರುವ ವಿಜಯಲಕ್ಷ್ಮಿ ಇಂತಹ ವಿಡಿಯೋಗಳು ನಮ್ಮ ಸಂಸಾರವನ್ನು ಹಾಳು ಮಾಡುತ್ತವೆ. ನನಗೂ ಹಾಗೂ ನನ್ನ ಮಗನಿಗೂ ಇದರಿಂದ ಬೇಸರವಾಗಿದೆ. ಈ ರೀತಿಯ ವಿಡಿಯೋಗಳನ್ನು ಪೋಸ್ಟ್ ಮಾಡಬೇಡಿ ಎಂದು ಕೇಳಿಕೊಂಡಿದ್ದರು. ಮೇಘ ಶೆಟ್ಟಿ ವಿಡಿಯೋವನ್ನು ತಕ್ಷಣ ಡಿಲೀಟ್ ಮಾಡಿದ್ದಾರೆ ಸರಿ ಆದರೆ ಈ ಬಗ್ಗೆ ಚರ್ಚೆಗಳು ಅಂತೂ ನಿಂತಿಲ್ಲ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನ ವಿಜಯಲಕ್ಷ್ಮಿ ಪರವಾಗಿ ನಿಂತಿದ್ದಾರೆ. ಆದರೆ ಈ ಸಂದರ್ಭದಲ್ಲಿ ನಟ ದರ್ಶನ್ ಮಾತ್ರ ಮೌನ ತಾಳಿದ್ದು ಯಾಕೆ ಎನ್ನುವುದು ಅರ್ಥವಾಗುತ್ತಿಲ್ಲ.

Comments are closed.