Birth Month: ನೀವು ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದ್ದೀರಾ? ಹಾಗಾದರೆ ನಿಮ್ಮಷ್ಟು ವಿಶಿಷ್ಟವಾದ ಸ್ವಭಾವ ಬೇರೆಯಾರದ್ದೂ ಅಲ್ಲ; ಏನು ಗೊತ್ತಾ?

Birth Month: ಪ್ರತಿಯೊಬ್ಬರು ಹುಟ್ಟಿದ ತಿಂಗಳಿನ ಆಧಾರದ ಮೇಲೆ ಜ್ಯೋತಿಷ್ಯ ಶಾಸ್ತ್ರ (Astrology) ದ ಪ್ರಕಾರ ಅವರ ಗುಣ ಸ್ವಭಾವ ಹಾಗೂ ಭವಿಷ್ಯ ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ (Numerology) ದ ಪ್ರಕಾರ ಇಂತಹ ತಿಂಗಳಿನಲ್ಲಿ ಇಂತಹ ಗುಣ ಹೊಂದಿರುತ್ತಾರೆ ಎಂಬುದನ್ನ ಹೇಳಲಾಗುತ್ತದೆ. ಇನ್ನೇನು ಡಿಸೆಂಬರ್ (December) ತಿಂಗಳು ಬರುತ್ತಿದೆ ಡಿಸೆಂಬರ್ ನಲ್ಲಿ ನೀವು ಹುಟ್ಟಿದ್ದರೆ ನಿಮ್ಮ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಹಾಗಾದ್ರೆ ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದವರ ಗುಣ ಸ್ವಭಾವ ಎಂತದು ನೋಡೋಣ ಬನ್ನಿ.

JYO 1 | Live Kannada News
Birth Month: ನೀವು ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದ್ದೀರಾ? ಹಾಗಾದರೆ ನಿಮ್ಮಷ್ಟು ವಿಶಿಷ್ಟವಾದ ಸ್ವಭಾವ ಬೇರೆಯಾರದ್ದೂ ಅಲ್ಲ; ಏನು ಗೊತ್ತಾ? https://sihikahinews.com/december-month-born-personality/

ನೀವು ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದ್ದೀರಾ?!

ಪ್ರತಿ ತಿಂಗಳು ಜನಿಸಿದವರ ಸ್ವಭಾವ ಹಾಗೂ ಜೀವನದಲ್ಲಿ ಬದಲಾವಣೆ ಇದ್ದೇ ಇರುತ್ತೆ. ಇನ್ನು ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದವರ ಗುಣ ಸ್ವಭಾವದ ಬಗ್ಗೆ ಹೇಳುವುದಾದರೆ ಇವರು ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿರುವವರು. ಜ್ಯೋತಿಷ್ಯ ಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಹೇಳುವ ಪ್ರಕಾರ ಡಿಸೆಂಬರ್ ತಿಂಗಳಿನಲ್ಲಿ ಯಾರು ಹುಟ್ಟಿರುತ್ತಾರೋ ಅವರು ಬಹಳ ಪ್ರಾಮಾಣಿಕರು. ಯಾವಾಗಲೂ ಸತ್ಯದ ಪರವಾಗಿಯೇ ಅವರ ನಿಲವು ಇರುತ್ತದೆ. ಯಾರಾದರೂ ತಪ್ಪು ಮಾಡಿದರೆ ಇವರು ಕ್ಷಮಿಸುವುದಿಲ್ಲ. ಇದನ್ನೂ ಓದಿ: Astrology: ಮನೆಯಲ್ಲಿ ಅದೆಷ್ಟೇ ಹಣಕಾಸಿನ ಸಮಸ್ಯೆ ಇರಲಿ, ಶುಕ್ರವಾರದ ದಿನ ಹೀಗೊಂದು ಕೆಲಸ ಮಾಡಿ ನೋಡಿ; ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ಉಳಿದುಬಿಡುತ್ತಾಳೆ!

ಇನ್ನು ಡಿಸೆಂಬರ್ ತಿಂಗಳಿನಲ್ಲಿ ಜನಿಸಿದವರ ಗುಣ ಬಹಳ ಒಳ್ಳೆಯದು. ಅವರು ಯಾವುದೇ ಕೆಲಸವನ್ನು ತರಾತುರಿಯಲ್ಲಿ ಮಾಡುವುದಿಲ್ಲ ಹಲವು ಬಾರಿ ಯೋಚಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಸಾಕಷ್ಟು ವಿಷಯಗಳನ್ನು ಸರಿಪಡಿಸಲು ಮುಂದಾಗುತ್ತಾರೆ. ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಬೇಕು ಎಂಬ ಸ್ವಭಾವ ಇವರದ್ದು ಹಾಗೆ ಅವರು ಸ್ವಚ್ಛತೆಗೆ ಹೆಚ್ಚು ಮಹತ್ವ ಕೊಡುತ್ತಾರೆ.

ಇನ್ನು ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದವರು ಮಹತ್ವಾಕಾಂಕ್ಷೆ ಉಳ್ಳವರು ಎಂದೇ ಹೇಳಬಹುದು. ಅಲ್ಲದೆ ಈ ತಿಂಗಳಿನಲ್ಲಿ ಹುಟ್ಟಿದ ಜನ ಬಹಳ ಲಕ್ಕಿ (Lucky) ಕಷ್ಟಪಟ್ಟು ಕೆಲಸ ಮಾಡಿದರೆ ಇವರಿಗೆ ಉತ್ತಮ ಫಲವೇ ಸಿಗುತ್ತದೆ ಕುಟುಂಬದ ಅಗತ್ಯಗಳನ್ನು ಪೂರೈಸುವಲ್ಲಿ ಸದಾ ನಿರತರಾಗಿರುವ ಇವರು ತಮಗೆ ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಾರೆ. ಇದನ್ನೂ ಓದಿ:Numerology; ನಿಮ್ಮ ಹುಟ್ಟಿದ ದಿನಾಂಕವೇ ನಿಮ್ಮ ಸ್ವಭಾವ ಹಾಗೂ ಭವಿಷ್ಯ ಹೇಳುತ್ತದೆ; ನಿಮ್ಮ ಹುಟ್ಟಿದ ದಿನಾಂಕ ಯಾವುದು?

ಡಿಸೆಂಬರ್ ನಲ್ಲಿ ಹುಟ್ಟಿದ ಜನರನ್ನ ಅರ್ಥ ಮಾಡಿಕೊಳ್ಳುವುದು ಕಷ್ಟ ಆದರೆ ಅವರು ಬೇರೆಯವರನ್ನು ಕೂಡಲೇ ಅರ್ಥ ಮಾಡಿಕೊಳ್ಳುತ್ತಾರೆ. ಕರುಣೆಯ ಸ್ವಭಾವ ಇವರದ್ದು. ಇವರನ್ನ ಕಣ್ಮುಚ್ಚಿಕೊಂಡು ನಂಬಬಹುದು. ಇವರ ಜ್ಞಾನ ಹಾಗೂ ಇವರಿಗೆ ದೇವರ ಮೇಲಿರುವ ನಂಬಿಕೆ ಅವರನ್ನ ಯಶಸ್ಸಿನತ್ತ ಕೊಂಡುಯುತ್ತದೆ. ಇನ್ನು ಡಿಸೆಂಬರ್ ತಿಂಗಳಿನಲ್ಲಿ ಜನಿಸಿದವರಿಗೆ ಆಧ್ಯಾತ್ಮಿಕ ಒಲವು ಜಾಸ್ತಿ. ಇವರ ಆಯಸ್ಸು ಕೂಡ ಹೆಚ್ಚು ಇವರು ಭೂಮಿಯ ಮೇಲೆ ಹೆಚ್ಚು ಸಮಯ ಬದುಕುತ್ತಾರೆ ಎಂದು ಹೇಳಲಾಗುತ್ತದೆ. ನೀವು ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದವರಾದರೆ ನಿಮ್ಮ ಸ್ವಭಾವ ಇದೇ ರೀತಿ ಇದೆಯಾ ನೋಡಿಕೊಳ್ಳಿ

Comments are closed.