Kannada Bigg Boss Season -9: ಬಿಗ್ ಬಾಸ್ ಮನೆಯಿಂದ ದೀಪಿಕಾ ದಾಸ್ ಆಟಕ್ಕೆ ಬಿತ್ತು ಬ್ರೇಕ್; ಟಾಸ್ಕ್ ಗಳ ಚಾಂಪಿಯನ್ ದೊಡ್ಮನೆಯಿಂದ ಹೊರಬಿದ್ದಿದ್ದು ಇದೆ ಕಾರಣಕ್ಕೆ ನೋಡಿ?!

Kannada Bigg Boss Season -9: ಬಿಗ್ ಬಾಸ್ ಸೀಸನ್ 9 ಹಾಫ್ ಸೆಂಚುರಿ (half century) ಯಶಸ್ವಿಯಾಗಿ ಪೂರೈಸಿದೆ. ಇನ್ನೇನು ಅರ್ಧ ದಾರಿ ಬಾಕಿ ಇದೆ ಅಷ್ಟೇ. ಈ ಬಾರಿಯ ಬಿಗ್ ಬಾಸ್ ಥೀಮ್ ಆಗಿದ್ದ ನವೀನರು ಪ್ರವೀಣರು ಎನ್ನುವ ವಿಭಾಗದಲ್ಲಿ ಮನೆಯಿಂದ ಹೊರ ನಡೆದವರಲ್ಲಿ ನವೀನರೆ ಹೆಚ್ಚು. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಆಟವಾಡಿದ್ದು, ಆ ಅನುಭವ ಪ್ರವೀಣರಿಗೆ ಮನೆಯಲ್ಲಿ ಇನ್ನಷ್ಟು ದಿನ ಇರಲು ಸಹಾಯಕವಾಗಿದ್ದಂತು ಸತ್ಯ. ದೀಪಿಕಾ ದಾಸ್ (Deepika Das) ಕೂಡ ಬಿಗ್ ಬಾಸ್ ಸೀಸನ್ 8ರಲ್ಲಿ ಫೈನಲ್ (Final) ವರೆಗೂ ಬಂದು ಗುರುತಿಸಿಕೊಂಡವರು.

ಹೌದು ದೀಪಿಕಾ ದಾಸ್ ನಾಗಿಣಿಯಾಗಿ ಸೀರಿಯಲ್ (Serials) ನಲ್ಲಿ ಮಿಂಚಿದವರು. ನಂತರ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟು ತಮ್ಮದೇ ಆದ ವಿಶೇಷ ವ್ಯಕ್ತಿತ್ವ ದಿಂದ ಗಮನ ಸೆಳೆದವರು. ದೀಪಿಕಾ ದಾಸ್ ಸಕ್ಕತ್ ಸ್ಟ್ರಾಂಗ್ (Strong). ಟಾಸ್ಕ್ ವಿಚಾರದಲ್ಲಿ ಬೇರೆಯವರಿಗೆ ಬಿಟ್ಟುಕೊಡುವ ಮಾತೇ ಇಲ್ಲ. ಮಾತು ಕಡಿಮೆ ಕೆಲಸ ಜಾಸ್ತಿ ಎನ್ನುವ ಜಾತಿಗೆ ಸೇರಿದವರು.

ಇದನ್ನೂ ಓದಿ: Bigg Boss Kannada season -9 :ಬಿಗ್ ಬಾಸ್ ಮನೆಯಲ್ಲಿ ಜೋರಾಗಿದೆ ಗ್ರೂಪಿಸಂ; ಇಲ್ಲಿದೆ ನೋಡಿ ಇದಕ್ಕೆ ಪಕ್ಕಾ ಪ್ರೂಫ್!

ಇದೀಗ ದೀಪಿಕಾ ಬಿಗ್ ಬಾಸ್ ಮನೆಯ ಆಟ ಮುಗಿಸಿ ಹೊರ ನಡೆದಿದ್ದಾರೆ. ಕಳೆದ ವಾರ 50 ದಿನ ಪೂರೈಸಿದ ಸಲುವಾಗಿ ಯಾರನ್ನೂ ಎಲಿಮಿನೇಟ್ (eliminate) ಮಾಡಿರಲಿಲ್ಲ. ಈ ವಾರಾಂತ್ಯದಲ್ಲಿ ಹತ್ತು ಜನ ನಾಮಿನೇಟ್ ಆಗಿರುವವರು ಪೈಕಿ ದೀಪಿಕಾ ದಾಸ್ ಎಲಿಮಿನೇಟ್ ಆಗಿ ಬಿಗ್ ಬಾಸ್ ಜರ್ನಿ ಮುಗಿಸಿದ್ದಾರೆ. ಕಳೆದ ಸೀಸನ್ ನಲಿಯೇ ಲಾಂಗ್ ಜರ್ನಿ ಮಾಡಿದವರು ದೀಪಿಕಾ ದಾಸ್. ಒಮ್ಮೆ ಬಿಗ್ ಬಾಸ್ ಸೀಸನ್ ಗೆ ಬಂದಿದ್ದಕ್ಕಾಗಿ, ಮತ್ತೆ ಬೇರೆಯವರಿಗೆ ಅವಕಾಶ ನೀಡಬೇಕು ಎನ್ನುವ ಸಲುವಾಗಿ ಈ ಬಾರಿ ಬೇಗ ಎಲಿಮಿನೇಟ್ ಆಗಿರಬಹುದೇ ಹೊರತು ಅವರ ಆಟವಾಗಲಿ ಅವರ ಸ್ವಭಾವವಾಗಲಿ ದೀಪಿಕಾ ಅವರಿಗೆ ಮುಳುವಾಗಿಲ್ಲ.

ದೀಪಿಕಾ ದಾಸ್ ಗೆ ಮೇಕಪ್ ಅಂದ್ರೆ ತುಂಬಾ ಇಷ್ಟ. ಬಿಗ್ ಬಾಸ್ ಮನೆಯಲ್ಲಿಯೂ ಡೀಸೆಂಟ್ ಅದ ಬಟ್ಟೆ ಧರಿಸಿ, ಮೇಕಪ್ ಮಾಡಿಕೊಂಡು ಎಲ್ಲರ ಗಮನ ಸೆಳೆದಿದ್ದರು. ಯಾವ ಗುಂಪುಗಾರಿಕೆ ಮಾಡದೆ ಆಟದ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದ ದೀಪಿಕಾ ಕಳೆದ ಸೀಸನ್ ನಲ್ಲಿಯೂ ಕೂಡ ತಮ್ಮ ಇದೆ ಸೈಲೆಂಟ್ ಗುಣದಿಂದ ಎಲ್ಲರಿಗೂ ಇಷ್ಟವಾಗಿದ್ದು. ಅಂದಹಾಗೆ ದೀಪಿಕಾ ದಾಸ್ ಮನೆಯಿಂದ ಹೊರ ನಡೆದರೂ ಮೊದಲೇ ಒಪ್ಪಿಕೊಂಡ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಕೊಳ್ಳಲಿದ್ದಾರೆ. ಇನ್ನು ನಿಮ್ಮ ನೆಚ್ಚಿನ ದೀಪಿಕಾ ದಾಸ್ ಅವರನ್ನು ಬೆಳ್ಳಿಪರದೆಯ ಮೇಲೆ ನೋಡಬಹುದು.

Comments are closed.