Skin Care:ಹೇಗೇಗೋ ಫೇಸ್ ವಾಶ್ ಮಾಡಿ ಮುಖದ ತ್ವಚೆ ಹಾಳಾಗಬಹುದು ಎಚ್ಚರ; ಸರಿಯಾದ ವಿಧಾನ ಯಾವುದು ಗೊತ್ತಾ?

Skin Care: ಈಗಿನ ಯುವಕರು ಚರ್ಮದ ಬಗ್ಗೆ ವಿಪರೀತ ಕಾಳಜಿ ಹೊಂದಿರುತ್ತಾರೆ. ಹಾಗಾಗಿ ಹಲವಾರು ಬಗೆಯ ಕ್ರೀಮ್ಗಳನ್ನು ಬಳಸಿ ಚರ್ಮವನ್ನು ಆರೈಕೆ ಮಾಡುತ್ತಾರೆ. ಆದರೆ ಈ ಕ್ರೀಮ್ಗಳನ್ನು ಬಳಕೆ ಮಾಡುವ ವೇಳೆ ತಪ್ಪು ಮಾಡುತ್ತಾರೆ. ಸೆಲೆಬ್ರಿಟಿ ಡರ್ಮಟಾಲಜಿಸ್ಟ್ ಅವರು ಫೇಸ್ ವಾಷ್ ಮಾಡುವಾಗ ಯಾವ ರೀತಿ ಮಾಡಬೇಕು ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ.

ಪ್ರತಿದಿನ ಮುಖವನ್ನು ನಿಯಮಿತವಾಗಿ ತೊಳೆಯುವುದರಿಂದ ಮುಖದ ಚರ್ಮದ ಕಾಂತಿ ಹಾಗೆಯೇ ಇರುತ್ತದೆ. ಮುಖದಲ್ಲಿರುವ ಎಣ್ಣೆಯ ಅಂಶ ಹಾಗೂ ಕೊಳಕನ್ನು ತೆಗೆಯಲು ಪೇಸ್ ವಾಶ್ ಬಳಸುವುದು ಸಾಮಾನ್ಯವಾಗಿದೆ. ಈ ಫೇಸ್ ವಾಶ್ ಬಳಕೆ ಮಾಡುವುದಕ್ಕೂ ವಿಧಾನವಿದೆ. ಅದು ನಿಮ್ಮ ಕಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಫೇಸ್ ವಾಶ್ ಬಳಕೆ ಮಾಡುವ ವೇಳೆ ಮಾಡುವ ತಪ್ಪಿನಿಂದಾಗಿ ಮುಖದ ಮೇಲೆ ಮೊಡವೆಗಳು ಏಳುವ ಸಾಧ್ಯತೆಗಳಿವೆ. ಇದನ್ನೂ ಓದಿ: Cash Back:ಗೂಗಲ್ ಪೇನಲ್ಲಿ ಕ್ಯಾಶ್ ಬ್ಯಾಕ್ ಬದಲು ಬೇರೆ ಬೇರೆ ಆಫರ್ಗಳು ಬರುತ್ತಿವೆಯೇ? ಹಾಗಾದರೆ ಈ ಟ್ರಿಕ್ಸ್ ಫಾಲೋ ಮಾಡಿ, ಕ್ಯಾಶ್ ಬ್ಯಾಕ್ ಪಡೆಯಿರಿ

ಕೆಲವು ಜನರು ಕಚೇರಿಯಿಂದ ಮನೆಗೆ ಬಂದ ತಕ್ಷಣ ಫೇಸ್ ವಾಶ್ ಬಳಸಿ ಮುಖ ತೊಳೆದುಕೊಳ್ಳುತ್ತಾರೆ. ಆದರೆ ಈ ರೀತಿ ಮಾಡಬಾರದು. ಒಣ ತ್ವಚೆಗೆ ಫೇಸ್ ವಾಶ್ ಬಳಕೆ ಮಾಡುವುದು ಸರಿಯಲ್ಲ. ಹಾಗಾಗಿ ಮೊದಲು ಒಮ್ಮೆ ಮುಖಕ್ಕೆ ನೀರನ್ನು ಹಾಕಿ ತೊಳೆದು ಮುಖ ಒದ್ದೆಯಾದ ಬಳಿಕ ಫೇಸ್ ವಾಶ್ ಹಚ್ಚಿ ಮುಖ ತೊಳೆದುಕೊಳ್ಳಬೇಕು. ಯಾವುದೇ ಒಂದು ವಸ್ತುವನ್ನು ಅತಿಯಾಗಿ ಬಳಕೆ ಮಾಡುವುದು ಒಳ್ಳೆಯದಲ್ಲ. ಈ ಮಾತು ಫೇಸ್ ವಾಷ್ಗೂ ಅನ್ವಯಿಸುತ್ತದೆ. ಅಲ್ಲದೆ ನಾವು ಫೇಸ್ ವಾಷ್ ಬಳಕೆ ಮಾಡುವ ಪ್ರಮಾಣವೂ ಸರಿಯಾಗಿ ಇರಬೇಕು. ಫೇಸ್ ವಾಷ್ ಅತಿಯಾಗಿ ಬಳಕೆ ಮಾಡುವುದರಿಂದ ಮುಖದ ಚರ್ಮ ಹಾಳಾಗುವ ಸಾಧ್ಯತೆ ಇರುತ್ತದೆ.

ಚರ್ಮ ತಜ್ಞರ ಪ್ರಕಾರ ಫೇಸ್ ವಾಷ್ ಬಳಕೆ ಮಾಡಿದ ತಕ್ಷಣ ಮುಖ ತೊಳೆಯಬಾರದು. ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, ಸ್ಯಾಲಿಸಿಲಿಕ್ ಆಮ್ಲದ ಆಧಾರದ ಮೇಲೆ ಫೇಸ್ ವಾಶ್ ಬಳಸುವುದು ಉತ್ತಮ. ಎರಡು ನಿಮಿಷಗಳಿಗಿಂತ ಹೆಚ್ಚು ಕಾಲ ಫೇಸ್ ವಾಷ್ ಹಚ್ಚಿ ಹಾಗೆಯೇ ಬಿಡಬೇಕು.
ಫೇಸ್ ವಾಷ್ ಮಾಡಿದ ನಂತರ ಮೃದುವಾದ ಟವಲ್ ಬಳಸಿ ಮುಖವನ್ನು ಸ್ಕೃಬ್ ಮಾಡಬೇಕು. ಅದರೆ ಮುಖವನ್ನು ಅತಿಯಾಗಿ ತಿಕ್ಕಲು ಹೋಗಬಾರದು.
ಮಾಯಿಶ್ಚರೈಸರ್ ಇಲ್ಲದೆ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಮುಖ ತೊಳೆದ ತಕ್ಷಣ ಮಾಯಿಶ್ಚರೈಸರ್ ಹಚ್ಚುವುದು ಉತ್ತಮ.

Comments are closed.