Eye care: ಕಣ್ಣಿಗೆ ಕಾಂಟ್ಯಾಕ್ಟ್ ಲೆನ್ಸ್ ಧರಿಸಿ ಹಾಗೆಯೇ ಮಲಗುವ ದುರಭ್ಯಾಸ ಮಾಡಿಕೊಂಡಿದ್ದೀರಾ? ಹಾಗಾದ್ರೆ ಕಣ್ಣು ಕಳೆದುಕೊಳ್ಳೋದಕ್ಕೆ ಹೆಚ್ಚು ದೂರ ಇಲ್ಲ ಬಿಡಿ; ಏನಾಗಿದೆ ಗೊತ್ತೇ?

Eye care: ಒಬ್ಬ ವ್ಯಕ್ತಿಗೆ ಕಣ್ಣು ಬಹಳ ಪ್ರಮುಖ ಅಂಗ. ಅದರಿಂದಲೇ ಜಗತ್ತು ನೋಡಲು ಸಾಧ್ಯವಾಗುವುದು. ಜಗತ್ತಿನ ಸೌಂದರ್ಯಗಳನ್ನು ಅನುಭವಿಸುಯವುದು ಕಣ್ಣಿನಿಂದಲೇ. ಹಾಗಾಗಿ ಕಣ್ಣಿನ ಆರೋಗ್ಯದ ಕುರಿತು ಯಾರೂ ಕೂಡ ನಿರ್ಲಕ್ಷ್ಯ ಮಾಡಬಾರದು. ಏನಾದರೂ ಸಣ್ಣ ಸಮಸ್ಯೆ ಎದುರಾದರೂ ಕೂಡಲೇ ವೈದ್ಯರಿದ್ದಲ್ಲಿ ತೆರಳಿ ಪರೀಕ್ಷಿಸಿಕೊಳ್ಳಬೇಕು. ಅವರು ಹೇಳುವ ಸಲಹೆ ಸೂಚನೆಗಳನ್ನು ಪಾಲಿಸಬೇಕು. ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನಿಗೆ ಕಾಂಟ್ಯಾಕ್ಟ್ ಲೆನ್ಸ್ ಅಳವಡಿಸಲಾಗಿತ್ತು. ಅದನ್ನು ಮಲಗುವ ಮುನ್ನ ತೆಗೆದಿಡಲು ಮರೆತ ಪರಿಣಾಮ ಪ್ಯಾರಾಸೈಟ್ಗಳು ಲೆನ್ಸ್ ತಿಂದು ಹಾಕಿದ ಘಟನೆ ನಡೆದಿದೆ. ಇದರಿಂದ ಅವನು ತನ್ನ ದೃಷ್ಟಿಯನ್ನು ಕಳೆದುಕೊಂಡಿದ್ದಾನೆ.

ಅಮೆರಿಕಾದ ಫ್ಲೋರಿಡಾ ನಿವಾಸಿ 21 ವರ್ಷದ ಮೈಕ್ ಕ್ರುಮ್ಹೋಲ್ಜ್ ಅವರೇ ದೃಷ್ಟಿ ಕಳೆದುಕೊಂಡವರಾಗಿದ್ದಾರೆ. ಒಂದು ದಿನ ಕೆಲಸದ ಒತ್ತಡ ಹೆಚ್ಚಾಗಿದ್ದರಿಂದ ಸುಸ್ತಾಗಿ ಮಲಗಿಕೊಂಡಿದ್ದ. ಈತ ಕಳೆದ ಏಳು ವರ್ಷಗಳಿಂದ ಕಾಂಟ್ಯಾಕ್ಟ್ ಲೆನ್ಸ್ ಧರಿಸುತ್ತಿದ್ದ. ಅದನ್ನು ರಾತ್ರಿ ಮಲಗುವ ಮುನ್ನ ತೆಗೆಯುವುದನ್ನು ಮರೆತರೆ ಪಿಂಕ್ ಐ ಆಗುವುದು ಹೊಸತೇನಲ್ಲ. ಆದರೆ ಈ ಬಾರಿ ಆತನ ಸ್ಥಿತಿ ಬದಲಾಗಿದೆ. ಆತನ ಬಲಗಣ್ಣಿಗೆ  ಆಕಾಂತಮೋಯಿಬಾ ಕೇರಟೈಟೀಸ್ ಎನ್ನುವ ಸೋಂಕು ಇರುವುದು ಪತ್ತೆಯಾಗಿದೆ. ಇದನ್ನೂ ಓದಿ: Sara ali Khan: ಶಿವನಿಗೆ ಕೈ ಮುಗಿದು ತಿಲಕ ಇಟ್ಟಿದ್ದಕ್ಕೆ ಸಾರಾ ಅಲಿ ಖಾನ್ ಗೆ “ನ*ರಕಕ್ಕೆ ಹೋಗ್ತೀಯಾ” ಎಂದು ಬೈಗುಳ; ಹೇಳಿದ್ಯಾರು ಗೊತ್ತೇ?

ಮೈಕ್ ಕಾಂಟ್ಯಾಕ್ಟ್ ಲೆನ್ಸ್ ಧರಿಸುವ ಬಗ್ಗೆ ಹಾಗೂ ಅದರ ನಿರ್ವಹಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಇದರ ಜೊತೆ ತನಗೆ ಬಾಧಿಸಿರುವ ಆಕಾಂತಮೋಯಿಬಾ ಕೇರಟೈಟೀಸ್ ಹೊರ ಬರುವ ಸಲುವಾಗಿ ಗೋ ಫಂಡ್ ಮಿ ಎನ್ನುವ ಪುಟವನ್ನು ಆರಂಭಿಸಿದ್ದು, ಅದರಲ್ಲಿ ತನ್ನ ಅನುಭವವನ್ನು ಬರೆದುಕೊಂಡಿದ್ದಾನೆ. ಫೆ.7ರಂದು ಮೈಕ್ ಈ ಪುಟವನ್ನು ಆರಂಭಿಸಿದ್ದಾನೆ. ಕಳೆದ ತಿಂಗಳು ತಾನು ಆಕಾಂತಮೋಯಿಬಾ ಕೇರಟೈಟೀಸ್ ಸೋಂಕಿಗೆ ಒಳಗಾಗಿರುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: Job Offer: ದಿನಕ್ಕೆ 36ಸಾವಿರ ಸಂಬಳ ಇದ್ರೂ ಇಲ್ಲಿ ಕೆಲಸಕ್ಕೆ ಸೇರೋಕ್ಕೆ ಜನ ಹಿಂದೇಟು ಹಾಕೋದ್ಯಾಕೇ? ನೀವಾದ್ರೂ ಟ್ರೈ ಮಾಡ್ತೀರಾ ನೋಡಿ!

ನಾನು ಬೆಳಿಗ್ಗೆ ಎದ್ದಾಗ ಕಣ್ಣಿಗೆ ಯಾವುದೋ ಅಲರ್ಜಿ ಅಥವಾ ಪಿಂಕ್ ಐ ಆಗಿರಬಹುದು ಎಂದು ಅಂದಾಜಿಸಿದ್ದೆ. ಇದಕ್ಕಾಗಿ ಐವರು ಬೇರೆ ಬೇರೆ ನೇತ್ರ ತಜ್ಞರು ಹಾಗೂ ಕಾರ್ನಿಯಾ ಪರಿಣಿತರನ್ನು ಭೇಟಿಯಾಗಿ ತಪಾಸಣೆ ಮಾಡಿಸಿದ್ದೆ. ಮೊದಲು ಎಚ್ಎಸ್ವಿ ೧ ಸಮಸ್ಯೆ ಎಂದು ತಪ್ಪಾಗಿ ನಿರ್ಣಯಕ್ಕೆ ಬರಲಾಗಿತ್ತು. ಕೊನೆಗೆ ಆಕಾಂತಮೋಯಿಬಾ ಕೇರಟೈಟೀಸ್ ಎನ್ನುವ ಅಪರೂಪದ ಪ್ಯಾರಾಸೈಟ್ ನನ್ನ ಕಣ್ಣಿನಲ್ಲಿರುವುದು ಪತ್ತೆಯಾಯಿತು. ಇದರಿಂದಾಗಿ ಪಿಡಿಟಿ ಎನ್ನುವ ಕಾರ್ನಿಯಾ ಸಂಬಂಧಿತ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಇದು ಬಹಳ ನೋವು ಉಂಟುಮಾಡಿದೆ. ಇದರಿಂದಾಗಿ ನನ್ನ ಬಲಗಣ್ಣು ಸಂಪೂರ್ಣ ಶಕ್ತಿಯನ್ನು ಕಳೆದುಕೊಂಡಿದೆ ಎಂದು ಮೈಕ್ ವಿವರಿಸಿದ್ದಾನೆ.

ನನಗೀಗ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಯಾಕೆ ಮನೆಯಿಂದ ಹೊರ ಹೋಗಲು ಸಹ ಆಗುತ್ತಿಲ್ಲ. ಈ ಪರಿಸ್ಥಿತಿಯಿಂದ ಹೊರಬರಲು ಸಾಕಷ್ಟು ಕಷ್ಟಪಡುತ್ತಿದ್ದೇನೆ ಎಂದು ಹೇಳಿದ್ದಾರೆ ಮೈಕ್. ಕಣ್ಣಿನ ದೃಷ್ಟಿ ಕಳೆದುಕೊಂಡಿರುವುದು ಮಾತ್ರವಲ್ಲ ಜೊತೆಗೆ ವಿಪರೀತ ನೋವನ್ನು ಸಹ ಅನುಭವಿಸುತ್ತಿದ್ದೇನೆ. ಈ ನೋವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ. ಇದು ನಿರಂತರವಾಗಿ ಇರುವ ಶಾಕ್. ಈ ನೋವನ್ನು ಸಹ ನಾನು ಸಹಿಸಿಕೊಳ್ಳುತ್ತಿದ್ದೇನೆ ಎನ್ನುವ ಹೆಮ್ಮೆ ನನಗಿದೆ ಎಂದು ಅವರು ಪುಟದಲ್ಲಿ ಬರೆದುಕೊಂಡಿದ್ದಾರೆ.

ಕಾಂಟ್ಯಾಕ್ಟ್ ಲೆನ್ಸ್ ಧರಿಸುವ ಅಭ್ಯಾಸ ಉಳ್ಳವರು ರಾತ್ರಿ ಮಲಗುವ ಮುನ್ನ ಅದನ್ನು ತೆಗೆದಿಡಲು ಮಾತ್ರ ಮರೆಯಬೇಡಿ. ಹಾಗೂ ಅದನ್ನು ಧರಿಸಿ ಯಾವತ್ತೂ ಕೂಡ ಸ್ನಾನ ಮಾಡಬೇಡಿ ಎಂದು ಮೈಕ್ ಸಲಹೆ ನೀಡಿದ್ದಾನೆ.

Comments are closed.