February Pooja Days: ಇದೇ ಫೆಬ್ರವರಿಯಲ್ಲಿ ಬರುವ ಈ ವೃತ ಆಚರಿಸಿದರೆ ಹಣದ ಹೊಳೆಯೇ ಹರಿಯುತ್ತೆ; ಯಜಮಾನನ ಅದೃಷ್ಟವೇ ಬದಲಾಗುತ್ತೆ, ಯಾವ ವೃತ ಗೊತ್ತೇ?

February Pooja Days: ದೇವರಿಗೆ ಭಕ್ರಿಯಿಂದ ಕೈಮುಗಿದು, ಪೂಜಿಸಿದರೆ ದೇವರ ಕ್ರುಪೆ ನಮ್ಮ ಮೇಲೆ ಇದ್ದೇ ಇರುತ್ತದೆ. ಇನ್ನು ಭಕ್ತಿಯಿಂದ ಮಾಡುವ ವೃತಾಚರಣೆಗಳೂ ಕೂಡ ಉತ್ತಮ ಫಲವನ್ನೇ ನೀಡುತ್ತವೆ. ವರ್ಷ ಪೂರ್ತಿ ಪ್ರತಿತಿಂಗಳೂ ಒಂದಲ್ಲಾ ಒಂದು ವಿಶೇಷವಾದ ದಿನ, ಹಬ್ಬದ ಆಚರಣೆ, ಉಪವಾಸ, ವೃತ ಮೊದಲಾದವುಗಳನ್ನು ಹಿಂದೂ ಧರ್ಮದಲ್ಲಿ ಆಚರಿಸಲಾಗುತ್ತದೆ. ಫೆಬ್ರವರಿ ತಿಂಗಳಿನಲ್ಲಿ ಬರುವ ಈ ವೃತಾಚರಣೆಗಳನ್ನು ಮಾಡಿದರೆ ಮನೆಯಲ್ಲಿ ಸದಾ ಕಾಲಕ್ಕೆ ಆರ್ಥಿಕ ಸಮೃದ್ಧಿಯಾಗುತ್ತದೆ. ಯಾವೆಲ್ಲಾ ವೃತಗಳು, ಯಾವೆಲ್ಲ ದಿನ ಬರತ್ತೆ ನೋಡೊಣ ಬನ್ನಿ.

1 ಫೆಬ್ರವರಿ 2023, ಬುಧವಾರ:- ಜಯ ಏಕಾದಶಿ ಮತ್ತು ಭೀಷ್ಮ ದ್ವಾದಶಿ ದಿನ ಇದು.  ಮಾಘ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಜಯ ಏಕಾದಶಿಯಂದು ಉಪವಾಸ ಮಾಡುವುದರಿಂದ ಯಾವುದೇ ಪಾಪಗಳಿಂದ ವಿಮೋಚನೆ ಸಿಗುತ್ತದೆ ಎನ್ನುವ ನಂಬಿಕೆ ಇದೆ.  ಇದನ್ನೂ ಓದಿ: House Construction: 30 ಲಕ್ಷದಲ್ಲಿ ನಿರ್ಮಾಣವಾಗತ್ತೆ 3BHK ಡುಪ್ಲೆಕ್ಸ್ ಹೌಸ್; ನಂಬೋಕೆ ಸಾಧ್ಯವಿಲ್ವಾ? ಈ ಲೇಖನದಲ್ಲಿದೆ ಪಕ್ಕಾ ಡಿಟೇಲ್ಸ್!

2 ಫೆಬ್ರವರಿ 2023, ಗುರುವಾರ:- ಈ ದಿನ ಗುರು ಪ್ರದೋಷ. ಗುರುವಾರ ಬಂದಿರುವ ಪ್ರದೋಷ ವ್ರತ ಮಾಡಿದರೆ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ.

5 ಫೆಬ್ರವರಿ 2023 ಭಾನುವಾರ: ಮಾಘ ಪೂರ್ಣಿಮೆ ಅಥವಾ ಹುಣ್ಣಿಮೆ. ಈ ದಿನ ಗಂಗಾನದಿಯಲ್ಲಿ ಸ್ನಾನ ಮಾಡಿ ಶುದ್ಧ ಬಟ್ಟೆ ಧರಿಸಿ ದೇವರನ್ನು ಪೂಜಿಸಿದರೆ ಎಲ್ಲಾ ರೂಗರುಜಿನಗಳೂ ದೂರವಾಗುತವೆ ಎನ್ನುವ ನಂಬಿಕೆ.

9 ಫೆಬ್ರವರಿ 2023, ಗುರುವಾರ:- ದ್ವಿಜಪ್ರಿಯ ಸಂಕಷ್ಟ ಚತುರ್ಥಿ. ಫಾಲ್ಗುಣ ಮಾಸದ ಸಂಕಷ್ಟಿ ಚತುರ್ಥಿಯಾದ ಈ ದಿನ ಗಣೇಶನಿಗೆ ವಿಶೇಷವಾಗಿ ಪೂಜೆ ಸಲ್ಲಿಸಬೇಕು. ಉಪವಾಸ ವೃತ ಮಾಡಬೇಕು. ಇದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸುತ್ತದೆ.

12 ಫೆಬ್ರವರಿ 2023 ಭಾನುವಾರ: ಈ ದಿನವೇ ಯಶೋದಾ ಜಯಂತಿ. ಶ್ರೀಕೃಷ್ಣನ ತಾಯಿ ಯಶೋದೆಯ ಜನ್ಮದಿನವಾದ ಈ ದಿನ ಕೃಷ್ಣನನ್ನು ನೆನೆದರೆ ವ್ಯಕ್ತಿಯ ಜೀವನದಲ್ಲಿ ಅದೃಷ್ಟ ಖುಲಾಯಿಸುತ್ತದೆ ಎಂದು ನಂಬಿಕೆ.

13 ಫೆಬ್ರವರಿ 2023 ಸೋಮವಾರ: ಕುಂಭ ಸಂಕ್ರಾಂತಿ, ಶಬರಿ ಜಯಂತಿ, ಕಾಲಷ್ಟಮಿ ಒಂದೇ ದಿನ ಬಂದಿದೆ. ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಫೆಬ್ರವರಿಯಲ್ಲಿ ಸೂರ್ಯನು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಹಾಗಾಗಿ ಇವತ್ತು  ಶಿವನನ್ನು ಕಾಲಭೈರವನ ಉಗ್ರ ರೂಪದಲ್ಲಿ ಪೂಜಿಸಬೇಕು.  ಶತ್ರುಗಳನ್ನು ಗೆಲ್ಲಲು ಇದು ಸರಿಯಾದ ದಿನ.

17 ಫೆಬ್ರವರಿ 2023 ಶುಕ್ರವಾರ: ಈ ದಿನದಂದು ಪುಣ್ಯ ವೃತವಾದ ವಿಜಯ ಏಕಾದಶಿ. ಉಪವಾಸ ಮಾಡಿದರೆ ಒಳ್ಳೆಯದು.

18 ಫೆಬ್ರವರಿ 2023 ಶನಿವಾರ: ಈ ದಿನವು ಬಹಳ ವಿಶೇಷವಾದ ದಿನವಾಗಿದೆ. ಮಹಾಶಿವರಾತ್ರಿ, ಈ ದಿನ ತಾಯಿ ಪಾರ್ವತಿ ಮತ್ತು ಭಗವಾನ್ ಶಿವನ ವಿವಾಹ ಹಾಗೂ ಈ ದಿನ 12 ಜ್ಯೋತಿರ್ಲಿಂಗಗಳು ಕಾಣಿಸಿಕೊಂಡಿವೆ ಎಂಬ ನಂಬಿಕೆ ಇದೆ.

20 ಫೆಬ್ರವರಿ 2023 ಸೋಮವಾರ:- ಈ ದಿನ ಸೋಮಾವತಿ ಅಮಾವಾಸ್ಯೆಯಿರಲಿದೆ. ಸೋಮಾವತಿ ಮತ್ತು ಶನಿ ಅಮಾವಾಸ್ಯೆಯನ್ನು ಬಹಳ ಪ್ರಮುಖವಾದದ್ದು.

21 ಫೆಬ್ರವರಿ ಮಂಗಳವಾರ- ಈ ದಿನವನ್ನು ರಾಮಕೃಷ್ಣ ಪರಮಹಂಸರ ಜಯಂತಿ.

23 ಫೆಬ್ರವರಿ 2023 ಗುರುವಾರ: ಈ ದಿನದಂದು ವಿನಾಯಕ ಚತುರ್ಥಿಯ ಉಪವಾಸ ಮಾಡುವುದು ಉತ್ತಮ ಫಲ ನೀಡುತ್ತದೆ.

25 ಫೆಬ್ರವರಿ ಶನಿವಾರ: ಈ ದಿನದಂದು ಸ್ಕಂದ ಷಷ್ಠಿಯಿದೆ. ಹಲವರು ಆಚರಣೆ ಮಾಡುತ್ತಾರೆ.

27 ಫೆಬ್ರವರಿ 2023 ಸೋಮವಾರ: ಮಾಸಿಕ ದುರ್ಗಾಷ್ಟಮಿ, ರೋಹಿಣಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ದೇವರ ಧ್ಯಾನ ಮಾಡಲು ಸೂಕ್ತ ದಿನ.

Comments are closed.