Fixed Deposit: ಗ್ರಾಹಕರಿಗೆ ಡಬಲ್ ಗುಡ್ ನ್ಯೂಸ್ ನೀಡಿದೆ ಈ ಬ್ಯಾಂಕ್; ಇನ್ಮೇಲ್ ಎಲ್ಲಾ ಡಿಪೋಸಿಟ್ಗೂ ಬಡ್ದಿ ಜಾಸ್ತಿ!

Fixed Deposit: ದೀರ್ಘಕಾಲಿಕ ಹೂಡಿಕೆಯ ವಿಚಾರಕ್ಕೆ ಬಂದರೆ ಪ್ರತಿಯೊಬ್ಬ ಬ್ಯಾಂಕ್ ಗ್ರಾಹಕರ ಮೊದಲ ಆಯ್ಕೆಯಾಗಿ ಕಾಣಿಸಿಕೊಳ್ಳುವುದು ಫಿಕ್ಸೆಡ್ ಡೆಪಾಸಿಟ್ ಎಂದು ಹೇಳಬಹುದಾಗಿದೆ. ಇನ್ನು ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ತಿಳಿಸುವುದಕ್ಕೆ ಹೊರಟಿರೋದು ಡಿಸಿಬಿ ಬ್ಯಾಂಕ್ ತನ್ನ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಬಡ್ಡಿದರದ ಮೇಲೆ ಕೆಲವೊಂದು ಪರಿಷ್ಕರಣೆಗಳನ್ನು ಜಾರಿಗೆ ತಂದಿದೆ ಎಂಬುದಾಗಿ ತಿಳಿದುಬಂದಿದೆ. ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳೋಣ.

ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರದಲ್ಲಿ ಡಿಸಿಬಿ ಬ್ಯಾಂಕ್ನಿಂದ ಜಾರಿಗೆ ಬಂದಿದೆ ನೋಡಿ ಹೊಸ ಪರಿಷ್ಕರಣೆ.

  • ಅಲ್ಪ ಅವಧಿಯ ಫಿಕ್ಸಿಡ್ ಡೆಪಾಸಿಟ್ ನಲ್ಲಿ ಡಿಸಿಬಿ ಬ್ಯಾಂಕ್ ಅಂದ್ರೆ ಏಳರಿಂದ 49 ದಿನಗಳ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮೇಲೆ 3.75 ಪ್ರತಿಶತ, 46 ರಿಂದ 90 ದಿನಗಳ ಹೂಡಿಕೆಯ ಮೇಲೆ ನಾಲ್ಕು ಪ್ರತಿಶತ ಬಡ್ಡಿದರ, 91 ದಿನಗಳಿಂದ ಆರು ತಿಂಗಳುಗಳ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮೇಲೆ 4.75 ಪ್ರತಿಶತ ಬಡ್ಡಿ ದರವನ್ನು ವಿಧಿಸಲಾಗುತ್ತದೆ. ಇವಿಷ್ಟು ಅಲ್ಪ ಅವಧಿಯ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮೇಲೆ ಸಿಗುವಂತಹ ಹಣ ಆಗಿದೆ.
  • ಆರರಿಂದ ಹತ್ತು ತಿಂಗಳ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮೇಲೆ 6.20%, ಹತ್ತರಿಂದ ಹನ್ನೆರಡು ತಿಂಗಳು ಅವರಿಗೆ 7.25 ಪ್ರತಿಶತ, 12 ತಿಂಗಳಿಗೆ 7.10%, 12 ತಿಂಗಳು ಹತ್ತು ದಿನಗಳಿಗೆ 7.75 ಪ್ರತಿಶತ ಹಾಗೂ 170 ದಿನಗಳ ವರೆಗಿನ ಹೂಡಿಕೆಯ ಮೇಲೆ 7.15 ಪ್ರತಿಶತ ಬಡ್ಡಿಯನ್ನು ನೀಡಲಾಗುತ್ತದೆ.
  • 26 ತಿಂಗಳ ಹೂಡಿಕೆ ಮೇಲೆ 7.50%, 26ರಿಂದ 38 ತಿಂಗಳುಗಳ ಹೂಡಿಕೆ ಮೇಲೆ 7.75%, 38 ರಿಂದ 61 ತಿಂಗಳುಗಳ ಹೂಡಿಕೆಯ ಮೇಲೆ 7.65% ಬಡ್ಡಿಯನ್ನು ಪಡೆದುಕೊಳ್ಳಬಹುದಾಗಿದೆ.

ಸಾಮಾನ್ಯವಾಗಿ ಹಿರಿಯ ನಾಗರಿಕರಿಗೆ ಈ ಬಡ್ಡಿ ದರಗಳಲ್ಲಿ 0.50% ನೀಡಲಾಗುತ್ತದೆ. ಪ್ರತಿದಿನ ಬಡ್ಡಿಯನ್ನು ಲೆಕ್ಕಾಚಾರ ಹಾಕಲಾಗುತ್ತದೆ ಹಾಗೂ ಮೂರು ತಿಂಗಳಿಗೆ ಒಮ್ಮೆ ಆ ಬಡ್ಡಿಯನ್ನು ನಿಮ್ಮ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ. ನೀವು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಡಿಸಿಬಿ ಬ್ಯಾಂಕಿನ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾಗಿರುವಂತಹ ಅಧಿಕೃತ ಘೋಷಣೆಯ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಒಂದು ವೇಳೆ ನೀವು ಓವರ್ ಡ್ರಾಫ್ಟ್ ಸೇವೆಯನ್ನು ಬ್ಯಾಂಕಿನಲ್ಲಿ ಬಳಸಿಕೊಂಡರೆ ಆ ಬ್ಯಾಲೆನ್ಸ್ ಮೇಲೆ ನೀವು ಎರಡು ಪ್ರತಿಶತ ಬಡ್ಡಿಯನ್ನು ಪಡೆದುಕೊಳ್ಳಬಹುದು. ನೀವು ಸೇವಿಂಗ್ ಖಾತೆಯಲ್ಲಿ ಉಳಿಸಿಕೊಂಡಿರುವಂತಹ ಹಣದ ಮೇಲೆ ಕೂಡ ಹೆಚ್ಚಿನ ಬಡ್ಡಿಯನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ಬ್ಯಾಂಕಿನಲ್ಲಿ ಕಲ್ಪಿಸಲಾಗಿದೆ. ಸೇವಿಂಗ್ ಖಾತೆಯಲ್ಲಿ 200 ಕೋಟಿ ಗಿಂತ ಹೆಚ್ಚಿನ ಬ್ಯಾಲೆನ್ಸ್ ಉಳಿತಾಯ ಮಾಡಿಕೊಂಡಿದ್ದರೆ ನೀವು ವಾರ್ಷಿಕ 5.50% ಬಡ್ಡಿಯನ್ನು ಪಡೆದುಕೊಳ್ಳಬಹುದಾಗಿದೆ.

Comments are closed.