Gold Rate:ಆಭರಣವನ್ನು ಇಷ್ಟ ಪಡುವವರಿಗೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ- ಏನು ಮಾಡಿದೆ ಗೊತ್ತೇ?

Gold Rate: ನಿಮಗೆಲ್ಲರಿಗೂ ತಿಳಿದಿರಬಹುದು ಸರ್ಕಾರ ಸಾವರಿನ್ ಗೋಲ್ಡ್ ಬಾಂಡ್ ಮೂಲಕ ಕಡಿಮೆ ಬೆಲೆಗೆ ಚಿನ್ನವನ್ನು ಖರೀದಿ ಮಾಡುವಂತಹ ಸ್ಕೀಮ್ ಅನ್ನು ಜಾರಿಗೆ ತಂದಿತ್ತು. ಆದರೆ ಈಗ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಈ ಬಾಂಡ್ ಮೂಲಕ ಜನರಿಗೆ ಕಡಿಮೆ ಬೆಲೆ ಚಿನ್ನವನ್ನು ಮಾರಾಟ ಮಾಡುವಂತ ಸ್ಕೀಮ್ ಅನ್ನು ಸರ್ಕಾರ ನಿಲ್ಲಿಸಿದೆ ಎಂಬುದಾಗಿ ತಿಳಿದುಬಂದಿದೆ. 72,274 ಕೋಟಿ ಮೌಲ್ಯದ ಚಿನ್ನದ ಬಾಂಡ್ ಗಳನ್ನು ಸರ್ಕಾರ ಈ ಯೋಜನೆ ಅಡಿಯಲ್ಲಿ ಮಾರಾಟ ಮಾಡಿತ್ತು. ಇವುಗಳಲ್ಲಿ ನಾಲ್ಕು ಬಾಂಡ್ ಗಳು ಸಂಪೂರ್ಣವಾಗಿ ಮೆಚ್ಯೂರ್ ಆಗಿದ್ದು ಜನರು ಆ ಹಣವನ್ನು ಈಗಾಗಲೇ ವಾಪಸ್ ಪಡೆದಿದ್ದಾರೆ ಎನ್ನುವ ಮಾಹಿತಿ ಕೂಡ ಇದೆ. ಆದರೆ ಸರ್ಕಾರ ಅಧಿಕೃತವಾಗಿ ಈ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ.

ಈ ಯೋಜನೆಯನ್ನು ಮೊದಲಿಗೆ ಸರ್ಕಾರ 2015 ರಲ್ಲಿ ಪೇಪರ್ ಗೋಲ್ಡ್ ಎನ್ನುವ ರೂಪದಲ್ಲಿ ಪ್ರಾರಂಭ ಮಾಡಿದ್ದು. ಜನರು ಠೇವಣಿ ಇಟ್ಟಿರುವಂತಹ ಹಣವನ್ನು ಲಾಭ ರೂಪದಲ್ಲಿ ಅವರಿಗೆ ಸರ್ಕಾರ ಈ ಯೋಜನೆ ಅಡಿಯಲ್ಲಿ ವಾಪಸ್ ನೀಡಬೇಕು. 2015 ರಲ್ಲಿ ಪ್ರಾರಂಭವಾದಾಗ ಪ್ರತಿ ಗ್ರಾಮ್ ಗೆ ಈ ಯೋಜನೆ ಅಡಿಯಲ್ಲಿ ಚಿನ್ನದ ಬೆಲೆ 2684 ರೂಪಾಯಿ ಆಗಿತ್ತು. 2023ರಲ್ಲಿ 6132 ರೂಪಾಯಿಗೆ ಇದು ಏರಿಕೆಯಾಗಿತ್ತು. ಇಲ್ಲಿ ಹೂಡಿಕೆ ಮಾಡಿದವರು 228 ಪ್ರತಿಶತ ಲಾಭವನ್ನು ಗಳಿಸಿದ್ದಾರೆ ಎಂದು ಹೇಳಬಹುದಾಗಿದೆ. ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಹೂಡಿಕೆದಾರರಿಗೆ 85,000 ಕೋಟಿ ರೂಪಾಯಿ ಬಾಕಿ ಹಣವನ್ನು ಈ ಯೋಜನೆ ಅಡಿಯಲ್ಲಿ ನೀಡಬೇಕಾಗಿರುವಂತಹ ಅಗತ್ಯ ಇದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಹಾಗೂ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಡಿಮ್ಯಾಟ್ ಖಾತೆಗಳನ್ನು ಹೊಂದಿರುವವರು ಇದನ್ನ ಮಾರಾಟ ಹಾಗೂ ಖರೀದಿ ಮಾಡಬಹುದಾಗಿದೆ. ಬಾಂಡ್ ಮಾರಾಟದ ಮೇಲೆ ಲಾಭವನ್ನು ಗಳಿಸಿದರೆ ನೀವು ಅದರ ಮೇಲೆ ಕೂಡ ತೆರಿಗೆಯನ್ನು ಪಾವತಿ ಮಾಡಬೇಕಾಗಿರುತ್ತದೆ.

ಸಾಕಷ್ಟು ಜನರಿಗೆ ಸಾವರಿನ್ ಗೋಲ್ಡ್ ಬಾಂಡ್ ಎಂದರೆ ಏನು ಅನ್ನೋದು ತಿಳಿದಿರುವುದಿಲ್ಲ. 2015 ನೇ ಇಸವಿಯಲ್ಲಿ ಸರ್ಕಾರದ ಪ್ರತಿರೂಪವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚಿನ್ನದ ಆಮದನ್ನು ತಡೆಯುವುದಕ್ಕಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದು. ಇದು ಚಿನ್ನದ ತೂಕದ ಪ್ರತಿರೂಪವಾಗಿ ಸಿಗುವಂತಹ ಬಾಂಡ್ ಗಳಾಗಿವೆ. ಚಿನ್ನದ ಮಾರುಕಟ್ಟೆ ಬೆಲೆ ಗಿಂತಲೂ ಕಡಿಮೆ ಬೆಲೆಯಲ್ಲಿ ಸಿಗುವಂತಹ ಈ ಬಾಂಡ್ ಅನ್ನು ನೀವು 8 ವರ್ಷಗಳ ಕಾಲ ಇಟ್ಕೊಳ್ಳ ಬೇಕಾಗಿರುತ್ತದೆ ಆದರೆ ಅಗತ್ಯವಿದ್ದಾಗ ಐದು ವರ್ಷಗಳಲ್ಲಿ ಕೂಡ ಮಾರಾಟ ಮಾಡಬಹುದಾಗಿದೆ. ಈ ಬಾಂಡ್ ಮೂಲಕ ಕನಿಷ್ಠ ಒಂದು ಗ್ರಾಂ ಹಾಗೂ ಗರಿಷ್ಠ ನಾಲ್ಕು ಕೆಜಿ ವರೆಗೂ ಕೂಡ ಚಿನ್ನದ ಮೌಲ್ಯದ ಬಾಂಡ್ ಗಳನ್ನು ಒಬ್ಬ ವ್ಯಕ್ತಿ ಖರೀದಿ ಮಾಡಬಹುದಾಗಿದೆ. ಇದು ಒಬ್ಬ ವೈಯಕ್ತಿಕ ವ್ಯಕ್ತಿಯ ಲೆಕ್ಕಾಚಾರ ಆದರೆ ಒಂದು ಸಂಸ್ಥೆ ಅಥವಾ ಟ್ರಸ್ಟ್ ವರ್ಷಕ್ಕೆ 20 ಕೆಜಿ ಚಿನ್ನವನ್ನು ಬಾಂಡ್ ರೂಪದಲ್ಲಿ ಖರೀದಿ ಮಾಡಬಹುದಾಗಿದೆ.

Comments are closed.