Kannadathi Serial: ಗುಡ್ ನ್ಯೂಸ್ ಹಾಗೂ ಬ್ಯಾಡ್ ನ್ಯೂಸ್ ಎರಡನ್ನು ಒಟ್ಟೊಟ್ಟಿಗೆ ಕೊಡುತ್ತಿರುವ ‘ಕನ್ನಡತಿ’ ಏನು ಗೊತ್ತೇ?

Kannadathi Serial: ರತ್ನಮ್ಮಳಂತೆ ಮಾಡದೇ ಎಲ್ಲವನ್ನು ಅಳೆದು ತೂಗಿ ಕೆಲಸ ಮಾಡುವ ಭುವಿ (Bhuvi), ಎಷ್ಟೇ ಹಠ ಕೋಪ ಇದ್ರೂ ಸಂಬಂಧಗಳಿಗೆ ಬೆಲೆ ಕೊಡುವ ಹರ್ಷ (harsha), ತಲೆ ಮೇಲೆ ತಲೆ ಬಿದ್ರು ಅಧಿಕಾರವಿಲ್ಲದೆ ಇರೋಕೆ ಆಗಲ್ಲ ಅನ್ನುವ ಸಾನಿಯಾ (Saniya), ಹೀರೋ ಹುಚ್ಚಿಂದ ಆಚೆ ಬಾರದ ವರೂಧಿನಿ (Varoodhini), ಮೋಡಿ ಮಾಡಿದ್ದ ಈ ಎಲ್ಲಾ ನಟರನ್ನು  ಇನ್ನು ಕೆಲವೇ ದಿನ ಮಾತ್ರ ನೋಡಬಹುದು ನೀವು..

ಕಲರ್ಸ್ ಕನ್ನಡ ವಾಹಿನಿ (Colours Kannada Channel) ಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ (Serial) ಗಳ ಪೈಕಿ ಸೋಮವಾರದಿಂದ ಶುಕ್ರವಾರದವರಿಗೆ ಸಂಜೆ 7:30ಕ್ಕೆ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿಗೆ ಸಾಕಷ್ಟು ಫ್ಯಾನ್ಸ್ (Fans) ಇದ್ದಾರೆ. ಮೊದಲು ಟಿ ಎನ್ ಸೀತಾರಾಮ್ (T.N.Seetaram) ಅವರ ಧಾರಾವಾಹಿಯನ್ನು ಜನ ಎಷ್ಟು ಇಷ್ಟಪಟ್ಟು ನೋಡುತ್ತಿದ್ದರೋ ಅಷ್ಟೇ ಕನ್ನಡತಿ ಧಾರಾವಾಹಿಯನ್ನು ಕೂಡ ವೀಕ್ಷಿಸುತ್ತಿದ್ದಾರೆ (Wtching). ಇವರಿಗೆ ಕನ್ನಡತಿ ಧಾರಾವಾಹಿ ಸಾಕಷ್ಟು ಟ್ವಿಸ್ಟ್ ಗಳನ್ನು ಹಾಗೂ ಕುತೂಹಲಗಳನ್ನು ಉಳಿಸಿಕೊಂಡು ಬಂದಿತ್ತು. ಆರಂಭದಿಂದ ಇಲ್ಲಿಯವರೆಗೂ ಎಲ್ಲಿಯೂ ಬೇಸರ ತರಿಸದೇ ಪ್ರಸಾರವಾಗಿದ್ದ ಧಾರಾವಾಹಿ ಇನ್ನು ಮುಂದೆ ವೀಕ್ಷಕರಿಗೆ ನೋಡಲು ಲಭ್ಯವಿಲ್ಲ. ಇದನ್ನೂ ಓದಿ: Relationship: ರಜಾ ಇದೆ ಎಂದು ಭಾನುವಾರದಂದು ಪತಿ-ಪತ್ನಿ ಒಂದಾಗಲು ಪ್ರಯತ್ನಿಸಿದರೆ ಆಗುವ ಅಪಾಯ ತಪ್ಪಿಸುವುದಕ್ಕೆ ದೇವರು ಬರಲ್ಲ ಯಾಕೆ ಗೊತ್ತೇ?

ಬಹಳ ವಿಭಿನ್ನವಾದ ಕಥೆ (Story) ಉಳ್ಳ ಕನ್ನಡತಿಯನ್ನು ಕನ್ನಡಿಗರು ಮೆಚ್ಚಿಕೊಂಡಿದ್ದರು. ಕನ್ನಡತಿಯ ಕಥೆ ಎಷ್ಟು ಸುಂದರವಾಗಿದೆಯೋ ಅದೇ ರೀತಿ ಆ ಧಾರಾವಾಹಿಯಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಕೂಡ ಬಹಳ ಅದ್ಭುತವಾಗಿವೆ. ಇನ್ನು ಕಲಾವಿದರು ಕೂಡ ತಮ್ಮ ತಮ್ಮ ಪಾತ್ರಗಳನ್ನ ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಇಂತಿಪ್ಪ ಕನ್ನಡತಿ ಧಾರಾವಾಹಿಯ ಕೊನೆಯ ಅಧ್ಯಾಯ ಸೋಮವಾರದಿಂದ ಪ್ರಸಾರವಾಗುತ್ತಿದೆ.

ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅತ್ಯುತ್ತಮ ಕ್ಯಾರೆಕ್ಟರ್ ಅಮ್ಮಮ್ಮ. ಆ ಪಾತ್ರ ಮುಗಿಯುತ್ತಿದೆ ಎನ್ನುವಾಗಲೇ ಅಭಿಮಾನಿಗಳಲ್ಲಿ ಸಾಕಷ್ಟು ಬೇಸರ ಮೂಡಿತ್ತು. ಇದೀಗ ಕನ್ನಡತಿ ಧಾರವಾಹಿಯೇ ಕೊನೆಗೊಳ್ಳುತ್ತಿದೆ. ಹಾಗಾಗಿ ಅಭಿಮಾನಿಗಳಲ್ಲಿ ಈ ವಿಷಯ ಇನ್ನಷ್ಟು ಬೇಸರ ತಂದಿದೆ ಕನ್ನಡತಿ ಧಾರಾವಾಹಿ ಚೆನ್ನಾಗಿ ಮೂಡಿ ಬರುತ್ತಿತ್ತು ಅದನ್ನು ಸ್ಟಾಪ್ ಮಾಡಬೇಡಿ ಎಂದು ಜನ ಪರಿ ಪರಿಯಾಗಿ ಕೇಳಿಕೊಳ್ಳುತ್ತಾರೆ.  ಇದನ್ನೂ ಓದಿ: Politics: ಕೊನೆಗೂ ದೇಶದ ಈ ಪರಿಸ್ಥಿತಿಗೆ ಅಲ್ಲಾಹ್ ನೇ ಕಾರಣ ಅಂದು ಬಿಟ್ರಲ್ಲ ಸಚಿವರು? ಈಗ ಎಲ್ಲಿದೆ ಮಿತ್ರ ರಾಷ್ಟ್ರಗಳ ಪಡೆ?!

ಈ ಹಿಂದೆ ರಂಜನಿ ರಾಘವನ್ ಕಾರ್ಯಕ್ರಮ ಒಂದರಲ್ಲಿ ಮಾತನಾಡುವಾಗ ಯಾವುದೇ ಸಿಹಿಯ ಸ್ವಾದ ಬಾಯಲ್ಲಿ ಇರುವಾಗಲೇ ಅದನ್ನು ತಿನ್ನುವುದನ್ನು ನಿಲ್ಲಿಸಬೇಕು ಆಗಲೇ ಅದರ ರುಚಿ ಬಾಯಲ್ಲಿ ಉಳಿಯುತ್ತೆ. ಎನ್ನುವಂತಹ ಮಾತನಾಡಿ ಧಾರವಾಹಿ ಮುಗಿಯುತ್ತಿರುವ ಬಗ್ಗೆ ಹಿಂಟ್ ನೀಡಿದ್ದರು.

ಕನ್ನಡತಿ ಧಾರವಾಹಿ ಮುಗಿಯುತ್ತದೆ ಎನ್ನುವ ಬೇಸರ ಇದ್ದರೂ ಎಲ್ಲವೂ ಸುಖಾಂತ್ಯ ವಾಗುತ್ತಿದೆ. ಎನ್ನುವ ಕಾರಣಕ್ಕೆ ವೀಕ್ಷಕರಲ್ಲಿ ಸ್ವಲ್ಪ ಸಮಾಧಾನವಿದೆ. ಅಮ್ಮಮ್ಮನ ಜವಾಬ್ದಾರಿಯನ್ನು ಸೌಪರ್ಣಿಕಾ ಅಲಿಯಾಸ್ ಭುವಿ ಅಚ್ಚುಕಟ್ಟಾಗಿ ನಿಭಾಯಿಸಿದ್ದಾಳೆ. ಶತ್ರುಗಳನ್ನು ನಾವು ನಮ್ಮ ಬುದ್ಧಿವಂತಿಕೆ ಹಾಗೂ ವಿನಯದಿಂದ ಗೆಲ್ಲಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ಆದರೂ ಈ ಧಾರವಾಹಿ ಮುಗಿಯುತ್ತಿದೆ ಎನ್ನುವುದು ಮಾತ್ರ ನಿಜಕ್ಕೂ ಬೇಸರದ ಸಂಗತಿ.

Comments are closed.