Kannada Serial:ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಜನರ ಮನಗೆಲ್ಲುತ್ತಿರುವ ಲಕ್ಷ್ಮಿ ನಿಜಕ್ಕೂ ಯಾರು ಗೊತ್ತೆ?? ಡಾನ್ಸ್ ಬಿಟ್ಟು ನಟನೆಗೆ ಬಂದಿದ್ದು ಯಾಕೆ ಗೊತ್ತೆ?

Kannada Serial: ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಜನರ ಮನಗೆಲ್ಲುತ್ತಿರುವ ಲಕ್ಷ್ಮಿ ನಿಜಕ್ಕೂ ಯಾರು ಗೊತ್ತಾ? ಡಾನ್ಸ್ ಬಿಟ್ಟು ನಟನೆಗೆ ಬಂದಿದ್ದಕ್ಕೂ ಇದೆ ಕಾರಣ.
ಇದೀಗ ಎಲ್ಲ ವಾಹಿನಿಗಳಲ್ಲೂ ಹೊಸ ಹೊಸ ಕಥೆಗಳು ಪ್ರಸಾರವಾಗುತ್ತಿವೆ. ಅದರಲ್ಲಿ ಕೆಲವೊಂದು ಕಥೆಗಳು ಮಾತ್ರ ವೀಕ್ಷಕರ ಮನಸ್ಸಿಗೆ ಮುಟ್ಟುತ್ತದೆ. ಆ ಸಿರಿಯಲ್ (Serial)ಗಳನ್ನು ವೀಕ್ಷಕರು ಹೆಚ್ಚಾಗಿ ನೋಡುತ್ತಾರೆ. ಹೀಗೆ ಕಡಿಮೆ ಅವಧಿಯಲ್ಲೇ ವೀಕ್ಷಕರ ಮನಗೆದ್ದಿರುವ ಸಿರಿಯಲ್ ಗಳಲ್ಲಿ ಭಾಗ್ಯ ಲಕ್ಷ್ಮಿ (Bhagya laxmi)ಯೂ ಒಂದು.
ಭಾಗ್ಯ ಲಕ್ಷ್ಮಿ ಧಾರಾವಾಹಿಯು ಕಲರ್ಸ್ ಕನ್ನಡ ವಾಹಿನಿ (Colours Kannada channel) ಯಲ್ಲಿ ಸಂಜೆ ೭ ಗಂಟೆಗೆ ಪ್ರಸಾರವಾಗುತ್ತದೆ. ಇದರಲ್ಲಿ ದೊಡ್ಡ ತಾರಾಬಳಗವೇ ಇದೆ. ಬಹುತೇಕ ದೊಡ್ಡ ದೊಡ್ಡ ಕಲಾವಿದ (Actress)ರೇ ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯ ನಾಯಕನಾಗಿ ಶಮಂತ ಗೌಡ (Shamanth Gowda) ಕಾಣಿಸಿಕೊಂಡಿದ್ದಾರೆ. ಇವರ ತಾಯಿಯ ಪಾತ್ರದಲ್ಲಿ ಸುಶ್ಮಾ ನಾಣಯ್ಯ (Sushma Nanayya) ಅವರು ಬಣ್ಣ ಹಚ್ಚಿದ್ದಾರೆ. ಇದರ ಜೊತೆ ಪದ್ಮಜಾ ರಾವ್ (Padmaja Rao), ಸುದರ್ಶನ್ ರಂಗಪ್ರಸಾದ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಇದನ್ನೂ ಓದಿ: IPL 2023: ಆರ್ ಸಿ ಬಿ ತಂಡಕ್ಕೆ ಕಾಡುತ್ತಿರುವ ಪ್ರಮುಖ ಸಮಸ್ಯೆ ಇದೇ; ಪರಿಹಾರ ಇದೆ. ಇದರಲ್ಲಿ ಯಾವುದು ಬೆಸ್ಟ್; ನಿಮ್ಮ ಆಯ್ಕೆ ಯಾವುದು?

ಈ ಧಾರಾವಾಹಿಯು ಅಕ್ಕ-ತಂಗಿಯ ಕಥೆಯಾಗಿದೆ. ತಂಗಿಗೆ ಶ್ರೀಮಂತ ಅಲ್ಲ ಶ್ರೀರಾಮನಂತಹ ಹುಡುಗನ ಜೊತೆ ಮದುವೆ ಮಾಡಿಸಬೇಕು ಎನ್ನುವುದು ಅಕ್ಕನ ಬಯಕೆಯಾಗಿದೆ. ಅಕ್ಕನ ಪಾತ್ರದಲ್ಲಿ ನಿರೂಪಕಿ, ನಟಿ ಸುಷ್ಮಾ ರಾವ್ ಅವರು ಜೀವ ತುಂಬಿದ್ದಾರೆ. ಸುಷ್ಮಾ ಅವರು ಭಾಗ್ಯ ಎನ್ನುವ ಪಾತ್ರ ಮಾಡುತ್ತಿದ್ದಾರೆ. ಇನ್ನು ಅವರ ತಂಗಿ ಲಕ್ಷ್ಮಿಯ ಪಾತ್ರ ಮಾಡುತ್ತಿರುವ ಕಲಾವಿದೆಯೇ ಭೂಮಿಕಾ ರಮೇಶ್ (Bhumika Ramesh).

ಭೂಮಿಕಾ ರಮೇಶ್ ಅವರು ಮೊದಲ ಬಾರಿಗೆ ಕಿರುತೆರೆಗೆ ಕಾಲಿಟ್ಟಿದ್ದಾರೆ. ಆದರೂ ಅವರು ಮೊದಲ ಬಾರಿ ಅಭಿನಯಿಸಿದಂತೆ ಕಾಣುತ್ತಿಲ್ಲ. ಬಹಳ ಸರಳವಾಗಿ, ಸಹಜವಾಗಿ ಅಭಿನಯಿಸುತ್ತಿದ್ದಾರೆ. ತಮ್ಮ ಮುಗ್ದ ಅಭಿನಯದಿಂದಲೇ ವೀಕ್ಷಕರ ಮನ ಗೆದ್ದಿದ್ದಾರೆ. ಕರ್ನಾಟಕದ ಮನೆ ಮಗಳಾಗಿದ್ದಾರೆ. ಎಷ್ಟೋ ಜನ ಪಾಲಕರು ಇದ್ದರೆ ಲಕ್ಷ್ಮಿಯಂತಹ ಮಗಳು ಇರಬೇಕು ಅಂದುಕೊಂಡಿದ್ದು ಉಂಟು. ಇದನ್ನೂ ಓದಿ: Cocktail Film: ಕಾಕ್ಟೈಲ್ ಸಿನಿಮಾ ಕಾನ್ಸೆಪ್ಟ್ ಗೆ ಫಿದಾ ಆದ ಸಿನಿ ಪ್ರಿಯರು; ಟ್ರೈಲರ್ ಹೇಗಿದೆ ಗೊತ್ತಾ?

Kannada bhagya lakshmi serial lakshmi real name and story 1 | Live Kannada News
Kannada Serial:ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಜನರ ಮನಗೆಲ್ಲುತ್ತಿರುವ ಲಕ್ಷ್ಮಿ ನಿಜಕ್ಕೂ ಯಾರು ಗೊತ್ತೆ?? ಡಾನ್ಸ್ ಬಿಟ್ಟು ನಟನೆಗೆ ಬಂದಿದ್ದು ಯಾಕೆ ಗೊತ್ತೆ? https://sihikahinews.com/kannada-bhagya-lakshmi-serial-lakshmi-real-name-and-story/

ಭೂಮಿಕ ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಡಾನ್ಸಿಂಗ್ ಸ್ಟಾರ್ ಜ್ಯೂನಿಯರ್ನಲ್ಲಿ ಭಾಗವಹಿಸಿದ್ದರು. ಆದರೆ ಕಾರಣಾಂತರಗಳಿಂದ ಅವರು ಮಧ್ಯದಲ್ಲಿಯೇ ಅದನ್ನು ಬಿಟ್ಟಿದ್ದರು. ಭೂಮಿಕಾ ಅವರು ಸದ್ಯ ಮೊದಲ ವರ್ಷದ ಬಿಸಿಎ ಅಧ್ಯಯನ ಮಾಡುತ್ತಿದ್ದಾರೆ. ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಸಿಕ್ಕಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ. ನಟನೆ, ಅಧ್ಯಯನ ಎರಡನ್ನು ತೂಗಿಸಿಕೊಂಡು ಹೋಗುತ್ತಿದ್ದಾರೆ.
ಭೂಮಿಕಾ ಅವರು ಕ್ಲಾಸಿಕಲ್ ಡಾನ್ಸರ್. ಅವರು ಹಲವು ವರ್ಷಗಳಿಂದ ಭರತನಾಟ್ಯವನ್ನು ಕಲಿಯುತ್ತಿದ್ದಾರೆ. ಹಲವು ಕಡೆ ಪ್ರದರ್ಶನ ನೀಡಿದ್ದಾರೆ. ಡಾನ್ಸನಲ್ಲಿಯೇ ಏನನ್ನಾದರೂ ಸಾಧಿಸುವ ಆಸೆ ಭೂಮಿಕಾ ಅವರಿಗೆ.

ಭೂಮಿಕಾ ಅವರ ಪಾಲಕರಿಗೆ ತಮ್ಮ ಮಗಳು ಒಳ್ಳೆಯ ನಟಿ ಆಗಬೇಕು ಎಂದುಕೊಂಡಿದ್ದರು. ಹಾಗಾಗಿ ಪಾಲಕರ ಆಸೆ ಈಡೇರಿಸುವ ಸಲುವಾಗಿ ಅವರು ನಟನಾ ಕ್ಷೇತ್ರಕ್ಕೆ ಬಂದಿದ್ದಾರೆ. ಈ ಧಾರಾವಾಹಿಗೆ ಆಯ್ಕೆಯಾದ ಬಳಿಕ ಹಲವು ತಿಂಗಳ ಕಾಲ ಅಭಿನಯದಲ್ಲಿ ತರಬೇತಿ ಪಡೆದಿದ್ದಾರೆ.

Comments are closed.