2023 Calendar: ಹೊಸ ವರ್ಷದ ಕ್ಯಾಲೆಂಡರ್ ಅನ್ನು ಮನೆಯ ಈ ದಿಕ್ಕಿನಲ್ಲಿಡಿ; ಝಣ ಝಣ ಕಾಂಚಾಣ ಮನೆ ತುಂಬುತ್ತದೆ!

2023 Calendar: ಇನ್ನೂ ಕೆಲವೇ ದಿನಗಳಲ್ಲಿ 2023 ಅಂದರೆ ಹೊಸ ವರ್ಷ ಆರಂಭವಾಗಲಿದೆ. ವರ್ಷದ ಕೊನೆಯಲ್ಲಿ ಮುಂದಿನ ವರ್ಷ ಏನು ಮಾಡಬೇಕು ಎಂದು ಎಲ್ಲರೂ ಲೆಕ್ಕಾಚಾರ ಹಾಕುತ್ತಾರೆ. ಅದೇ ರೀತಿ ಹೊಸ ವರ್ಷದ ಕ್ಯಾಲೆಂಡರ್ ಬಗ್ಗೆಯೂ ಕೂಡ ಜನರಿಗೆ ಆಸಕ್ತಿ ಹೆಚ್ಚಿರುತ್ತದೆ. ಆದರೆ ಹೊಸ ಕ್ಯಾಲೆಂಡರ್ ಹಾಕುವುದಕ್ಕೂ ಮೊದಲು ಕೆಲವು ವಾಸ್ತು ನಿಯಮಗಳನ್ನು ನೀವು ಪಾಲಿಸಲೇಬೇಕು. ವಾಸ್ತು ಶಾಸ್ತ್ರದ ಪ್ರಕಾರ ಹೊಸ ಕ್ಯಾಲೆಂಡರ್ ಅನ್ನು ಸರಿಯಾದ ದಿಕ್ಕಿನಲ್ಲಿ ಇರಿಸುವುದು ಬಹಳ ಮುಖ್ಯ. ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ಯಾವ ದಿಕ್ಕಿನಲ್ಲಿ ಕ್ಯಾಲೆಂಡರ್ ಇದ್ದರೆ ನಿಮಗೆ ಅದೃಷ್ಟ ತಂದುಕೊಡಬಹುದು ಗೊತ್ತಾ ನೋಡೋಣ ಬನ್ನಿ. ಇದನ್ನೂ ಓದಿ: Bank Account: ಈ ಬ್ಯಾಂಕ್ ಗಳಲ್ಲಿ ಹಣ ಇಟ್ಟರೆ ನಿಮಗೆ ಸಿಗುತ್ತದೆ ಶೇ.7.5 ಬಡ್ಡಿ; ಯಾವ ಬ್ಯಾಂಕ್ ಗೊತ್ತಾ? ಇಲ್ಲಿದೆ ಮಾಹಿತಿ

ಕ್ಯಾಲೆಂಡರ್ ಇಡುವುದಕ್ಕೂ ಮೊದಲು ನಿಯಮ ಪಾಲಿಸಿ

ವಾಸ್ತು ಶಾಸ್ತ್ರದ ಪ್ರಕಾರ, ಹಳೆಯ ಕ್ಯಾಲೆಂಡರ್ ಅನ್ನು ಮನೆಯಲ್ಲಿ ತೂಗು ಹಾಕುವುದು ಒಳ್ಳೆಯದಲ್ಲ. ಸಾಮಾನ್ಯವಾಗಿ ಜನ ಹೊಸ ಕ್ಯಾಲೆಂಡರ್ ಅನ್ನು ಹಳೆಯ ಕ್ಯಾಲೆಂಡರ್ ಮೇಲೆ ತೂಗು ಹಾಕುತ್ತಾರೆ ಹೀಗೆ ಮಾಡಿದರೆ ಜೀವನದಲ್ಲಿ ಪ್ರಗತಿಯ ಸಾಧ್ಯತೆ ಕಡಿಮೆ ಆಗುತ್ತದೆ.

ಹಳೆಯ ಕ್ಯಾಲೆಂಡರ್ ತೂಗು ಹಾಕುವುದು ಕೂಡ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಹೊಸ ವರ್ಷದಲ್ಲಿ ಹೊಸ ಕೆಲಸ ಮಾಡಿದರೆ ನಮ್ಮಲ್ಲಿ ಚೈತನ್ಯ ಕೂಡ ಉಂಟಾಗುತ್ತದೆ ಹಾಗಾಗಿ ಹಳೆಯ ಕ್ಯಾಲೆಂಡರ್ ಗೋಡೆಯಿಂದ ತೆಗೆದು ಹಾಕಬೇಕು. ಆನಂತರವಷ್ಟೇ ಹೊಸ ಕ್ಯಾಲೆಂಡರ್ ಅನ್ನು ಆ ಜಾಗದಲ್ಲಿ ಇಡಬೇಕು.

ಕ್ಯಾಲೆಂಡರ್ ದಿಕ್ಕಿನಲ್ಲಿ ಇರಲಿ

ಮನೆಯ ಉತ್ತರ ಪಶ್ಚಿಮ ಹಾಗೂ ಪೂರ್ವದ ಗೋಡೆಯ ಮೇಲೆ ಹೊಸ ವರ್ಷದ ಕ್ಯಾಲೆಂಡರ್ ತೂಗು ಹಾಕುವುದು ಅದೃಷ್ಟ ತಂದು ಕೊಡುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಹೊಸ ವರ್ಷದ ಕ್ಯಾಲೆಂಡರ್ ಅನ್ನು ಮನೆ ಕಛೇರಿ ಅಥವಾ ಅಂಗಡಿಯಲ್ಲಿ ಇಡುವುದಾದರೆ ಈ ಮೇಲೆ ಹೇಳಿದ ದಿಕ್ಕಿನಲ್ಲಿಯೇ ಇಡಿ ಇದು ಜೀವನದ ಪ್ರಗತಿಯ ದಿಕ್ಕು ಎಂದು ಪರಿಗಣಿಸಲ್ಪಟ್ಟಿದೆ. ಕ್ಯಾಲೆಂಡರ್ ಅನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು ಈ ರೀತಿ ಇಟ್ಟರೆ ಆರೋಗ್ಯದ ಸಮಸ್ಯೆ ನಿಮ್ಮನ್ನು ಕಾಡಬಹುದು. ಇದನ್ನೂ ಓದಿ:Mudra Yojana: ಸ್ವಂತ ಉದ್ದಿಮೆ ಶುರು ಮಾಡ್ಬೇಕಾ? ಬ್ಯುಸೆನೆಸ್ ಐಕಾನ್ ಆಗ್ಬೇಕಾ; ಸುಲಭ ಬಂಡವಾಳಕ್ಕೆ ಇಲ್ಲಿದೆ ಸೊಲ್ಯೂಶನ್; 1೦ ಲಕ್ಷ ರೂ. ವರೆಗೆ ಸಾಲ ಸಿಗುವ ಯೋಜನೆ ಯಾವುದು ಗೊತ್ತೇ?

ಇನ್ನು ಸೂರ್ಯೋದಯದ ದಿಕ್ಕಾದ ಪೂರ್ವದಲ್ಲಿ ಸೂರ್ಯನ ಚಿತ್ರವಿರುವ ಕ್ಯಾಲೆಂಡರ್ ಇರಿಸಿದರೆ  ಉತ್ತಮ. ಇದು ನಿಮ್ಮಲ್ಲಿ ನಮ್ಮ ಚೈತನ್ಯವನ್ನು ತುಂಬುತ್ತದೆ ಜೊತೆಗೆ ಮಗುವಿನ ಜೀವನದಲ್ಲಿಯೂ ಕೂಡ ಪ್ರಗತಿಯನ್ನು ಸಾಧಿಸಿಸಲು ಮಾರ್ಗ ತೋರಿಸುತ್ತದೆ.

ಕ್ಯಾಲೆಂಡರ್ ಹೀಗಿರಲಿ

ಇನ್ನು ಹೊಸ ವರ್ಷಕ್ಕೆ ಕಾಲಿಡುತ್ತಿರುವ ನೀವು ಉದಯಿಸುವ ಸೂರ್ಯ ಅಥವಾ ಸಂತೋಷವನ್ನು ಹಂಚುವಂತಹ ಚಿತ್ರ ಇರುವ ಕ್ಯಾಲೆಂಡರ್ ಅನ್ನು ಬಳಸಿ, ಅದರ ಬದಲು ಹಿಂಸಾತ್ಮಕ ಪ್ರಾಣಿ ಅಥವಾ ಕೆಟ್ಟದಾಗಿರುವ ಮುಖ ಇರುವಂತಹ ಚಿತ್ರಗಳನ್ನು ಹೊಂದಿರುವ ಕ್ಯಾಲೆಂಡರ್ ಹಾಕಬೇಡಿ ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಒಳ್ಳೆಯದು ಇದು ಮನೆಯಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.

ಆರ್ಥಿಕ ಸ್ಥಿತಿ ಸುಧಾರಿಸಲು ಕ್ಯಾಲೆಂಡರ್ ಅನ್ನು ಹೀಗೆ ಇಡಿ

ಇನ್ನು ಉತ್ತರ ದಿಕ್ಕನ್ನು ಕುಬೇರ ದಿಕ್ಕು ಎಂದೇ ಹೇಳಲಾಗುತ್ತದೆ ಹಾಗಾಗಿ ಹೊಸ ವರ್ಷದಲ್ಲಿ ಸಂತೋಷ ಸಮೃದ್ಧಿ ಹಾಗೂ ಸಂಪತ್ತಿಗಾಗಿ ಉತ್ತರ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕಿ. ಅದರಲ್ಲೂ ಮದುವೆಯ ಫೋಟೋ, ಕಾರಂಜಿ ಅಥವಾ ಯುವಜೀವನದ ಚಿತ್ರಗಳನ್ನು ಹೊಂದಿರುವ ಕ್ಯಾಲೆಂಡರ್ ಹಾಕಿದ್ರೆ ಉತ್ತಮ ಹಸಿರು ಹಾಗೂ ಬಿಳಿಯ ಬಣ್ಣದ ಕ್ಯಾಲೆಂಡರ್ ಅನ್ನು ಉತ್ತರ ದಿಕ್ಕಿನಲ್ಲಿ ಹಾಕಿದ್ರೆ ಸಮೃದ್ಧಿ ಮನೆಯಲ್ಲಿ ತುಂಬಿರುತ್ತದೆ.

ಎಲ್ಲಿ ಕ್ಯಾಲೆಂಡರ್ ಇಡಬಾರದು ಗೊತ್ತಾ?

ಇನ್ನು ಮನೆಯ ಮುಖ್ಯವಾಗಿ ಅಥವಾ ಬಾಗಿಲಿನ ಮುಂದೆ ಕ್ಯಾಲೆಂಡರ್ ಇಡಬೇಡಿ. ಮನೆ ದಕ್ಷಿಣಾಭಿಮುಖವಾಗಿದ್ದರೆ ಯಾವುದೇ ಕಾರಣಕ್ಕೂ ಮುಖ್ಯವಾಗಿನ ಮೇಲೆ ಕ್ಯಾಲೆಂಡರ್ ಇಳಿಸಬೇಡಿ ಕ್ಯಾಲೆಂಡರ್ ತಪ್ಪು ದಿಕ್ಕಿನಲ್ಲಿ ಇಟ್ಟರೆ ಪ್ರಗತಿಯು ಕೂಡ ಕುಂಠಿತವಾಗುತ್ತದೆ ಇದರಿಂದ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು ಹಾಗಾಗಿ ಸರಿಯಾದ ದಿಕ್ಕಿನಲ್ಲಿ ಹೊಸ ವರ್ಷದ ಕ್ಯಾಲೆಂಡರ್ ಹಾಕಿ ನಿಮ್ಮ ಪ್ರಗತಿಯನ್ನು ಸ್ವಾಗತಿಸಿ.

Comments are closed.