Kannada Astrology: ವರ್ಷದ ಆರಂಭದಲ್ಲಿಯೇ ಚಲಿಸುವ ಗ್ರಹಗಳು ವರ್ಷಪೂರ್ತಿ ಸಿಂಹ ರಾಶಿಯ ಮೇಲೆ ಎಂತಹ ಪರಿಣಾಮ ಬೀರಲಿವೆ ಗೊತ್ತಾ?

Kannada Astrology: 2023ರಲ್ಲಿ ವರ್ಷವಿಡಿ ಸಿಂಹ ರಾಶಿಯವರ ಭವಿಷ್ಯ ಹೇಗಿರಲಿದೆ ವೃತ್ತಿ ಜೀವನದಲ್ಲಿ ಯಾವ ರೀತಿಯ ಬದಲಾವಣೆಗಳು ಆಗಲಿ ನೋಡೋಣ ಸಿಂಹ ರಾಶಿ ಯ ಮೇಲೆ, ಗುರು ಶನಿ ರಾಹು ಕೇತು ಮೊದಲಾದ ಗ್ರಹಗಳ ಸ್ಥಾನ ಬದಲಾವಣೆ ಸಾಕಷ್ಟು ಪರಿಣಾಮ ಬೀರಲಿದೆ.

ವೃತ್ತಿ ಜೀವನ;

ವೃತ್ತಿ ಜೀವನದಲ್ಲಿ ಹೊಸ ವರ್ಷದ ಆರಂಭದಿಂದಲೇ ಸಿಂಹ ರಾಶಿಯವರಿಗೆ ಉತ್ತಮ ಫಲ ಸಿಗಬಹುದು. ಉನ್ನತ ಸ್ಥಾನಕ್ಕೆ ಇರುವ ಸಾಧ್ಯತೆ ಇದೆ ಕೆಲಸದಲ್ಲಿ ಸಾಕಷ್ಟು ಉತ್ತಮ ಬದಲಾವಣೆ ಇರಬಹುದು ಎಪ್ರಿಲ್ ತಿಂಗಳ ನಂತರ ಗುರು ಸಿಂಹ ರಾಶಿಯ 9ನೇ ಮನೆಯನ್ನು ಪ್ರವೇಶಿಸಿದಾಗ ಪ್ರತಿ ಜೀವನದಲ್ಲಿ ಅದೃಷ್ಟ ಕೈಹಿಡಿಯುತ್ತದೆ ವರ್ಷದ ಕೊನೆಯ ಆರು ತಿಂಗಳು ವ್ಯಾಪಾರಿಗಳಿಗೆ ಅನುಕೂಲಕರ ದಿನದಿಂದ ದಿನಕ್ಕೆ ವ್ಯಾಪಾರದ ಸ್ಥಿತಿ ಸುಧಾರಣೆ ಆಗುತ್ತದೆ. ಸಿಂಹ ರಾಶಿಯ ಏಳನೇ ಮನೆಯಲ್ಲಿ ಸೂರ್ಯ ಇರುವುದರಿಂದ ಪಾಲುದಾರಿಕೆ ವ್ಯಾಪಾರದಲ್ಲಿ ಸಮಸ್ಯೆ ಎದುರಾಗಬಹುದು.

ಆರ್ಥಿಕ ಪರಿಸ್ಥಿತಿ;

ಇನ್ನು ವರ್ಷದ ಹಣಕಾಸಿನ ಪರಿಸ್ಥಿತಿ ಬಗ್ಗೆ ನೋಡುವುದಾದರೆ ಮೊದಲ ಮೂರು ತಿಂಗಳು ಆರ್ಥಿಕ ಸಮಸ್ಯೆ ನಿಮ್ಮನ್ನ ಕಾಡಬಹುದು ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಬಳಿ ಇರುವಂತಹ ಹಣವನ್ನು ಖರ್ಚು ಮಾಡಿಕೊಳ್ಳಬೇಡಿ ಏಪ್ರಿಲ್ ತಿಂಗಳ ನಂತರ ಆರ್ಥಿಕ ಸ್ಥಿತಿ ಮಾಡಲು ಕೂಡ ಇದು ಸರಿಯಾದ ಸಮಯ ಮಾಡಿದ ಹೂಡಿಕೆಯಲ್ಲಿ ಲಾಭ ಸಿಗುತ್ತದೆ ಸಾಲವನ್ನು ತೆಗೆದುಕೊಳ್ಳುವ ಮೊದಲು ಯೋಚನೆ ಮಾಡಿ ಸಾಲ ತೆಗೆದುಕೊಳ್ಳುವ ಹಾಗೂ ಕೊಡುವ ವಿಚಾರದಲ್ಲಿ ರಿಸ್ಕ್ ಬೇಡ.

ವೈವಾಹಿಕ ಜೀವನ:

ಈ ವರ್ಷ ಪ್ರೀತಿಯ ವಿಷಯದಲ್ಲಿ ನಿಮಗೆ ಸಂತೋಷವನ್ನು ನೀಡುವಂತಹ ದಿನಗಳು ಬರಲಿವೆ ಸಂಗಾತಿಯ ಪ್ರೀತಿ ನಿಮಗೆ ಸಿಗುತ್ತದೆ ಒಂಟಿಯಾಗಿರುವವರು ಜಂಟಿ ಆಗುವ ಸಾಧ್ಯತೆ ಇದೆ ಬಹಳ ದಿನದಿಂದ ಪ್ರೀತಿಸುತ್ತಿರುವವರು ಈ ವರ್ಷ ಮದುವೆ ಆಗಬಹುದು. ಇನ್ನು 7ನೇ ಮನೆಯಲ್ಲಿ ಶನಿ ಇರುವುದರಿಂದ ವಿವಾಹಿತರ ಜೀವನದಲ್ಲಿ ಸಮಸ್ಯೆ ಉಂಟಾಗಬಹುದು ಸಂಗಾತಿಯ ವಿಷಯದಲ್ಲಿ ಅನಗತ್ಯ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ಸಂಗಾತಿಯ ಜೊತೆ ವಾದ ಮಾಡುವುದಕ್ಕಿಂತ ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಇನ್ನು 9ನೇ ಮನೆಯಲ್ಲಿ ಗುರು ಇದ್ದು ತಂದೆಯ ಮಾರ್ಗದರ್ಶನ ಪಡೆಯುತ್ತೀರಿ ಒಡಹುಟ್ಟಿದವರ ಬೆಂಬಲವು ಸಿಗುತ್ತದೆ. ಯಾವುದಾದರೂ ಸಂಬಂಧದಲ್ಲಿ ಬಿರುಕು ಉಂಟಾಗಿದ್ದರೆ ಅದನ್ನು ಬಲಪಡಿಸಲು ಈ ವರ್ಷ ಪ್ರಯತ್ನಿಸಿ. ಇದನ್ನೂ ಓದಿ:Astrology: ಹೊಸ ವರ್ಷ ಮೇಷ ರಾಶಿಯವರಿಗೆ ಹೊತ್ತು ತರಲಿದೆ ಭಾರಿ ಅದೃಷ್ಟ; ವೃತ್ತಿ, ವಿವಾಹ, ಹಣದ ಹರಿವು ಹೀಗಿರಲಿದೆ ಗೊತ್ತೇ?

ಆರೋಗ್ಯ;

2023ರಲ್ಲಿ ಸಿಂಹ ರಾಶಿಯವರ ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ ನಿಮ್ಮಲ್ಲಿ ಎಂದಿಗಿಂತ ಹೆಚ್ಚಿನ ಎನರ್ಜಿ ಇರುತ್ತದೆ ಸೋಮಾರಿತನವನ್ನು ಬಿಟ್ಟು ಕೆಲಸದಲ್ಲಿ ಮುಂದುವರಿಯುವುದು ಬಹಳ ಅವಶ್ಯಕ ಶನಿಯು ಲಗ್ನವನ್ನು ನೋಡುವುದರಿಂದ ಸೋಮಾರಿತನ ಹೆಚ್ಚಾಗಬಹುದು ಹಾಗಾಗಿ ಸೋಮಾರಿತನ ನಿಮ್ಮನ್ನು ಆಳಲು ಬಿಡಬೇಡಿ ಆಹಾರ ಮತ್ತು ಪಾನಿಯದ ಕೆಟ್ಟ ಅಭ್ಯಾಸಗಳು ಇದ್ದರೆ ಅವನ ಬಿಟ್ಟುಬಿಡಿ. ಇದನ್ನೂ ಓದಿ:Horoscope-2023:ಹೊಸ ವರ್ಷ ಆರಂಭವಾಗುತ್ತಿದ್ದ ಹಾಗೆ ಮಿಥುನ ರಾಶಿಯವರ ಜೀವನದಲ್ಲಿ ಆಗಲಿದೆ ಬಹುಮುಖ್ಯ ಬದಲಾವಣೆ! 2023ರ ಮಿಥುನ ರಾಶಿಯ ವಾರ್ಷಿಕ ಭವಿಷ್ಯ ಹೇಗಿದೆ ಗೊತ್ತೇ!

ಅದೃಷ್ಟ ಸಂಖ್ಯೆ ಮತ್ತು ಪರಿಹಾರ:

ಸಿಂಹ ರಾಶಿಯವರ ಅದೃಷ್ಟ ಸಂಖ್ಯೆ ಒಂದು ಮತ್ತು ಒಂಬತ್ತು ಇನ್ನು ಯಾವುದೇ ರೀತಿಯಾದಂತಹ ದೋಷಗಳು ಇದ್ರೆ ಭಾನುವಾರದಂದು ಉಪವಾಸ ಮಾಡಿದರೆ ಒಳ್ಳೆಯದು ಪ್ರತಿದಿನ ಸೂರ್ಯ ಮಂತ್ರವನ್ನು ಜಪಿಸಿ ತಪ್ಪದೇ ಸೂರ್ಯ ನಮಸ್ಕಾರ ಮಾಡಿ ಬುಧವಾರದ ದಿನ ನಿರ್ಗತಿಕರಿಗೆ ಏನನ್ನಾದರೂ ದಾನ ಮಾಡುವುದು ಒಳ್ಳೆಯದು ಅನಾರೋಗ್ಯ ನಿಮ್ಮನ್ನು ಕಾಡುತ್ತಿದ್ದರೆ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ.

Comments are closed.