Lifestyle: ರಾತ್ರಿ ಮಲಗೋದಕ್ಕಿಂತ ಮುಂಚೆ ಮೊಬೈಲ್ ಎಷ್ಟು ದೂರದಲ್ಲಿ ಇರಬೇಕು ಹಾಗೂ ಎಲ್ಲಿರಬೇಕು? ಇಲ್ಲದಿದ್ದರೆ ಅಪಾಯ ಕಟ್ಟ ಬುತ್ತಿ‌!

Lifestyle: ಇಂದಿನ ಕಾಲದಲ್ಲಿ ಜನರು ಉಸಿರಾಡುವುದಕ್ಕಿಂತ ಹೆಚ್ಚಾಗಿ ಮೊಬೈಲ್ ಬಳಕೆಯನ್ನು ಬಳಸಿಕೊಳ್ಳೋದೇ ಹೆಚ್ಚು ಎಂದು ಹೇಳಬಹುದಾಗಿದೆ. ಆದರೆ ಜನರು ರಾತ್ರಿ ಮಲಗುವ ಸಂದರ್ಭದಲ್ಲಿ ಕೂಡ ತಮ್ಮ ತಲೆದಿಂಬಿನ ಬದಿಗೆ ಮೊಬೈಲ್ ಅನ್ನು ಇಟ್ಟುಕೊಂಡು ಮಲಗುತ್ತಾರೆ. ತಜ್ಞರ ಪ್ರಕಾರ ಇದೊಂದು ಕೆಟ್ಟ ಅಭ್ಯಾಸವಾಗಿದೆ ಹಾಗೂ ಇದರಿಂದಾಗಿ ಆರೋಗ್ಯ ಸಮಸ್ಯೆ ಕೂಡ ಹೆಚ್ಚಾಗಿ ಕಂಡುಬರುತ್ತದೆ ಎಂಬುದಾಗಿ ಹೇಳುತ್ತಾರೆ. ಹಾಗಿದ್ರೆ ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ರಾತ್ರಿ ಮಲಗುವ ಸಂದರ್ಭದಲ್ಲಿ ನಿಮ್ಮ ಮೊಬೈಲ್ ಫೋನ್ ಅನ್ನು ನಿಮ್ಮ ತಲೆಯಿಂದ ಅಥವಾ ನಿಮ್ಮ ದೇಹದಿಂದ ಕನಿಷ್ಠ ಪಕ್ಷ ಮೂರರಿಂದ ನಾಲ್ಕು ಅಡಿ ದೂರ ಇಟ್ಟಿರ ಬೇಕಾಗಿರುತ್ತದೆ. ಇಲ್ಲವಾದಲ್ಲಿ ನೀವು ಈ ಕೆಳಗಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

  • ಮೊಬೈಲ್ ಫೋನ್ ಅನ್ನು ಹತ್ತಿರ ಇಟ್ಟುಕೊಳ್ಳುವುದರಿಂದಾಗಿ ನಿಮ್ಮ ನಿದ್ರಾ ಭಂಗ ಆಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಅದರ ನೋಟಿಫಿಕೇಶನ್ಗಳು ಕೂಡ ನಿಮ್ಮನ್ನು ಎಚ್ಚರಿಸುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ.
  • ಯಾವತ್ತು ಕೂಡ ಸ್ಮಾರ್ಟ್ ಫೋನ್ ಅನ್ನು ದಿಂಬಿನ ಕೆಳಗೆ ಇಡುವುದಕ್ಕೆ ಹೋಗಬೇಡಿ ಅದು ಶಾಖದಿಂದಾಗಿ ಸ್ಪೋ’ಟ ಗೊಳ್ಳುವಂತಹ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ ಎಂಬುದಾಗಿ ತಜ್ಞರು ಹೇಳುತ್ತಾರೆ.
  • ಸ್ಮಾರ್ಟ್ ಫೋನಿನ ಬಳಕೆಯನ್ನು ನೀವು ಇಡೀ ದಿನ ನಿರಂತರವಾಗಿ ಮಾಡಿರುತ್ತೀರಿ ಹಾಗೂ ರಾತ್ರಿ ಕೂಡ ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದರಿಂದಾಗಿ ಮನಸ್ಸಿಗೆ ವಿಶ್ರಾಂತಿ ಸಿಗದೇ ಮಾನಸಿಕ ಒತ್ತಡ ಹೆಚ್ಚಾಗುವಂತಹ ಸಾಧ್ಯತೆ ಇರುತ್ತದೆ. ಹೀಗಾಗಿ ದಿನಪೂರ್ತಿ ಮಾತ್ರವಲ್ಲದೆ ರಾತ್ರಿ ವಿಶ್ರಾಂತಿ ಪಡೆಯುವ ಸಂದರ್ಭದಲ್ಲಿ ಕೂಡ ನೀವು ಒತ್ತಡವನ್ನು ಅನುಭವಿಸಬೇಕಾಗಿ ಬರುತ್ತದೆ. ಹೀಗಾಗಿ ಇವುಗಳಿಂದ ತಪ್ಪಿಸಿಕೊಳ್ಳಲು ನೀವು ರಾತ್ರಿ ಆದಷ್ಟು ಮೊಬೈಲ್ ಅನ್ನು ನಿಮ್ಮಿಂದ ದೂರವೇ ಇಡಿ ಹಾಗೂ ದಿನದ ಸಂದರ್ಭದಲ್ಲಿ ಕೂಡ ಮೊಬೈಲ್ ಬಳಕೆ ಮಾಡುವಾಗ ಆದಷ್ಟು ಬ್ರೇಕ್ ನೀಡಿ.
  • ಇನ್ನು ಪದೇಪದೇ ಮೊಬೈಲ್ ಫೋನ್ ಬಳಕೆ ಮಾಡುವುದರಿಂದಾಗಿ ನಿಮ್ಮ ಆರೋಗ್ಯ ಸಮಸ್ಯೆ ಕೂಡ ಹೆಚ್ಚಾಗುತ್ತದೆ ಅನ್ನೋದನ್ನ ನೀವು ತಿಳಿದುಕೊಳ್ಳಬೇಕಾಗಿದೆ. ಪದೇಪದೇ ನೋಡುವುದರಿಂದ ಕಣ್ಣಿನ ಕಿರಿಕಿರಿ ತಲೆನೋವು ಹಾಗೂ ಅವುಗಳ ಶಬ್ದವನ್ನು ಕೇಳುವುದರಿಂದಾಗಿ ಕಿವಿಯ ಸಮಸ್ಯೆಯನ್ನು ಕೂಡ ನೀವು ಎದುರಿಸಬೇಕಾಗಿ ಬರುತ್ತದೆ. ರಾತ್ರಿ ಮೊಬೈಲ್ ಬಳಕೆ ಸಂದರ್ಭದಲ್ಲಿ ಕೂಡ ನೀವು ನಿದ್ರಾಹೀನತೆ ಸಮಸ್ಯೆಯನ್ನು ಎದುರಿಸಬೇಕಾಗಿ ಬರಬಹುದಾಗಿದೆ. ಹೀಗಾಗಿ ಮೊಬೈಲ್ ನಿಂದ ಎಷ್ಟು ಒಳ್ಳೆಯದು ಇದೆಯೋ ಅದೇ ರೀತಿಯಲ್ಲಿ ಆರೋಗ್ಯದ ವಿಚಾರದಲ್ಲಿ ಅದರಿಂದ ಅದಕ್ಕಿಂತ ಹೆಚ್ಚಿನ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಿ ಬರುತ್ತದೆ ಅನ್ನೋದನ್ನ ತಿಳಿದುಕೊಳ್ಳಿ.

ಹೀಗಾಗಿ ಪ್ರತಿದಿನದ ಮೊಬೈಲ್ ಬಳಕೆಯಲ್ಲಿ ಅದಕ್ಕಾಗಿ ಕೆಲವು ನಿರ್ದಿಷ್ಟ ಸಮಯವನ್ನು ಮಾತ್ರ ಬಳಸಿಕೊಳ್ಳಿ ಹಾಗೂ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಿ.

Comments are closed.