Kannada Bigg Boss: ಬಿಗ್ ಬಾಸ್ ಮನೆಯಲ್ಲಿ ಮಿಣಿ ಮಿಣಿ ಮೀನಾಕ್ಷಿಗೆ ವರನ ಹುಡುಕಾಟ, ಮದುವೆ ಆಗೋದಕ್ಕೆ ನೀವು ರೆಡಿನಾ?

Kannada Bigg bOss: ಮುಂಬಲ್ಲು (ಉಬ್ಬಿದ ಹಲ್ಲು) ವಿಚಿತ್ರ ಜಡೆ, ಇಳಕಲ್ ಸೀರೆ, ಹಣೆಗೆ ದೊಡ್ಡದಾದ ಬೊಟ್ಟು ಕೈ ತುಂಬಾ ಬಳೆ ಹಾಕಿಕೊಂಡು ಮಿಣ ಮಿಣ ಮೀನಾಕ್ಷಿ ವರನ ಹುಡುಕಲು ರೆಡಿಯಾಗಿದ್ದಾರೆ. ಈ ರೀತಿ ಮೀನಾಕ್ಷಿಯಾಗಿ ರೆಡಿಯಾಗಿದ್ದು ಬೇರೆ ಯಾರು ಅಲ್ಲ ಸದಾ ಸ್ಟೈಲಿಶ್ ಆಗಿ ಕಾಣುವ ದೀಪಿಕಾ ದಾಸ್. ಸ್ವತಃ ಮನೆ ಮಂದಿಗೆ ದೀಪಿಕಾ ದಾಸ್ ಹೌದಾ ಎಂದು ಅನುಮಾನ ಬರುವಷ್ಟರ ಮಟ್ಟಿಗೆ ದೀಪಿಕಾ ದಾಸ್ (Deepika Das) ಅವರು ರೆಡಿಯಾಗಿ ಅರುಣ್ ಸಾಗರ ಜೊತೆ ವರಾನ್ವೇಷಣೆಯಲ್ಲಿ ತೊಡಗಿದ್ದರು. ಇದನ್ನೂ ಓದಿ:Horoscope-2023:ಹೊಸ ವರ್ಷ ಆರಂಭವಾಗುತ್ತಿದ್ದ ಹಾಗೆ ಮಿಥುನ ರಾಶಿಯವರ ಜೀವನದಲ್ಲಿ ಆಗಲಿದೆ ಬಹುಮುಖ್ಯ ಬದಲಾವಣೆ! 2023ರ ಮಿಥುನ ರಾಶಿಯ ವಾರ್ಷಿಕ ಭವಿಷ್ಯ ಹೇಗಿದೆ ಗೊತ್ತೇ! 

ದೀಪಿಕಾ ದಾಸ್ ಅವರು ಈ ರೀತಿ ರೆಡಿಯಾಗಿದ್ದಷ್ಟೇ ಅಲ್ಲದೆ ಆ ವೇಷಕ್ಕೆ ತಕ್ಕ ಹಾಗೆ ಭಾಷೆಯಲ್ಲಿ ಮಾತನಾಡುವ ಮೂಲಕ ಜನರನ್ನು ಅಚ್ಚರಿಗೆ ತಳ್ಳಿದ್ದಾರೆ. ನನ್ನ ತಂಗಿ ಮಿಣಿ ಮಿಣಿ ಮೀನಾಕ್ಷಿಗೆ ವರಾನ್ವೇಷಣೆ ಮಾಡುತ್ತಿದ್ದೇನೆ ಎಂದು ವೃದ್ಧನ ವೇಷ ತೊಟ್ಟಿದ್ದ ಅರುಣ್ ಸಾಗರ್ (Arun Sagar) ಹೇಳಿದ್ದಾರೆ. ರೂಪೇಶ್ ಶೆಟ್ಟಿ (Roopesh Shetty), ರೂಪೇಶ್ ರಾಜಣ್ಣ, ಆರ್ಯವರ್ಧನ್ ಅವರಲ್ಲಿ ಯಾರು ಬೆಸ್ಟ್ ಎಂದು ಚರ್ಚೆ ನಡೆದಿದೆ. ಹೀಗೆ ಮದುವೆ ಮಾತುಕತೆಯ ಸಂದರ್ಭ ಇಟ್ಟುಕೊಂಡು ದೀಪಿಕಾ ದಾಸ್ ಹಾಗೂ ಅರುಣ ಸಾಗರ್ ಅವರು ಟಾಸ್ಕ್ ಕೊಡುವ ಮಧ್ಯೆ ಒಂದು ಸ್ಕಿಟ್ ಮಾಡಿ ಮನೆ ಮಂದಿಯ ಜೊತೆ ಜನರನ್ನು ರಂಜಿಸಿದ್ದಾರೆ.

ಧಾರವಾಡದಿಂದ ಬಂದ ಮಿಣಿ ಮಿಣಿ ಮೀನಾಕ್ಷಿಗೆ ಮದುವೆ ಆಗೇಬೇಕು. ಮೀನಾಕ್ಷಿ ಮನೆಗೆ ಬರುವವರಿಗೆ ಮುಂಬಲ್ಲು ಇರುವಂತೆ ಅರುಣ ಸಾಗರ್ ನೋಡಿಕೊಳ್ಳುತ್ತಾರಂತೆ. ಒಂದು ಕ್ಷಣ ದೀಪಿಕಾ ಅವರ್ ವೇಷ ನೋಡಿ ಯಾರು ಅಂತ ಬಿಗ್ ಬಾಸ್ ಮನೆಮಂದಿಗೆ ಆಶ್ಚರ್ಯವಾಗಿದೆ. ಈ ವೇಳೆ ರಾಕೇಶ್ ಅಡಿಗ ಮಾತನಾಡಿ ಇವರು ವೈಲ್ಡ್ ಕಾರ್ಡ್ ಸ್ಪರ್ಧಿ ಎನ್ನೊಣವೇ ಎಂದು ಕೇಳಿದ್ದಾರೆ. ಈ ಸ್ಕಿಟ್ನಲ್ಲಿ ದೊಳ್ಳು ಹೊಟ್ಟೆ ಇಟ್ಟುಕೊಂಡು ರೂಪೇಶ್ ಶೆಟ್ಟಿ ಅವರು ಮಂಗಳೂರು ಭಾಷೆಯ ಶೈಲಿಯಲ್ಲಿ ಮೀನಾಕ್ಷಿಯನ್ನು ಮೆಚ್ಚಿಸಲು ನೋಡಿದ್ದಾರೆ. ಇದನ್ನೂ ಓದಿ: Astrology; ಮನೆಯಲ್ಲಿ ಯಾವ ಹೊತ್ತಿನಲ್ಲಿ ಪೂಜೆ ಮಾಡಬೇಕು ಗೊತ್ತಾ? ಈ ಸಮಯ ಮೀರಿ ಪೂಜೆ ಮಾಡಿದರೆ ಖಂಡಿತ ಅದು ಒಳ್ಳೆಯದಲ್ಲ ನೆನಪಿಡಿ!

ಇನ್ನು ಆರ್ಯವರ್ಧನ್ ಕತ್ತಿನಲ್ಲಿರುವ ಬಂಗಾರದ ಚೈನನ್ನು ನೋಡಿ ಮೀನಾಕ್ಷಿ ಆ ಚೈನ್ ಕೊಟ್ಟರೆ ಲಗ್ನ ಆಗುತ್ತೇನೆ ಎಂದು ಹೇಳುತ್ತಾರೆ. ಆಗ ಆರ್ಯವರ್ಧನ್ ಕತ್ತಿನಲ್ಲಿರುವ ಚೈನ್ ಕೊಡುತ್ತೆನೆ… ಜೊತೆಗೆ ಬಾಡಿಯಲ್ಲಿರುವ ಮನಸ್ಸನ್ನು ಕೊಡುತ್ತೇನೆ ಎಂದು ಡೈಲಾಗ್ ಹೊಡೆದಿದ್ದಾರೆ. ನಂತರ ರೂಪೇಶ್ ಶೆಟ್ಟಿಯವರನ್ನು ನೋಡಿ ಇಂವ ತುಂಬಾ ಬೆಳ್ಳಗಿದ್ದಾನೆ. . . ಇಂವ ನಂಗೆ ಬೇಕು ಎಂದು ಮೀನಾಕ್ಷಿ ಹೇಳುತ್ತಾಳೆ. ಆಗ ಮೀನಾಕ್ಷಿ ಆಂಟಿ ಎಂದು ರೂಪೇಶ್ ಶೆಟ್ಟಿ ಕರೆಯುತ್ತಾನೆ. ಆಗ ರೂಪೇಶ್ ಶೆಟ್ಟಿ ಮೀನಾಕ್ಷಿ ನಡುವೆ ತಮಾಷೆಯ ವಾಗ್ವಾದ ನಡೆಯುತ್ತದೆ. ನೋಡುಗರಿಂತೂ ಇದು ಸಖತ್ ಮನರಂಜನೆ ನೀಡಿದ್ದು ಸುಳ್ಳಲ್ಲ.

Comments are closed.