Modi’s Property: ಹತ್ತು ವರ್ಷಗಳಿಂದ ಭಾರತದ ಪ್ರೈಮ್ ಮಿನಿಸ್ಟರ್ ಆಗಿರುವ ಮೋದಿರವರ ಇಲ್ಲಿವರ್ಗೂ ಮಾಡಿರೋ ಆಸ್ತಿಯ ಮೌಲ್ಯ ಎಷ್ಟು ಗೊತ್ತಾ?

Modi’s Property: ಈಗಾಗಲೇ ನಮ್ಮ ಭಾರತ ದೇಶದಲ್ಲಿ ಬೇರೆ ಬೇರೆ ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಇದೇ ಸಂದರ್ಭದಲ್ಲಿ ನಮ್ಮ ಭಾರತ ದೇಶದಲ್ಲಿ ಇರುವಂತಹ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತಹ ಪ್ರತಿಯೊಬ್ಬ ಅಭ್ಯರ್ಥಿ ಕೂಡ ತಮ್ಮ ಬಳಿ ಎಷ್ಟು ಆಸ್ತಿ ಇರುತ್ತದೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಫಿಡವಿತ್ ನಲ್ಲಿ ಬಹಿರಂಗಪಡಿಸುತ್ತಾರೆ. ಇದೇ ಸಂದರ್ಭದಲ್ಲಿ ನಮ್ಮ ಮಾನ್ಯ ಪ್ರಧಾನ ಮಂತ್ರಿಗಳಾಗಿರುವಂತಹ ನರೇಂದ್ರ ಮೋದಿ ರವರ ಆಸ್ತಿ ಎಷ್ಟು ಎನ್ನುವುದರ ಬಗ್ಗೆ ಕೂಡ ಅಫೀದವಿತ್ ನಲ್ಲಿ ಮಾಹಿತಿ ಬಹಿರಂಗವಾಗಿದೆ.

ಪ್ರಧಾನಿ ಮೋದಿ ರವರ ಬಳಿ ಇರುವ ಆಸ್ತಿ ಎಷ್ಟು ಗೊತ್ತಾ?

ತಮ್ಮ ಚುನಾವಣೆಯ ಅಫಿದವಿತ್ ನಲ್ಲಿ ನರೇಂದ್ರ ಮೋದಿ ಅವರು ತಿಳಿಸಿರುವ ಪ್ರಕಾರ ಅವರ ಬಳಿ ಯಾವುದೇ ರೀತಿಯ ಕಾರ್ ಹಾಗೂ ಸ್ವಂತವಾದ ಮನೆ ಕೂಡ ಇಲ್ಲ ಎಂಬುದಾಗಿ ತಿಳಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ರವರ ಕೈನಲ್ಲಿ 52,920 ಹಣ ಇದೆ. ಗಾಂಧಿನಗರದ ಎಸ್ ಬಿ ಐ ಶಾಖೆಯಲ್ಲಿ 73,304 ವಾರಣಾಸಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಅಕೌಂಟ್ ನಲ್ಲಿ ರೂ.7000 ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಲ್ಲಿ 2.86 ಕೋಟಿ ರೂಪಾಯಿಗಳ ಫಿಕ್ಸ್ಡ್ ಡೆಪಾಸಿಟ್ ಹಣವನ್ನು ಇಟ್ಟಿದ್ದಾರೆ.

ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ನಲ್ಲಿ ಮೋದಿ ರವರು 9.12 ಲಕ್ಷ ರೂಪಾಯಿಗಳು, 2.67 ಲಕ್ಷ ಮೌಲ್ಯದ ನಾಲ್ಕು ಚಿನ್ನದ ಉಂಗುರ ಮೋದಿ ರವರ ಬಳಿ ಇದೆ. 3.33 ಲಕ್ಷ ರೂಪಾಯಿಗಳ ಟಿಡಿಎಸ್ ಶುಲ್ಕ 2023 ಹಾಗೂ 24ನೇ ಸಾಲಿಗೆ ಕಡಿತಗೊಂಡಿದೆ. ಅಂದರೆ ನರೇಂದ್ರ ಮೋದಿ ಅವರ ಬಳಿ 3.02 ಕೋಟಿ ರೂಪಾಯಿಗಳ ಚರಾಸ್ತಿ ಇದೆ.

ನರೇಂದ್ರ ಮೋದಿ ಅವರ ಬಳಿ ಯಾವುದೇ ರೀತಿಯ ಸ್ಥಿರಾಸ್ತಿ ಇಲ್ಲ ಎಂಬುದಾಗಿ ತಿಳಿದು ಬಂದಿದೆ. ಊರಿನಲ್ಲಿ ಸ್ವಂತವಾದ ಜಮೀನು ಮನೆ ಅಥವಾ ಯಾವುದೇ ರೀತಿ ಆಸ್ತಿಗಳನ್ನು ನರೇಂದ್ರ ಮೋದಿ ಅವರು ಹೊಂದಿಲ್ಲ ಎನ್ನುವುದಾಗಿ ಅವರು ಸಲ್ಲಿಸಿರುವಂತಹ ಅಫಿದವಿತ್ ನಲ್ಲಿ ಖಾತ್ರಿ ಯಾಗಿದೆ. ಪ್ರಧಾನ ಮಂತ್ರಿ ಕಛೇರಿಯಿಂದ ಬರುವಂತಹ ಸಂಬಳವೇ ತನ್ನ ಆದಾಯದ ಪ್ರಮುಖ ಮೂಲ ಎಂಬುದಾಗಿ ಮೋದಿ ರವರು ಘೋಷಿಸಿದ್ದಾರೆ. 2022 ಹಾಗೂ 23ನೇ ಸಾಲಿನಲ್ಲಿ ನರೇಂದ್ರ ಮೋದಿ ರವರಿಗೆ 23.56 ಲಕ್ಷ ರೂಪಾಯಿಗಳ ಆದಾಯ ಬಂದಿದೆ ಎಂಬುದಾಗಿ ಹೇಳಿಕೊಂಡಿದ್ದಾರೆ.

ಗುಜರಾತ್ ವಿಶ್ವವಿದ್ಯಾಲಯದಲ್ಲಿ ಎಮ್ ಎ ಪದವಿಯನ್ನು ಪಡೆದುಕೊಂಡಿರುವ ಬಗ್ಗೆ ಕೂಡ ಉಲ್ಲೇಖಿಸಿರುವಂತಹ ಅವರು ತಮ್ಮ ಪತ್ನಿ ಜಶೋಧ ಬೆನ್ ರವರ ಆಸ್ತಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂಬುದನ್ನು ಹೇಳಿಕೊಂಡಿದ್ದಾರೆ. ತಮ್ಮ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳು ಕೂಡ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಆಸ್ತಿಯಲ್ಲಿ ಸ್ವಲ್ಪಮಟ್ಟಿಗೆ ಏರಿಕೆಯಾಗಿದೆ ಎಂದು ಹೇಳಬಹುದಾಗಿದೆ.

Comments are closed.