Pavitra Lokesh: ಎಷ್ಟೇ ಮಾಡಿದರೂ ಮತ್ತೆ ಅದೇ ಕಷ್ಟಕ್ಕೆ ಸಿಲುಕಿದ ಪವಿತ್ರ: ತಂದೆಯಂತೆ ಆಗಬಾರದು ಎಂದುಕೊಂಡಿದ್ದರೆ ಕೊನೆಗೆ ಆಗಿದ್ದೇನು ಗೊತ್ತೇ?

Pavitra Lokesh: ಕನ್ನಡ (Kannada) ಹಾಗೂ ತೆಲುಗು ಸಿನಿಮಾ ಇಂಡಸ್ಟ್ರಿ (Telugu Film Industry) ಯಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವ, ಸಿನಿಮಾದಲ್ಲಿ ಅತ್ಯುತ್ತಮ ನಟಿ ಎನಿಸಿಕೊಂಡಿರುವ ಪವಿತ್ರ ಲೋಕೇಶ್ ಅವರ ಜೀವನದಲ್ಲಿ ಹೀಗೆಲ್ಲ ಆಗುತ್ತೆ ಅಂತ ಯಾರು ಊಹಿಸಿರಲಿಲ್ಲ. ಈಗಂತೂ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ ಪವಿತ್ರ ಲೋಕೇಶ್ ಅವರ ಪರಿಸ್ಥಿತಿ. ಇತ್ತೀಚೆಗೆ ಪವಿತ್ರ ಲೋಕೇಶ್ ವಯಕ್ತಿಕ ವಿಚಾರದಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ನಟ ನರೇಶ ಬಾಬು ಅವರ ಜೊತೆಗೆ ಈಗಾಗಲೇ ಪವಿತ್ರ ಲೋಕೇಶ್ ಹೆಸರು ತಳುಕುಹಾಕಿಕೊಂಡಿದೆ. ಇತ್ತ್ಚಿಗಷ್ತೇ ಇಬ್ಬರು ಚುಂಜಿಸುತ್ತಿರುವ ವಿಡಿಯೋ ಒಂದನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ನರೇಶ ಬಾಬು (Naresh Babu) ಪೋಸ್ಟ್ ಮಾಡಿದ್ರು. ಈ ಮೂಲಕ ತಾವು ಮದುವೆ ಆಗುತ್ತಿದ್ದೇವೆ ಎಂದು ಅನೌನ್ಸ್ ಮಾಡಿದ್ದರು.

ಸ್ವಲ್ಪ ಹಿಂದಕ್ಕೆ ಹೋಗಿ ನೋಡಿದರೆ ಪವಿತ್ರ ಲೋಕೇಶ್ ಚಿಕ್ಕ ವಯಸ್ಸಿನಿಂದಲೇ ನಟನೆಯನ್ನು ಆರಂಭಿಸಿದವರು ಅವರು ನಿಜವಾಗಿ ಜೀವನದಲ್ಲಿ ಏನಾಗಬೇಕು ಅಂದುಕೊಂಡಿದ್ದರು ಬದಲಾಗಿ ಹೋಯಿತು. ಪವಿತ್ರ ಲೋಕೇಶ್ ಅವರು 16ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟರು. ಇಲ್ಲಿಯವರೆಗೂ ಕನ್ನಡದಲ್ಲಿ ಸುಮಾರು 150ಕ್ಕೂ ಹೆಚ್ಚಿನ ಚಿತ್ರದಲ್ಲಿ ನಟಿಸಿದ್ದಾರೆ. 2006ರಲ್ಲಿ ತೆರೆ ಕಂಡ ನಾಯಿ ನೆರಳು ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಎಂದು  ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ.

ಪವಿತ್ರ ಲೋಕೇಶ್ ಅವರ ಪರಿವಾರದಲ್ಲಿ ನಟನೆಯ ಘೀಳು ಇತ್ತು. ಅವರ ತಂದೆ ಲೋಕೇಶ್ ಖ್ಯಾತ ನಟರು ಇವರ ಕಿರಿಯ ಸಹೋದರ ಆದಿ ಲೋಕೇಶ್ ಕೂಡ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಪವಿತ್ರ ಲೋಕೇಶ್ 9ನೇ ತರಗತಿಯಲ್ಲಿ ಇರುವ ತಂದೆಯನ್ನು ಕಳೆದುಕೊಂಡರು. ಓದಿನಲ್ಲಿ ಬಹಳ ಮುಂದಿದ್ದ ಪವಿತ್ರ ಲೋಕೇಶ್ ಐಪಿಎಸ್ ಅಧಿಕಾರಿ ಆಗಬೇಕು ಎನ್ನುವ ಕನಸು ಕಂಡಿದ್ದರು. ಆದರೆ ತಂದೆಯ ಸಾವಿನ ನಂತರ ಈ ಕನಸನ್ನು ಮೂಟೆ ಕಟ್ಟಿ ಎಸೆದರು ಪವಿತ್ರ ಲೋಕೇಶ್.

ಯಾಕಂದ್ರೆ ತಂದೆಯ ಮರಣದ ನಂತರ ತಾಯಿಗೆ ಸಹಾಯ ಮಾಡುವ ಅಗತ್ಯತೆ ಇತ್ತು ತಮ್ಮನನ್ನು ಸಾಕಬೇಕಿತ್ತು ಹಾಗಾಗಿ ಕುಟುಂಬದ ಜವಾಬ್ದಾರಿಯನ್ನ ಬಹಳ ಚಿಕ್ಕ ವಯಸ್ಸಿನಲ್ಲಿ ವಹಿಸಿಕೊಂಡವರು ಪವಿತ್ರ ಲೋಕೇಶ್. ಮೈಸೂರಿನ ಬಿ ಆರ್ ಮಹಾರಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಕೂಡ ಪಡೆದಿದ್ದಾರೆ ಪವಿತ್ರ ಲೋಕೇಶ್. ಇಷ್ಟಾಗಿಯೂ ನಾಗರಿಕ ಸೇವೆಗಳ ಪರೀಕ್ಷೆಯನ್ನು ಎದುರಿಸಿದ್ದರೂ ಪವಿತ್ರ ಆದರೆ ಆ ಪರೀಕ್ಷೆಯಲ್ಲಿ ವಿಫಲರಾದ ಕಾರಣ ತಕ್ಷಣವೇ ನಟನೆಯನ್ನು ಆರಂಭಿಸಿದರು. ತಂದೆಯಂತೆ ನಟನ ಲೋಕಕ್ಕೆ ಬರಬಾರದು ಎಂದುಕೊಂಡಿದ್ದ ಪವಿತ್ರ ಲೋಕೇಶ್ ಅನಿವಾರ್ಯ ಕಾರಣದಿಂದ ಬಣ್ಣ ಹಚ್ಚಲೇಬೇಕಾಯಿತು.

ಪವಿತ್ರ ಲೋಕೇಶ್ ಅವರು ಮೊದಲು ಸಾಫ್ಟ್ವೇರ್ ಇಂಜಿನಿಯರ್ ಒಬ್ಬರನ್ನ ಮದುವೆಯಾಗಿದ್ದರು ಅವರಿಂದ ವಿಚ್ಛೇದನ ಪಡೆದು ಕನ್ನಡದ ಖ್ಯಾತ ನಟ ಸುಚೇಂದ್ರ ಪ್ರಸಾದ್ ಅವರ ಜೊತೆಗೆ  ಲಿವ್ ಇನ್ ನಲ್ಲಿ ಇದ್ದರು. 2018 ರಿಂದ ಅವರಿಂದಲೂ ದೂರಾಗಿದ್ದಾರೆ. ಪವಿತ್ರ ಲೋಕೇಶ್ ಅವರಿಗೆ ಇಬ್ಬರು ಮಕ್ಕಳು ಇದೀಗ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಮೊಲ ಸಹೋದರ ನರೇಶ್ ಬಾಬು ಅವರೊಂದಿಗೆ ಪವಿತ್ರ ಲೋಕೇಶ್ ಅವರ ಹೆಸರು ತಳುಕು ಹಾಕಿಕೊಂಡಿದ್ದು ಇವರಿಬ್ಬರೂ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಇದೆ.

Comments are closed.