PMAYG:ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಬೆಳಬೆಳಗ್ಗೆನೇ ಬಂತು ನೋಡಿ ಗುಡ್ ನ್ಯೂಸ್; ಸಿಗಲಿದೆ ಇನ್ನಷ್ಟು ಮನೆ!

PMAYG: ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವಂತಹ ಕುಟುಂಬಗಳಿಗೆ ಮನೆಯನ್ನು ಕಟ್ಟಿಸಿ ಕೊಡುವಂತಹ ಕೆಲಸವನ್ನು ಕಳೆದು ಸಾಕಷ್ಟು ವರ್ಷಗಳಿಂದಲೂ ಕೂಡ ಮಾಡಿಕೊಂಡು ಬಂದಿದ್ದು ಆವಾಸ್ ಯೋಜನೆ ಗ್ರಾಮೀಣ ಭಾಗದ ವಸತಿ ಕೊರತೆ ಸಮಸ್ಯೆನ ಈಗ ಸರ್ಕಾರ ನಿವಾರಿಸುವುದಕ್ಕೆ ಹೊರಟಿದೆ. ಹೌದು ತಿಳಿದು ಬಂದಿರುವ ಮಾಹಿತಿಯ ಪ್ರಕಾರ 10 ಲಕ್ಷ ಫಲಾನುಭವಿಗಳಿಗೆ ಮೊದಲ ಕಂತಿನ ಹಣವನ್ನು ಅವರ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳೋಣ.

ಸಪ್ಟೆಂಬರ್ 17ರಂದು ಒಡಿಶಾಗೆ ಪ್ರಧಾನಿ ನರೇಂದ್ರ ಮೋದಿಜಿ ಅವರು ಬಂದಿದ್ದಾಗ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಎರಡನೇ ಆವೃತ್ತಿಯನ್ನು ಚಾಲನೆಗೊಳಿಸಿದ್ದಾರೆ. ಬೇರೆ ಬೇರೆ ರಾಜ್ಯಗಳ 10 ಲಕ್ಷ ಫಲಾನುಭವಿಗಳ ಮಂಜೂರಾತಿ ಪತ್ರಗಳನ್ನ ಪ್ರಧಾನಿ ನರೇಂದ್ರ ಮೋದಿ ರವರು ವಿತರಿಸಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಯೋಜನೆ ಅಡಿಯಲ್ಲಿ 3180 ಕೋಟಿ ರೂಪಾಯಿಗಳ ಹಣವನ್ನ ವಿತರಣೆ ಮಾಡಲಿದ್ದಾರೆ. ಮೊದಲ ಕಂತಿನ ಈ ಹಣ ಡಿಜಿಟಲ್ ವರ್ಗಾವಣೆ ಆಗಲಿದೆ. ಇನ್ನು ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಲಾಂಚ್ ಮಾಡಲಾಗಿರುವಂತಹ ಅಧಿಕೃತ ಅಪ್ಲಿಕೇಶನ್ ನಲ್ಲಿ ಕೂಡ ಅರ್ಹವಾಗಿರುವಂತಹ ಫಲಾನುಭವಿಗಳ ಪಟ್ಟಿಯನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ಡಾಕ್ಯುಮೆಂಟ್ಸ್ ಗಳು!

  • ಆಧಾರ್ ಕಾರ್ಡ್ ಮತ್ತು ಆಧಾರ್ ನಂಬರ್
  • ಜಾಬ್ ಕಾರ್ಡ್
  • ಬ್ಯಾಂಕ್ ಅಕೌಂಟ್ ಡೀಟೇಲ್ಸ್
  • ನಿಮ್ಮ ಬಳಿ ಪಕ್ಕಾ ಮನೆ ಇಲ್ಲ ಎನ್ನುವುದಕ್ಕೆ ದೃಢೀಕರಣದ ರೀತಿಯಲ್ಲಿ ಇರಬೇಕಾಗಿರುವಂತಹ ಅಫಿದವಿತ್

ಅರ್ಜಿ ಸಲ್ಲಿಸುವ ವಿಧಾನ!

  • ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಧಿಕೃತ ವೆಬ್ ಸೈಟ್ ಗೆ ನೀವು ಭೇಟಿ ನೀಡಬೇಕಾಗಿರುತ್ತದೆ
  • ಆಧಾರ್ ಸಂಖ್ಯೆಯನ್ನು ನಮೂದಿಸಿ ಹಾಗೂ ನೋಂದಣಿ ಮಾಡಲು ಇರುವಂತಹ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗಿರುತ್ತದೆ.
  • ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ಕೂಡ ಸರಿಯಾದ ರೀತಿಯಲ್ಲಿ ತುಂಬಬೇಕಾಗಿದೆ.
  • ಮುಂದಿನ ಭಾಗದಲ್ಲಿ ನಿಮ್ಮ ಹೆಸರು ಹಾಗೂ ಬ್ಯಾಂಕಿನ ಡೀಟೇಲ್ಸ್ ಅನ್ನು ಕೂಡ ಭರ್ತಿ ಮಾಡಬೇಕಾಗಿರುತ್ತದೆ.
  • ನಂತರ ನಿಮ್ಮ ಮನ್ರೆಗ ಹಾಗೂ ಸ್ವಚ್ಛ ಭಾರತ್ ಮಿಷನ್ ನ ನಂಬರ್ ಅನು ಸಬ್ಮಿಟ್ ಮಾಡಬೇಕಾಗಿರುತ್ತದೆ ಹಾಗೂ ಸಾಲವನ್ನು ಪಡೆದುಕೊಳ್ಳುವ ಆಯ್ಕೆಯನ್ನು ಹೌದು ಎಂಬುದಾಗಿ ಆಯ್ಕೆ ಮಾಡಿ ಮುಂದಿನ ಪ್ರಕ್ರಿಯೆಗಳನ್ನು ಕಚೇರಿಯಿಂದ ಮುಂದುವರಿಸಲಾಗುತ್ತದೆ.

Comments are closed.