Post Office: ಪೋಸ್ಟ್ ಆಫೀಸ್ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಕೈ ತುಂಬಾ ಲಾಭದ ಜೊತೆಗೆ, ಟ್ಯಾಕ್ಸ್ ನಲ್ಲಿ ಕೂಡ ರಿಯಾಯಿತಿ ಸಿಗುತ್ತೆ!

Post Office: ಭಾರತದಲ್ಲಿ ಹಣವನ್ನು ಹೂಡಿಕೆ ಮಾಡುವುದಕ್ಕೆ ಕೇವಲ ಬ್ಯಾಂಕುಗಳು ಅಥವಾ ಎಲ್ಐಸಿ ಸಂಸ್ಥೆಗಳು ಮಾತ್ರವಲ್ಲದೆ ಅವುಗಳಿಗಿಂತ ಹೆಚ್ಚಾಗಿ ಸುರಕ್ಷಿತವಾಗಿ ಹಾಗೂ ಹೆಚ್ಚಿನ ಲಾಭವನ್ನು ನೀಡುವಂತಹ ಸಂಸ್ಥೆ ಅಂದ್ರೆ ಅದು ಪೋಸ್ಟ್ ಆಫೀಸ್. ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರುವುದು ಪೋಸ್ಟಲ್ ಲೈಫ್ ಇನ್ಶೂರೆನ್ಸ್ ಯೋಜನೆಯ ಬಗ್ಗೆ. ಈ ಯೋಜನೆಯನ್ನು ಭಾರತದಲ್ಲಿ 1884ರಲ್ಲಿ ಬ್ರಿಟಿಷರು ಪ್ರಾರಂಭ ಮಾಡುತ್ತಾರೆ. ಈ ಯೋಜನೆ ಅಡಿಯಲ್ಲಿ 6 ಯೋಜನೆಗಳು ಜಾರಿಯಲ್ಲಿ ಇದ್ದರೂ ಕೂಡ ಇದರ ಬಗ್ಗೆ ನಮ್ಮ ಭಾರತೀಯರಿಗೆ ಹೆಚ್ಚಾಗಿ ತಿಳಿದಿಲ್ಲ. ಇದು ನಿಮಗೆ 50 ಲಕ್ಷ ರೂಪಾಯಿಗಳವರೆಗು ಕೂಡ ಜೀವ ವಿಮೆಯನ್ನು ನೀಡುತ್ತದೆ.

ಈ ಯೋಜನೆಯ ಪ್ರಯೋಜನಗಳೇನು ಗೊತ್ತಾ?

ನೀವು ಪಾವತಿ ಮಾಡುವಂತಹ ಪ್ರೀಮಿಯಂ ಮೇಲೆ ಇನ್ಕಮ್ ಟ್ಯಾಕ್ಸ್ ಆಕ್ಟ್ 80 ಸಿ ಪ್ರಕಾರ ಟ್ಯಾಕ್ಸ್ ರಿಯಾಯಿತಿಯನ್ನು ಪಡೆದುಕೊಳ್ಳುತ್ತೀರಿ. ಇನ್ನು ಪ್ರೀಮಿಯಂ ಪಾವತಿಯ ವಿಚಾರಕ್ಕೆ ಬಂದ್ರೆ ನೀವು ತಿಂಗಳಿಗೆ, ಮೂರು ತಿಂಗಳಿಗೆ, ಆರು ತಿಂಗಳಿಗೆ ಅಥವಾ ವರ್ಷಕ್ಕೆ ಒಮ್ಮೆ ಪ್ರೀಮಿಯಂ ಪಾವತಿ ಮಾಡಬಹುದಾಗಿದೆ. 19 ರಿಂದ 55 ವರ್ಷಗಳ ನಡುವಿನ ವ್ಯಕ್ತಿಗಳು ಈ ಪಾಲಿಸಿಯನ್ನ ಖರೀದಿ ಮಾಡಬಹುದಾಗಿದೆ. ಬೋನಸ್ ಜೊತೆಗೆ ಪಾಲಿಸಿದಾರರು ಕನಿಷ್ಠ 20,000 ಇಂದ ಮ್ಯಾಕ್ಸಿಮಮ್ 50 ಲಕ್ಷ ರೂಪಾಯಿಗಳವರೆಗೆ ವಿಮೆಯ ಮೊತ್ತವನ್ನು ಪಡೆದುಕೊಳ್ಳುವಂತಹ ಅವಕಾಶ ಹೊಂದಿದ್ದಾರೆ. ಒಂದು ವೇಳೆ ಪಾಲಿಸಿ ಮಾಡಿರುವಂತಹ ವ್ಯಕ್ತಿ ಮರಣ ಹೊಂದಿದರೆ ಅವರ ಉತ್ತರಾಧಿಕಾರಿ ಅಥವಾ ಅವರು ಯಾರ ಹೆಸರನ್ನ ನಾಮಿನಿಯಲ್ಲಿ ಇಟ್ಟಿರುತ್ತಾರೋ ಅವರಿಗೆ ಸಿಗುತ್ತೆ.

ಇನ್ನು ನಾಲ್ಕು ವರ್ಷಗಳ ಕಾಲ ಈ ಪಾಲಿಸಿಯಲ್ಲಿ ಹಣವನ್ನ ಪಾವತಿ ಮಾಡಿದ ನಂತರ ನೀವು ಇದರ ಮೇಲೆ ಸಾಲವನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ಕೂಡ ಹೊಂದಿದ್ದೀರಿ. ಇನ್ನು ಈ ಪಾಲಿಸಿಯನ್ನ ಐದು ವರ್ಷಗಳ ಪಾವತಿಯ ನಂತರ ನೀವು ಸರೆಂಡರ್ ಮಾಡುವಂತಹ ಅವಕಾಶವನ್ನು ಕೂಡ ಹೊಂದಿದ್ದೀರಿ. ಇಲ್ಲಿ ಅನುಪಾತದ ರೀತಿಯಲ್ಲಿ ನಿಮಗೆ ಸಿಗಬೇಕಾಗಿರುವಂತಹ ಬೋನಸ್ ಜೊತೆಗೆ ನೀವು ಪಾವತಿ ಮಾಡಿರುವಂತಹ ಪ್ರೀಮಿಯಂ ಅನ್ನು ನಿಮಗೆ ನೀಡಲಾಗುತ್ತದೆ. ಐದು ವರ್ಷಕ್ಕಿಂತ ಮುಂಚೆ ನೀವು ಒಂದು ವೇಳೆ ನಿಮ್ಮ ಪಾಲಿಸಿಯನ್ನು ಸರಂಡರ್ ಮಾಡಿದರೆ ಅದರ ಮೇಲೆ ಯಾವುದೇ ರೀತಿಯಲ್ಲಿ ಕೂಡ ನಿಮಗೆ ಬೋನಸ್ ಸಿಗೋದಿಲ್ಲ ಅನ್ನೋದನ್ನ ಹೀಗಾಗಿ ನಿಮಗೆ ಪಾವತಿ ಮಾಡಲು ಸಾಧ್ಯವಿಲ್ಲ ಅಂತ ಆದರೆ ಐದು ವರ್ಷಗಳ ನಂತರವೇ ನೀವು ಹಣವನ್ನ ಪಡೆದುಕೊಳ್ಳುವುದಕ್ಕಾಗಿ ಪಾಲಿಸಿಯನ್ನು ಸರಂಡರ್ ಮಾಡಬೇಕಾಗಿರುತ್ತದೆ. ಇವಿಷ್ಟು ಲಾಭಗಳನ್ನು ನೀವು ಈ ಪೋಸ್ಟ್ ಆಫೀಸ್ನ ಜೀವ ವಿಮೆಯ ಯೋಜನೆಯಲ್ಲಿ ಪಡೆದುಕೊಳ್ಳಬಹುದಾಗಿದೆ.

Comments are closed.