Technology: 3,500ರೂ. ಕೊಟ್ರೆ ವಾಷಿಂಗ್ ಮಷೀನ್ ನೇರವಾಗಿ ನಿಮ್ಮ ಮನೆ ಬಾಗಿಲಿಗೆ; ಅದೂ ಮೇಡ್ ಇನ್ ಕರ್ನಾಟಕ! ಆರ್ಡರ್ ಮಾಡೋದು ಹೇಗೆ ಗೊತ್ತಾ?

Technology: ಈಗ ಉದ್ಯೋಗಾವಕಾಶಗಳು ಸಾಕಷ್ಟು ಹೆಚ್ಚಾಗಿವೆ. ತಾವೇ ಉದ್ಯಮಿ ಆಗುತ್ತೇವೆ, ತಮ್ಮ ಬಳಿ ಒಳ್ಳೆಯ ಐಡಿಯಾಗಳು ಇವೆ ಎಂದರೆ ಅದಕ್ಕೆ ಬ್ಯಾಂಕ್ಗಳು ಸಹ ಸಾಲವನ್ನು ನೀಡುತ್ತವೆ. ಹಾಗಾಗಿ ಈಗ ಪ್ರತಿಯೊಬ್ಬರು ಒಂದೆಲ್ಲ ಒಂದು ಉದ್ಯೋಗದಲ್ಲಿ ತೊಡಗಿಕೊಂಡಿರುತ್ತಾರೆ. ಇದರಿಂದ ಬಂದ ಆದಾಯದಿಂದ ಮನೆಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಖರೀದಿ ಮಾಡುತ್ತಾರೆ. ಒಂದು ಕಾಲದಲ್ಲಿ ಕೇವಲ ಶ್ರೀಮಂತರ ಸ್ವತ್ತಾಗಿದ್ದ ಪ್ರಿಜ್, ವಾಷಿಂಗ್ ಮಷೀನ್ ಇಂದು ಎಲ್ಲರ ಮನೆಯಲ್ಲೂ ಇವೆ. ಇದಕ್ಕೆ ಕಾರಣ ಮಾರುಕಟ್ಟೆಯಲ್ಲಿ ಇರುವ ಸ್ಪರ್ಧೆಯೂ ಆಗಿದೆ.
ಮಾರುಕಟ್ಟೆಯಲ್ಲಿ ಇರುವ ಸ್ಪರ್ಧೆಯ ಕಾರಣಕ್ಕಾಗಿ ಹಲವು ಕಂಪನಿಗಳು ಕಡಿಮೆ ದರಕ್ಕೆ ವಾಷಿಂಗ್ ಮಷೀನ್ ಮಾರಾಟ ಮಾಡುತ್ತಿವೆ. ಇವು ನೋಡಲು ದೊಡ್ಡದಾಗಿವೆ. ಇದನ್ನು ಇಡಲು ಮನೆಯಲ್ಲಿ ಜಾಗವೂ ಬೇಕಾಗುತ್ತದೆ. ಆದರೆ ನಮ್ಮ ಕರ್ನಾಟಕದವರೇ ಈಗ ಒಂದು ವಾಷಿಂಗ್ ಮಷೀನ್ ತಯಾರು ಮಾಡಿದ್ದಾರೆ. ಇದು ಬಹಳ ಸಣ್ಣದಾಗಿದೆ. ಸುಲಭವಾಗಿ ಸಾಗಿಸಬಹುದು. ಮತ್ತು ಇದರ ಬೆಲೆಯೂ ಎಲ್ಲರ ಕೈಗೆಟುಕುವಂತಿದೆ.

ಏಮ್ ಸ್ಕ್ವೇರ್ ಕಾರ್ಪೋರೇಶನ್ ಫ್ಯಾಕ್ಟರಿ
ಹೌದು, ತುಮಕೂರಿನ ಏಮ್ ಸ್ಕ್ವೇರ್ ಕಾರ್ಪೋರೇಶನ್ ಫ್ಯಾಕ್ಟರಿ ಔಟ್ಲೆಟ್ ನವರು ಕಡಿಮೆ ಬೆಲೆಗೆ ಗೃಹೋಪಯೋಗಿ ಸಾಮಗ್ರಿಗಳನ್ನು ತಯಾರು ಮಾಡಿ ಮಾರಾಟ ಮಾಡುತ್ತಿದ್ದಾರೆ. ಗೃಹೋಪಯೋಗಿ ಸಾಮಗ್ರಿಗಳಲ್ಲಿ ಒಂದಾದ ವಾಷಿಂಗ್ ಮಷೀನ್ಗಳ ಬಗ್ಗೆಯೂ ನಾವು ತಿಳಿದುಕೊಳ್ಳಬೇಕು. ಈ ವಾಷಿಂಗ್ ಮಷೀನ್ ನನ್ನು ನೀವು 3499 ರೂ.ಗೆ ಖರೀದಿ ಮಾಡಬಹುದು. ಇದಕ್ಕೆ ಆರು ತಿಂಗಳು ಗ್ಯಾರಂಟಿ ಹಾಗೂ ವಾರಂಟಿ ಸಹ ನೀಡುತ್ತಿದ್ದಾರೆ.
ತಮ್ಮ ಎಲ್ಲ ಗ್ರಾಹಕರಿಗೆ ಕಡಿಮೆ ದರದಲ್ಲಿ ಎಲ್ಲ ರೀತಿಯ ಗೃಹೋಪಯೋಗಿ ಸಾಮಗ್ರಿಗಳು ಸಿಗಬೇಕು ಎನ್ನುವ ಉದ್ದೇಶದಿಂದ ಈ ಏಮ್ ಸ್ಕ್ವೇರ್ ಕಾರ್ಪೋರೇಶನ್ ಫ್ಯಾಕ್ಟರಿ ಸ್ಥಾಪನೆ ಮಾಡಿದ್ದಾರೆ. ಈ ಫ್ಯಾಕ್ಟರಿಯಲ್ಲಿ ಗೀಸರ್, ವಾಷಿಂಗ್ ಮಷೀನ್, ಮಿಕ್ಸರ್, ಗ್ರ್ಯಾಂಡರ್ ಎಲ್ಲ ಸಾಮಗ್ರಿಗಳು ಕೈಗೆಟುವ ದರದಲ್ಲಿ ಸಿಗುತ್ತದೆ.

ಇವರು ತಯಾರು ಮಾಡಿರುವ ವಾಷಿಂಗ್ ಮಷೀನ್ ಕ್ವಾಲೀಟಿ ತುಂಬಾನೇ ಚೆನ್ನಾಗಿದೆ. ಮತ್ತು ಗುಣಮಟ್ಟದ ಪ್ಲಾಸ್ಟಿಕ್ ಬಳಸಿ ಇದನ್ನು ತಯಾರು ಮಾಡಲಾಗಿದೆ. ಇದರ ಒಂದು ವಿಶೇಷವೆಂದರೆ ಇದು ಕಡಿಮೆ ಭಾರವನ್ನು ಹೊಂದಿದೆ. ಮಕ್ಕಳು ಸಹ ಇದನ್ನು ಎತ್ತಿಡಬಹುದು. ಅಷ್ಟು ಹಗುರವಾಗಿದೆ. ಇದು ನೋಡಲು ಬಕೇಟ್ ತರಹವೇ ಕಾಣಿಸುತ್ತದೆ. ಇದನ್ನು ನೀವು ಮ್ಯಾನ್ಯುವಲ್ ಆಗಿ ಉಪಯೋಗಿಸಬೇಕು. ಹಾಗಾಗಿ ಮನೆಯಲ್ಲಿ ನಳ ಇರದಿದ್ದರೂ ನೀವು ಕೊಡದಿಂದ ನೀರು ತಂದು ಹಾಕಿಕೊಳ್ಳಬಹುದು. ಇದರಲ್ಲಿ ನಿಮಗೆ 6.5 ಕೆ. ಕಾಗೂ 1೦ ಕೆ.ಜಿಯ ವಾಷಿಂಗ್ ಮಷೀನ್ ಲಭ್ಯವಿದೆ.

ಈ ವಾಷಿಂಗ್ ಮಷೀನ್ ವಿಶೇಷತೆಗಳು
1) ೬.೫ ಕೆ.ಜಿಯ ವಾಷಿಂಗ್ ಮಷೀನ್ ಯುಪಿಎಸ್ನಲ್ಲಿ ಕೂಡ ಕೆಲಸ ಮಾಡುತ್ತದೆ.
2) ಬಟ್ಟೆಯನ್ನು ತೊಳೆಯುವ ವೇಳೆ ಬಟ್ಟೆಯಲ್ಲಿರುವ ಕಾಯಿನ್ ಅಥವಾ ಪಿನ್ಗಳು ಸಿಕ್ಕಿ ಹಾಳಾಗುವ ಸಾಧ್ಯತೆ ಇರುತ್ತದೆ. ಆದರೆ ಈ ಮಷೀನ್ನಲ್ಲಿ ಅಂತಹ ಯಾವುದೇ ಸಾಧ್ಯತೆಗಳು ಇಲ್ಲ.
3) ಈ ವಾಷಿಂಗ್ ಮಷೀನ್ಗೆ ಯಾವುದೇ ಕಂಪನಿಯ ವಾಷಿಂಗ್ ಪೌಡರ್ ಸಹ ನೀವು ಬಳಕೆ ಮಾಡಬಹುದು.
4) ೧೫ ನಿಮಿಷದಲ್ಲಿ ನಿಮ್ಮ ಬಟ್ಟೆಯನ್ನು ತೊಳೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.

Comments are closed.