Radhika Kumaraswamy:ಒಂದು ಮಗುವಿನ ತಾಯಿಯಾದರೂ ಕಾಲೇಜು ಹುಡುಗಿಯಂತೆ ಕಾಣಿಸುವ ರಾಧಿಕಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ??

Radhika Kumaraswamy:ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಟಾಪ್ ನಾಯಕ ನಟಿಯರ ಲಿಸ್ಟಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಅಂದ್ರೆ ಅದು ರಾಧಿಕಾ ಕುಮಾರಸ್ವಾಮಿ. 2002ರಲ್ಲಿ ನಿನಗಾಗಿ ಎನ್ನುವಂತಹ ಸಿನಿಮಾದಲ್ಲಿ ನಟಿಸುವ ಮೂಲಕ ಮೊದಲ ಬಾರಿಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ನಾಯಕ ನಟಿಯಾಗಿದ್ದ ರಾಧಿಕಾ ಕುಮಾರಸ್ವಾಮಿ 2012ರಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಮ್ಯಾ ಕಾಂಬಿನೇಷನ್ ನಲ್ಲಿ ಮೂಡಿಬಂದಂತಹ ಲಕ್ಕಿ ಸಿನಿಮಾದ ಮೂಲಕ ನಿರ್ಮಾಪಕಿಯಾಗಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಾರೆ.

ತಾವು ಒಂಬತ್ತನೇ ತರಗತಿಯಲ್ಲಿ ಇರಬೇಕಾದ್ರೆ ನೀಲ ಮೇಘ ಶಾಮ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಆದರೆ ಇದಕ್ಕಿಂತಲೂ ಮೊದಲನೇದಾಗಿ ಬಿಡುಗಡೆಯಾಗಿದ್ದು ನಿನಗಾಗಿ ಸಿನಿಮಾ. ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ರಾಧಿಕಾ ಕುಮಾರಸ್ವಾಮಿ ಶಿವರಾಜಕುಮಾರ್ ಅವರಿಗೆ ತವರಿಗೆ ಬಾ ತಂಗಿ ಸಿನಿಮಾದಲ್ಲಿ ತಂಗಿಯಾಗಿ ಕಾಣಿಸಿಕೊಳ್ಳುವ ಮೂಲಕ ಪ್ರತಿಯೊಬ್ಬ ಕನ್ನಡ ಪ್ರೇಕ್ಷಕರು ಕೂಡ ರಾಧಿಕಾ ಕುಮಾರಸ್ವಾಮಿ ಅವರನ್ನು ಶಿವಣ್ಣ ಅವರ ಸ್ವಂತ ತಂಗಿ ಎನ್ನುವ ರೀತಿಯಲ್ಲಿ ಒಪ್ಪಿಕೊಳ್ಳುತ್ತಾರೆ. ತಮ್ಮ ನಟನೆಗಾಗಿ ಸ್ಟೇಟ್ ಅವಾರ್ಡ್ ಅನ್ನು ಕೂಡ ರಾಧಿಕಾ ಕುಮಾರಸ್ವಾಮಿ ಪಡೆದುಕೊಂಡಿದ್ದಾರೆ. ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಕೂಡ ನಟಿಸಿರುವಂತಹ ಇವರು ಕೇವಲ ನಿರ್ಮಾಪಕರಾಗಿ ಮಾತ್ರವಲ್ಲದೆ ದರ್ಶನ್ ಹಾಗೂ ಉಪೇಂದ್ರ ನಟನೆಯ ಸೂಪರ್ ಹಿಟ್ ಸಿನಿಮಾ ಅನಾಥರು ಸಿನಿಮಾದ ವಿತರಕರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.

ಅತ್ಯಂತ ಕಡಿಮೆ ವಯಸ್ಸಿನಲ್ಲಿ ಇರಬೇಕಾದರೆ ರಾಧಿಕಾ ಕುಮಾರಸ್ವಾಮಿ ಅವರು 2000 ನೇ ಇಸ್ವಿಯಲ್ಲಿ ರತನ್ ಕುಮಾರ್ ಎನ್ನುವವರನ್ನ ಕಟೀಲು ದುರ್ಗಾಪರಮೇಶ್ವರಿಯ ದೇವಸ್ಥಾನದಲ್ಲಿ ಮದುವೆ ಆಗ್ತಾರೆ. ಮೂಲಗಳು ತಿಳಿಸುವ ರೀತಿಯಲ್ಲಿ ಕೆಲವೇ ವರ್ಷಗಳಲ್ಲಿ ರತನ್ ಕುಮಾರ್ ಹೃದಯದ ಸಮಸ್ಯೆಯಿಂದಾಗಿ ಮರಣ ಹೊಂದುತ್ತಾರೆ ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿಯೇ ಚಿಕ್ಕ ವಯಸ್ಸಿನಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಮದುವೆಯಾಗಿ ನಂತರ ಅವರನ್ನು ಕಳೆದುಕೊಳ್ಳುತ್ತಾರೆ.

ರಾಧಿಕಾ ಕುಮಾರಸ್ವಾಮಿ ಅವರಿಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಶಮಿಕ ಎನ್ನುವಂತಹ ಮಗಳಿದ್ದಾರೆ. ಶಮಿಕಾ ಅವರ ಹೆಸರಿನಲ್ಲಿ ಶಮಿಕ ಎಂಟರ್ಪ್ರೈಸಸ್ ಎನ್ನುವಂತಹ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಕೂಡ ರಾಧಿಕಾ ಕುಮಾರಸ್ವಾಮಿ ಅವರು ಹೊಂದಿದ್ದು ಒಬ್ಬ ಮಗಳಿದ್ದರೂ ಕೂಡ 25 ರ ಹರೆಯದ ನಟಿಯಂತೆ ಕಾಣಿಸಿಕೊಳ್ಳುವಂತಹ ರಾಧಿಕಾ ಕುಮಾರಸ್ವಾಮಿ ಅವರ ನಿಜವಾದ ವಯಸ್ಸು 37 ವರ್ಷ ಆಗಿದೆ. ಅವರನ್ನು ನೋಡಿದ್ರೆ ಖಂಡಿತವಾಗಿ ನೀವು ಅವರ ವಯಸ್ಸನ್ನ ಕಂಡುಹಿಡಿಯುವುದು ಅನುಮಾನವೇ ಸರಿ ಎಂದು ಹೇಳಬಹುದು.

Comments are closed.